More

    ಓವರ್‌ಹೆಡ್ ಟ್ಯಾಂಕ್‌ಗಳಿಗಿಲ್ಲ ಸ್ವಚ್ಛತೆ ಭಾಗ್ಯ!

    ಬೆಳಗಾವಿ: ಹಳ್ಳಿಗಳಲ್ಲಿನ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಓವರ್‌ಹೆಡ್ ಟ್ಯಾಂಕ್‌ಗಳು ಸ್ವಚ್ಛತೆ, ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ.

    ಗ್ರಾಮೀಣ ಪ್ರದೇಶಗಳಲ್ಲಿನ ಮನೆ ಮನೆಗಳಿಗೆ ನಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಓವರ್‌ಹೆಡ್ ಟ್ಯಾಂಕ್‌ಗಳ ನಿರ್ವಹಣೆಗಾಗಿ ಸರ್ಕಾರವು ವಾರ್ಷಿಕ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ. ಆದರೆ, ಗ್ರಾಮೀಣ ಭಾಗಗಳಲ್ಲಿ ಬಹುತೇಕ ಓವರ್‌ಹೆಡ್ ಟ್ಯಾಂಕ್‌ಗಳ ಒಳಗೆ ಸ್ವಚ್ಛತೆ ಇಲ್ಲದೆ ನಾರುತ್ತಿವೆ. ಆದರೆ, ಗ್ರಾಪಂ ಸಿಬ್ಬಂದಿ ಈ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡುತ್ತಿಲ್ಲ.

    ಸದ್ಯ ಜಿಲ್ಲೆಯ 488 ಗ್ರಾಪಂಗಳ ವ್ಯಾಪ್ತಿಯಲ್ಲಿ ಸುಮಾರು 2450 ಓವರ್‌ಹೆಡ್ ಟ್ಯಾಂಕ್‌ಗಳು ಕಾರ್ಯನಿರ್ವಹಿ ಸುತ್ತಿವೆ. ಇವುಗಳಲ್ಲಿ ಬಹುತೇಕ ಟ್ಯಾಂಕ್ ಗಳು ನಿರ್ಮಾಣ ಗೊಂಡು 10ರಿಂದ 12 ವರ್ಷ ಪೂರ್ಣಗೊಂಡಿದೆ. ಆದರೆ, ಇಲ್ಲಿಯವರೆಗೆ ಟ್ಯಾಂಕ್‌ಗಳ ಒಳಭಾಗ ಸ್ವಚ್ಛತೆ ಮಾಡಿಲ್ಲ. ಎರಡು ವರ್ಷಕ್ಕೊಮ್ಮೆ ಟ್ಯಾಂಕ್‌ನ ಹೊರಭಾಗಕ್ಕೆ ಸುಣ್ಣಬಣ್ಣ ಹಚ್ಚಿ ಸುಂದರಗೊಳಿಸುತ್ತಿದ್ದಾರೆ. ಆದರೆ, ಒಳಗಡೆ ಸ್ವಚ್ಛತೆ ಮಾಡುತ್ತಿಲ್ಲ. ಹಾಗಾಗಿ ಟ್ಯಾಂಕ್‌ಗಳಲ್ಲಿ ನೀರು ಗಬ್ಬೆದ್ದು ನಾರುತ್ತಿದೆ. ಈ ಕುರಿತು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.

    ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಓವರ್‌ಹೆಡ್ ಟ್ಯಾಂಕ್ ಸ್ವಚ್ಛತೆ ಇಲ್ಲದಿರುವುದು ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ಸಮರ್ಪಕ ನಿರ್ವಹಣೆ ಮಾಡದೆ ನೀರು ಪೂರೈಸಿದ್ದರಿಂದ ಆ ಗ್ರಾಮಸ್ಥರಿಗೆ ವಾಂತಿ-ಭೇದಿ ಆಗುತ್ತಿದೆ ಎನ್ನಲಾಗಿದೆ. ಅಶುದ್ಧವಾದ ಮತ್ತು ವಾಸನೆ ಬರುತ್ತಿರುವ ಓವರ್‌ಹೆಡ್ ಟ್ಯಾಂಕರ್ ನೀರನ್ನು ಕೆಲ ಗ್ರಾಮಸ್ಥರು ಬಳಸುತ್ತಿಲ್ಲ. ಕೂಡಲೇ ಜಿಲ್ಲಾಡಳಿತ, ಜಿಪಂ ಓವರ್‌ಹೆಡ್ ಟ್ಯಾಂಕರ್‌ಗಳ ಸ್ವಚ್ಛತೆ ಮತ್ತು ಹಾಳಾಗಿರುವ ನೀರಿನ ಪೈಪ್‌ಲೈನ್ ದುರಸ್ತಿಗೆ ಕ್ರಮ ವಹಿಸಬೇಕು ಎಂದು ವಿವಿಧ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts