More

    ಒಂಭತ್ತು ದಿನಗಳ ದಸರಾ 15ರಿಂದ

    ಯಾದಗಿರಿ: ನಾಡಹಬ್ಬ ದಸರಾ ನಿಮಿತ್ತ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದ್ದು, ಅ.15 (ಭಾನುವಾರ)ದಿಂದ ನವರಾತ್ರಿ ಒಂಭತ್ತು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

    ನಗರದ ರೈಲ್ವೆ ನಿಲ್ದಾಣದಿಂದ ಶಾಸ್ತ್ರೀ ವೃತ್ತದವರಗೂ ವಿದ್ಯುತ್ ದೀಪಾಲಂಕಾರದ ಝಲಕ್ ಜನರ ಗಮನ ಸೆಳೆಯುತ್ತವೆ. ಅಲ್ಲದೆ ಪ್ರತಿದಿನ ಅಂಬಾಭವಾನಿ ಮೂರ್ತಿಗೆವಿಶೇಷ ಪೂಜೆ ಮತ್ತು ಹೋಮ, ಹವನಗಳು ಜರುತ್ತವೆ. ಈ ಕಾರ್ಯಕ್ರಮ ಕಣ್ತುಂಬಿಸಿಕೊಳ್ಳಲೆಂದೇ ಸಹಸ್ರಾರು ಜನ ಬೇರೆ ಜಿಲ್ಲೆಗಳಿಂದ ಆಗಮಿಸುತ್ತಾರೆ. ಪ್ರತಿವರ್ಷ ಯಾದಗಿರಿಯಲ್ಲಿ ಹಿಂದು ಸೇವಾ ಸಮಿತಿಯಿಂದ ದಸರಾ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತ ಬರುತ್ತಿರುವದು ಜನರ ಪಾಲಿಗೆ ಹೆಮ್ಮೆಯ ಸಂಗತಿ. ನವರಾತ್ರಿಯ ಈ ಸಂದರ್ಭದಲ್ಲಿ ಇಡೀ ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುವದನ್ನು ನೋಡುವುದೆ ಒಂದು ಭಾಗ್ಯ.

    ನವರಾತ್ರಿಯ ಮೊದಲ ದಿನವಾದ ಭಾನುವಾರ ದೇವಿ ಪತ್ಥಳಿಯನ್ನು ಮೆರವಣಿಗೆಯ ಮೂಲಕ ನಗರದ ಹೊರ ವಲಯದಲ್ಲಿನ ಭೀಮಾ ನದಿಗೆ ತೆರಳಿ ಗಂಗಾಸ್ನಾನದ ನಂತರ, ದೇವಸ್ಥಾನಕ್ಕೆ ಆಗಮಿಸುವ ಭಕ್ತವೃಂದ ವಿಶೇಷ ಪೂಜೆ ಜರುಗುತ್ತದೆ. ಈ ವೇಳೆ ಕುದುರೆ ಕುಳಿತ, ಡೊಳ್ಳು ಕುಳಿತ ಸೇರಿ ವಿವಿಧ ಕಲಾತಂಡಗಳಿಂದ ಕಲಾ ಪ್ರದರ್ಶನಗಳು ನಡೆಯಲಿವೆ. ಅಲ್ಲದೆ ಸತತ 9 ದಿನಗಳ ಕಾಲ ನಗರದ ಭಕ್ತಾದಿಗಳು ಭವಾನಿಯ ದರ್ಶನ ಪಡೆಯಲು ಆಗಮಿಸುತ್ತಾರೆ.

    ಪ್ರತಿನಿತ್ಯ ರಾತ್ರಿ 9 ಗಂಟೆಗೆ ಪ್ರಾರಂಭಗೊಳ್ಳುವ ದಾಂಡಿಯಾ ನೃತ್ಯ 11 ಗಂಟೆಯವರೆಗೂ ಜರುತ್ತದೆ. ಭಕ್ತರು, ಯುವಕರು `ಬೋಲ್ ಅಂಬೆ ಮಾತಾಕೀ ಜೈ’ ಎಂಬ ಉದ್ಘೋಷಗಳೊಂದಿಗೆ ನೃತ್ಯದಲ್ಲಿ ಭಾಗವಹಿಸುತ್ತಾರೆ. ನಗರದ ಮೂಕಾಂಬಿಕಾ ಶಾಲೆ, ಅಂಬೇಡ್ಕರ್ ವೃತ್ತ, ನಗರಸಭೆ ಮುಂಭಾಗ, ಬಸವೇಶ್ವರ ನಗರದಲ್ಲಿ, ಭವಾನಿ ಮಂದಿರ ಸೇರಿದಂತೆ ಮತ್ತಿತರರ ಪ್ರದೇಶಗಳಲ್ಲಿ ಅಂಬಾ ಭವಾನಿ ಮೂತರ್ಿ ಪ್ರತಿಷ್ಠಾಪಿಸಿ ನವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬಂದಿದೆ.

    ವಿಜಯದಶಮಿ ದಿನದ ಸಾಯಂಕಾಲದಂದು ಅಂಬಾ ಭವಾನಿ ದೇವಸ್ಥಾನದಿಂದ ಹೊರಡುವ ಸಾವಿರಾರು ಭಕ್ತರ ಮಧ್ಯೆ ಮೆರವಣಿಗೆ ಅತ್ಯಂತ ಸಂಭ್ರಮದಿಂದ ಬನ್ನಿ ಮಂಟಪದವರೆಗೆ ಸಾಗುತ್ತದೆ. ಈ ವೇಳೆ ಜಂಬೂ ಸವಾರಿ ನಡೆಯಲಿದೆ. ಅದೇ ದಿನ ರಾತ್ರಿ ಸಾವಿರಾರು ಯುವಕರು ಯಾದಗಿರಿಯಿಂದ ಶ್ರೀ ಕ್ಷೇತ್ರ ತುಳಜಾಪುರಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ. ಹಬ್ಬವನ್ನು ಸ್ವಾಗತಿಸಲು ಹಿಂದು ಸೇವಾ ಸಮಿತಿ ಸೇರಿದಂತೆ ಇತರೆ ಹಿಂದು ಪರ ಸಂಘಟನೆಗಳು ಅಣಿಯಾಗುತ್ತಿರುವದು ಜನತೆಯಲ್ಲಿ ಸಂತಸ ಮನೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts