More

    ಒಕ್ಕಲಿಗ ಸಮಾಜದಲ್ಲಿ ಒಡಕು ಮೂಡದಿರಲಿ

    ಕುಮಟಾ: ಸಮಾಜ ಸಂಘಟಿತವಾದರೆ ಜಗತ್ತು ನಮ್ಮ ಕಡೆ ನೋಡುತ್ತದೆ. ಸಮಾಜದಲ್ಲಿ ಒಡಕು ಮೂಡಿದರೆ ಯಾರೂ ನೋಡುವುದಿಲ್ಲ. ಸಮಸ್ತ ಹಾಲಕ್ಕಿ ಒಕ್ಕಲಿಗ ಸಮಾಜವು ಮತ್ತಷ್ಟು ಸಂಘಟಿತರಾಗಿ ರಾಜ್ಯಕ್ಕೆ ಉನ್ನತ ಕೊಡುಗೆ ನೀಡಲು ಪ್ರಯತ್ನಿಸಬೇಕಿದೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

    ತಾಲೂಕಿನ ದೀವಗಿಯಲ್ಲಿ ಬುಧವಾರ ಹಾಲಕ್ಕಿ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಹಾಲಕ್ಕಿ ಸಮಾಜದ ಒಗ್ಗಟ್ಟಿಗೆ ಇಂಬು ನೀಡಿದ ಪರಿಣಾಮ ಸುಂದರವಾದ ಸಾಂಸ್ಕೃತಿಕ ಭವನ ನಿರ್ವಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹಾಲಕ್ಕಿ ಹಾಗೂ ಗ್ರಾಮ ಒಕ್ಕಲಿಗರ ಸಮುದಾಯ ಭವನಗಳಿಗೆ ಭೂಮಿ ಒದಗಿಸಿದ ಅದೃಷ್ಟ ನನ್ನದು. ಜತೆಗೆ ಸರ್ಕಾರದಿಂದ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಅನುದಾನವನ್ನು ಮಂಜೂರು ಮಾಡಿಸಿದ್ದೇನೆ ಎಂದರು.

    ಶ್ರೀ ಪ್ರಸನ್ನನಾಥ ಸ್ವಾಮೀಜಿ, ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ, ಶಾಸಕ ಜಯರಾಮ ತುರುವೆಕೆರೆ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿದರು. ಪದ್ಮಶ್ರೀ ಸುಕ್ರಿ ಗೌಡ, ತುಳಸಿ ಗೌಡ, ವಕೀಲ ಕೆ.ಟಿ. ಗೌಡ, ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಜಿಲ್ಲಾ ಹಾಲಕ್ಕಿ ಸಂಘದ ಅಧ್ಯಕ್ಷ ಹನುಮಂತ ಗೌಡ, ಗೋವಿಂದ ಗೌಡ, ಶ್ರೀಧರ ಗೌಡ ಇತರರು ಇದ್ದರು. ಇದೇ ವೇಳೆ ‘ಹಾಲಕ್ಕಿ ಪಾಯಸ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

    ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ಕುಮಟಾ ಗಿಬ್ ವೃತ್ತದಿಂದ ಬೈಕ್ ರ‍್ಯಾಲಿ ಹಾಗೂ ಆಕರ್ಷಕ ಸ್ತಬ್ಧಚಿತ್ರಗಳ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಬಾಳಿಗಾ ಕಾಲೇಜ್ ಮೈದಾನಕ್ಕೆ ಬಂದಿಳಿದ ಡಿಸಿಎಂ ಅಶ್ವತ್ಥ ನಾರಾಯಣ, ಸಚಿವರಾದ ಕೆ. ಗೋಪಾಲಯ್ಯ, ನಾರಾಯಣ ಗೌಡ ಅವರನ್ನು ಕ್ಷೇತ್ರದ ಪರವಾಗಿ ಶಾಸಕ ದಿನಕರ ಶೆಟ್ಟಿ ಹಾಗೂ ತಾಲೂಕು ಆಡಳಿತದಿಂದ ಎಸಿ ಅಜಿತ್ ಎಂ. ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts