More

    ಒಳಮೀಸಲಾತಿ ಜಾರಿ ಹಿಂದಿವೆ ಕಾನೂನಾತ್ಮಕ ಸಂಗತಿ

    ಶಿವಮೊಗ್ಗ: ಒಳಮೀಸಲಾತಿ ಜಾರಿ ಹಿಂದೆ ಕಾನೂನಾತ್ಮಕ ಸಂಗತಿಗಳಿವೆ. ಇದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್​ನಲ್ಲಿ ಆದೇಶವಾಗಬೇಕು. ಇಲ್ಲವೇ ಸಂಸತ್​ನಲ್ಲಿ ತೀರ್ವನವಾಗಬೇಕು. ಯಾರಿಗೂ ಅನ್ಯಾಯವಾಗದಂತೆ ಈ ವಿಷಯ ತೀರ್ಮಾನ ಆಗಬೇಕೆಂಬುದು ಬಿಜೆಪಿ ಆಶಯ ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

    ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಇನ್ನೂ ಸ್ಪಷ್ಟ ಆದೇಶ ನೀಡಿಲ್ಲ. ಕಡೇ ಪಕ್ಷ ಸಂಸತ್​ನಲ್ಲಿ ಈ ಬಗ್ಗೆ ಚರ್ಚೆ ನಡೆದು ಕೇಂದ್ರ ಸರ್ಕಾರ ಸ್ಪಷ್ಟ ತೀರ್ವನಕ್ಕೆ ಬಂದರೆ ನಿಖರ ಚಿತ್ರಣ ಸಿಗುತ್ತದೆ. ಒಳಮೀಸಲಾತಿಗೆ ಸಂಬಂಧಿಸಿ ಈಗಾಗಲೇ ಬಿಜೆಪಿ ಎಲ್ಲರ ಅಭಿಪ್ರಾಯ ಆಲಿಸುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಹಿಂದಿನ ಸರ್ಕಾರಗಳು ಜಾತಿಗಣತಿ ಜಾರಿಗೊಳಿಸದೇ ಈಗ ಯಥಾವತ್ತಾಗಿ ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ರಾಜಕಾರಣವಲ್ಲದೆ ಮತ್ತೇನೂ ಅಲ್ಲ. ಈಗ ಒಳಮೀಸಲಾತಿ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ. ಇದು ರಾಜಕಾರಣದ ವಿಷಯವಲ್ಲ, ಕಾನೂನಿಗೆ ಸಂಬಂಧಿಸಿದ್ದು ಎಂದರು.

    ದಲಿತರಿಗಿದ್ದ ಸಂದೇಹ ದೂರ: ಇಷ್ಟು ವರ್ಷ ಕಾಂಗ್ರೆಸ್ ಮತ್ತಿತರ ಪಕ್ಷಗಳು ಬಿಜೆಪಿ ದಲಿತ ವಿರೋಧಿ ಎಂಬಂತೆ ಬಿಂಬಿಸಿದ್ದವು. ಈಗ ಕಾಂಗ್ರೆಸ್​ನ ಸುಳ್ಳಿನ ಕಂತೆ ದಲಿತರಿಗೆ ತಿಳಿದಿದೆ. ಬಿಜೆಪಿ ಬಗ್ಗೆ ಇದ್ದ ದಲಿತರ ಸಂದೇಹಗಳು ದೂರವಾಗಿವೆ. ಇದರ ಫಲಿತಾಂಶ ಮುಂದಿನ ಚುನಾವಣೆಗಳಲ್ಲಿ ಸ್ಪಷ್ಟವಾಗಿ ತಿಳಿಯಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

    ಎಸ್ಸಿ ಮೋರ್ಚಾ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಗಿದೆ. ಈ ಅವಧಿಯಲ್ಲಿ 15 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪಕ್ಷದ ಪ್ರಮುಖರೊಂದಿಗೆ ರ್ಚಚಿಸಿದ್ದೇನೆ. ಈ ತಿಂಗಳ ಅಂತ್ಯಕ್ಕೆ ಪ್ರವಾಸ ಮುಗಿಸುತ್ತೇನೆ. ಹಲವರು ಬೇರೆ ಪಕ್ಷಗಳಿಂದ ಬಿಜೆಪಿ ಸೇರ್ಪಡೆಗೆ ಸಿದ್ಧರಿದ್ದಾರೆ. ಎಲ್ಲರನ್ನೂ ಪಕ್ಷಕ್ಕೆ ಸೇರಿಸಿಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದರು.

    ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮಂಡೇನಕೊಪ್ಪ ದೇವರಾಜ್, ಪ್ರಮುಖರಾದ ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts