More

    ಒಗ್ಗಟ್ಟಿನಿಂದ ಅಭಿವೃದ್ಧಿಗೆ ಶ್ರಮಿಸಿ

    ಹುಮನಾಬಾದ್: ಚಿಟಗುಪ್ಪ ನೂತನ ತಾಲೂಕು ಪಂಚಾಯಿತಿ ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬರುತ್ತಿದ್ದು, ಈ ವ್ಯಾಪ್ತಿಯ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು.
    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಚಿಟಗುಪ್ಪ ನೂತನ ತಾಪಂ ವ್ಯಾಪ್ತಿಯ ಸದಸ್ಯರಿಗೆ ಹುಮನಾಬಾದ್ ತಾಪಂನಿಂದ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ತಾಪಂನ 24 ಸದಸ್ಯರಿದ್ದು, ಚಿಟಗುಪ್ಪ ನೂತನ ತಾಪಂ ವ್ಯಾಪ್ತಿಗೆ 11 ಸದಸ್ಯರು ಒಳಪಟ್ಟಿದ್ದಾರೆ. ಇದು ಕೊನೆಯ ಸಾಮಾನ್ಯ ಸಭೆಯಾಗಿದ್ದು, ಬೀಳ್ಕೊಡುತ್ತಿರುವುದು ಸಂತೋಷದ ವಿಷಯ ಎಂದರು.
    ಎರಡು ತಾಪಂ ನನ್ನ ಕ್ಷೇತ್ರ ವ್ಯಾಪ್ತಿಗೆ ಬರಲಿವೆ. ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಡಿ ತಾಪಂಗೆ 1.16 ಕೋಟಿ ರೂ. ಬಿಡುಗಡೆಯಾಗಿದೆ. ತಕ್ಷಣ ಅನುದಾನ ಮಾರ್ಗಸೂಚಿ ಪ್ರಕಾರ ಕ್ರಿಯಾಯೋಜನೆ ರೂಪಿಸಿ ಖರ್ಚು ಮಾಡಬೇಕು. ತಾಪಂ ಆವರಣದಲ್ಲಿ ತಮ್ಮ ಅನುದಾನದಲ್ಲಿ ನೂತನ ಕಟ್ಟಡ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 60 ಲಕ್ಷ ರೂ.ನಲ್ಲಿ ಸಿಸಿ ರಸ್ತೆ ಮಾಡಲಾಗಿದೆ. ತಾಪಂನಿಂದ 5 ಲಕ್ಷ ರೂ. ಅನುದಾನ ಮೀಸಲಿಟ್ಟು ಸುಂದರ ಉದ್ಯಾನವನ ನಿರ್ಮಿಸಲು ತಿಳಿಸಿದರು.
    ಚಿಟಗುಪ್ಪ ನೂತನ ತಾಪಂಗೆ 86 ಲಕ್ಷ 15ನೇ ಹಣಕಾಸು ಯೋಜನೆಯಡಿ ಮಂಜೂರಾಗಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಘೋಷಣೆಯಾಗಿದ್ದು, ಶೀಘ್ರದಲ್ಲಿ ಆಯ್ಕೆ ನಡೆಯಲಿದೆ. ನೂತನ ಚಿಟಗುಪ್ಪ ತಾಲೂಕ ಕೇಂದ್ರಕ್ಕೆ ಪ್ರಥಮ ಅನುದಾನ ತಾಪಂಗೆ ಬಂದಿರುವುದು ವಿಶೇಷ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts