More

    ಔಟ್‌ಲುಕ್-ಐ ಕೇರ್ ರ‍್ಯಾಂಕಿಂಗ್‌ನಲ್ಲಿ ಬಿಮ್ಸಗೆ ಉತ್ತಮ ಸ್ಥಾನ

    ಬಾಗಲಕೋಟೆ: ನಗರದ ಬಿವಿವಿ ಸಂಘದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಮ್ಸ್) ಪ್ರಸಕ್ತ ವರ್ಷ ಔಟ್‌ಲುಕ್‌ಮ್ಯಾಕ್ಜಿನ್ ನಡೆಸಿದ ಐ ಕೇರ್ ಸರ್ವೆಯಲ್ಲಿ ರಾಷ್ಟ್ರ ಮಟ್ಟದ ಉತ್ತಮ ಬಿ-ಸ್ಕೂಲ್ ರ‍್ಯಾಂಕಿಂಗ್ ವಿಭಾಗದಲ್ಲಿ ಬಿಮ್ಸ್ ಸಂಸ್ಥೆಯು ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದೆ.

    ಈ ಒಂದು ಸರ್ವೆಯು ವಿವಿಧ ಮಾನದಂಡಗಳಾದ ಅಧ್ಯಾಪಕ ವಿದ್ಯಾರ್ಥಿ ಅನುಪಾತ, ಸಂಶೋಧನೆ, ಉದ್ಯೋಗ, ಆಧ್ಯಾಪಕರ ಗುಣಮಟ್ಟ, ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯ ತುಲನೆಗಳ ಆಧಾರದ ಮೇಲೆ ನಡೆಸಲಾಗಿದ್ದು, ಭಾರತದಲ್ಲಿರುವ ಅಂದಾಜು ೪,೦೦೦ ಖಾಸಗಿ ಬಿ-ಸ್ಕೂಲ್‌ಗಳಲ್ಲಿ ಬಿಮ್ಸ್ ಸಂಸ್ಥೆಯು ೧೯೭ನೇ ಸ್ಥಾನವನ್ನು ಪಡೆದುಕೊಂಡಿದ್ದು, ದಕ್ಷಿಣ ಭಾರತ ವಲಯದಲ್ಲಿರುವ ಖಾಸಗಿ ಬಿ-ಸ್ಕೂಲ್‌ಗಳ ಪೈಕಿ ೬೧ನೇ ಸ್ಥಾನ ಪಡೆದಿದ್ದು ಮತ್ತು ಉತ್ತಮ ಖಾಸಗಿ ಸಂಯೋಜಿತ ಬಿ-ಸ್ಕೂಲ್‌ಗಳ ಪೈಕಿ ಬಿಮ್ಸ್ ಸಂಸ್ಥೆಯು ೧೦೦ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಪ್ರಕಾಶ್ ಕೆ ವಡವಡಗಿ ತಿಳಿಸಿದ್ದಾರೆ.

    ಸಂಸ್ಥೆಯ ಸಾಧನೆಗೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ ಚರಂತಿಮಠ, ಸಂಘದ ಗೌರವ ಕಾರ್ಯದರ್ಶಿ ಎಂ.ಎನ್. ಅಥಣಿ, ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಎಸ್ ಸೂಳಿಭಾವಿ ಹರ್ಷ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts