More

    ಕಂಗೆಡಿಸಿದೆ ಜಾಗತಿಕ ತಾಪಮಾನ

    ಹುಣಸೂರು: ಉತ್ತಮ ಭವಿಷ್ಯಕ್ಕಾಗಿ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಯುವ ಸಮಾಜದ ಮೇಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ರಂಜನ್ ಅಭಿಪ್ರಾಯಪಟ್ಟರು.


    ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು. ಅರಣ್ಯ ಸಂಪತ್ತನ್ನು ಮನುಷ್ಯ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾನೆ.

    ದೇಶದಲ್ಲಿ ಅರಣ್ಯಗಳನ್ನು ರಕ್ಷಿತಾರಣ್ಯ, ಸಂರಕ್ಷಿತ ಪ್ರದೇಶವೆಂದು ಘೋಷಿಸಿದ ನಂತರ ಅರಣ್ಯ ಮತ್ತು ವನ್ಯಜೀವಿ ಸಂಕುಲ ಉಳಿದುಕೊಂಡಿದೆ. ಆದರೂ ನಮ್ಮ ಪ್ರಯತ್ನ ಇನ್ನೂ ಸಾಗಬೇಕಿದೆ. ಏರುತ್ತಿರುವ ಜನಸಂಖ್ಯೆ, ಜಾಗತಿಕ ತಾಪಮಾನದಲ್ಲಿನ ಏರಿಳಿತ ನಮ್ಮೆಲ್ಲರನ್ನೂ ಕಂಗೆಡಿಸಿದೆ. ಅರಣ್ಯ ಸಂಪತ್ತನ್ನು ಉಳಿಸಿ ಬೆಳಸಿಕೊಂಡಲ್ಲಿ ಮಾತ್ರ ಮನುಕುಲ ಉಳಿಯಲು ಸಾಧ್ಯ. ಹಾಗಾಗಿ ಯುವಸಮೂಹ ಎಚ್ಚೆತ್ತುಕೊಳ್ಳುವುದು ಅವಶ್ಯಕವೆಂದರು.


    ಪ್ರಾಂಶುಪಾಲ ನಾಗರಾಜೇ ಅರಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸಿಎಫ್ ಅನುಷಾ, ಆರ್‌ಎಫ್‌ಒ ನಂದಕುಮಾರ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಟಿ.ಚಂದ್ರಶೇಖರ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts