More

    ಒಂದೇ ಕುಟುಂಬದ ಐವರಿಗೆ ಸೋಂಕು!

    ಹುಬ್ಬಳ್ಳಿ: ಮೂವರು ಮಕ್ಕಳು ಮತ್ತು ಅವರ ತಂದೆಗೆ ಒಂದೇ ದಿನ ಸೋಂಕು ತಗಲಿರುವುದು ದೃಢಪಟ್ಟಿದ್ದು, ಆತಂಕವನ್ನು ದ್ವಿಗುಣಗೊಳಿಸಿದೆ.

    ಸೋಮವಾರ ಮಧ್ಯಾಹ್ನದ ವರದಿ ಪ್ರಕಾರ ಸೋಂಕಿತನ ಕುಟುಂಬದವರೇ ಐವರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇದರಿಂದಾಗಿ, ಧಾರವಾಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಜಿಲ್ಲೆ ರೆಡ್ ಝೋನ್(ಅಪಾಯಕಾರಿ ವಲಯ)ಗೆ ತಿರುಗುವ ಭೀತಿಯಿದೆ.

    ಹುಬ್ಬಳ್ಳಿ ಮುಲ್ಲಾ ಓಣಿಯ 27 ವರ್ಷದ ಯುವಕನಿಗೆ 3 ದಿನದ ಹಿಂದೆ ಸೋಂಕು ದೃಢಪಟ್ಟಿತ್ತು. ಆತನನ್ನು ಕಿಮ್ಸ್​ಗೆ ದಾಖಲಿಸಿದ್ದು, ಚಿಕಿತ್ಸೆ ನಡೆದಿದೆ. 14 ಜನರಿದ್ದ ಆತನ ಕುಟುಂಬದ ಎಲ್ಲರನ್ನೂ ಕ್ವಾರಂಟೈನ್​ಗೆ ಒಳಪಡಿಸಿ, ಗಂಟಲ ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಗಳು ಹಂತ ಹಂತವಾಗಿ ಬರುತ್ತಿದ್ದು, ಆತಂಕ ಹೆಚ್ಚುತ್ತಿದೆ.

    27 ವರ್ಷದ ಯುವಕ ಪಿ-194 ಸಂಖ್ಯೆಯ ರೋಗಿಯಾಗಿದ್ದಾನೆ. ಸೋಮವಾರ ಸೋಂಕು ದೃಢಪಟ್ಟವರೆಲ್ಲರೂ ಆತನ ಕುಟುಂಬದವರೇ ಆಗಿದ್ದಾರೆ. ಆತನ ಅಣ್ಣ (37 ವರ್ಷ) ಹಾಗೂ ಅಣ್ಣನ ಮೂವರು ಮಕ್ಕಳಾದ 7 ವರ್ಷದ ಹೆಣ್ಣು ಮಗು, 5 ವರ್ಷದ ಗಂಡು ಮಗು ಹಾಗೂ ಮೂರೂವರೆ ವರ್ಷದ ಹೆಣ್ಣು ಮಗು ಸೋಂಕಿತರಾಗಿದ್ದಾರೆ.

    27 ವರ್ಷದ ಯುವಕ ಬೂಟು, ಚಪ್ಪಲಿ ಮಳಿಗೆ ಹೊಂದಿದ್ದಾನೆ. ವ್ಯವಹಾರ ಸಂಬಂಧ ಹೈದರಾಬಾದ್, ದೆಹಲಿ, ಆಗ್ರಾಕ್ಕೆ ಕಿರಿಯ ಸಹೋದರನೊಂದಿಗೆ ತೆರಳಿದ್ದ ಆತ, ದೆಹಲಿಯಿಂದ ವಿಮಾನದಲ್ಲಿ ಮುಂಬೈಗೆ ಬಂದು, ಅಲ್ಲಿಂದ ಬಸ್​ನಲ್ಲಿ ಹೊರಟು ಮಾ. 20ರಂದು ಹುಬ್ಬಳ್ಳಿಗೆ ಬಂದು ಬಸ್ ನಿಲ್ದಾಣದಿಂದ ಆಟೋ ರಿಕ್ಷಾದಲ್ಲಿ ಮನೆಗೆ ತಲುಪಿದ್ದನು.

    ಆಶ್ಚರ್ಯಕರ ಸಂಗತಿ ಎಂದರೆ ಆತನೊಂದಿಗೆ ತೆರಳಿದ್ದ ಸಹೋದರನಲ್ಲಿ ನೆಗೆಟಿವ್ ಎಂದು ಬಂದಿದೆ.

    ಮುಲ್ಲಾ ಓಣಿ ಯುವಕ ಮಾ. 20ರಿಂದ ಏ. 5ರವರೆಗೂ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದನು. ಮನೆಯಲ್ಲಿ ಎಲ್ಲರೊಂದಿಗೆ ಬೆರೆತಿದ್ದನು. ಆತನಿಂದಲೇ ಉಳಿದ ಮೂವರಿಗೆ ವೈರಾಣುಗಳು ಹಬ್ಬಿವೆ ಎಂದು ಸಹಜವಾಗಿ ರ್ತಸಲಾಗಿದೆ.

    ಧಾರವಾಡ ಜಿಲ್ಲೆಯಲ್ಲಿ ಒಂದು ಸೋಂಕು ಮಾತ್ರ ಪತ್ತೆಯಾಗಿತ್ತು. ಸೋಂಕಿತ ವ್ಯಕ್ತಿ ಕಿಮ್ಸ್​ನಲ್ಲಿ ನೀಡಿದ ಚಿಕಿತ್ಸೆಯಿಂದ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾನೆ. ನಂತರ ತಬ್ಲಿಘಿಗಳು ಸೇರಿ ಹಲವರನ್ನು ಕಿಮ್ಸ್​ಗೆ ಕರೆತರಲಾಗಿತ್ತಾದರೂ ಎಲ್ಲ ನೆಗೆಟಿವ್ ಬಂದಿದ್ದವು. ಹೀಗಾಗಿ ಜಿಲ್ಲೆಯ ಸಾರ್ವಜನಿಕರಿಗೆ ತುಸು ಸಮಾಧಾನವಾಗಿತ್ತು.

    ಏ. 5ರ ವೇಳೆಗೆ ಜ್ವರ ಪೀಡಿತನಾದ ಮುಲ್ಲಾ ಓಣಿ ಯುವಕನಿಗೆ ಕ್ವಾರಂಟೈನ್ ವಿಧಿಸಿ, ಲಾಡ್ಜ್ ಒಂದರಲ್ಲಿ ಇರಿಸಲಾಗಿತ್ತು. ಏ. 8ರಂದು ರಾತ್ರಿ ಆತನ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಪುನಃ ಕಿಮ್ಸ್​ಗೆ ಕರೆದೊಯ್ದು ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಏ. 9ರಂದು ಆತನಲ್ಲಿ ಕರೊನಾ ಇರುವುದು ದೃಢಪಟ್ಟಿತ್ತು. ಆತನ ಕುಟುಂಬದವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು.

    ಕಂಟೈನ್​ವೆುಂಟ್: ಹುಬ್ಬಳ್ಳಿ ಮುಲ್ಲಾ ಓಣಿಯಲ್ಲಿಯ ಯುವಕನ ಮನೆಯಿಂದ 3 ಕಿ.ಮೀ. ಸುತ್ತಳತೆ ಪ್ರದೇಶವನ್ನು ಕಂಟೈನ್​ವೆುಂಟ್ (ಸೋಂಕು ಸಂಭಾವ್ಯ) ಪ್ರದೇಶ ಎಂದು ಗುರುತಿಸಲಾಗಿದೆ. ಅಲ್ಲಿಗೆ ಆಗಮನ, ನಿರ್ಗಮನವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts