More

    ಒಂದು, ಎರಡು ವರ್ಷದ ಮಕ್ಕಳಿಗೆ ಸೋಂಕು

    ಕಲಬುರಗಿ: ಮತ್ತೊಮ್ಮೆ ಜಿಲ್ಲೆಯಲ್ಲಿ ಕರೊನಾ ಮಹಾಮಾರಿ ಸ್ಫೋಟಿಸಿದೆ. ಶನಿವಾರ ಜಿಲ್ಲೆಯಲ್ಲಿ ಹೊಸದಾಗಿ 67 ಪ್ರಕರಣಗಳು ಪತ್ತೆ
    ಯಾಗಿದ್ದು, 32 ಜನ ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ. 67 ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಒಟ್ಟು ಸಂಖ್ಯೆ 883ಕ್ಕೇರಿ ದಂತಾಗಿದೆ. ಎರಡು ಪ್ರಕರಣ ಹೊರತುಪಡಿಸಿ ಇನ್ನುಳಿದ ಎಲ್ಲ ಪ್ರಕರಣಗಳಿಗೆ ಮಹಾರಾಷ್ಟ್ರ ಲಿಂಕ್ ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.
    ಈಗಾಗಲೇ ಮೃತಪಟ್ಟಿರುವ ಆಳಂದನ 17 ವರ್ಷದ ಯುವತಿಯ ಸಂಪರ್ಕಕ್ಕೆ ಬಂದ ಒಂದು ಪ್ರಕರಣ ಮತ್ತು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ನಾಲ್ಕು ವರ್ಷದ ಮಗುವೊಂದು ಹೊಸ ಸೋಂಕಿತರಾಗಿದ್ದಾರೆ.
    ಶನಿವಾರ ಪತ್ತೆಯಾದ ಪ್ರಕರಣಗಳಲ್ಲಿ ಹತ್ತು ವರ್ಷದೊಳಗಿನ 13 ಮಕ್ಕಳು, 35 ಮಹಿಳೆಯರು 19 ಜನ ಪುರುಷರು ಸೋಂಕಿತರಾದವರಾಗಿದ್ದಾರೆ. ಇವುಗಳಲ್ಲಿ ಒಂದು ವರ್ಷದ ಹೆಣ್ಣು ಮಗುವನ್ನು ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಇಡಲಾಗಿದೆ. ಹತ್ತು ವರ್ಷದೊಳಗಿನ 13 ಮಕ್ಕಳಲ್ಲಿ ಏಳು ಗಂಡು ಮಕ್ಕಳು ಮತ್ತು ಆರು ಹೆಣ್ಣು ಮಕ್ಕಳು ಇದ್ದು ಎರಡು ವರ್ಷದ ಐದು ಮಕ್ಕಳು ಸೇರಿವೆ. ಅಲ್ಲದೇ 60 ವರ್ಷದ ಮೇಲ್ಪಟ್ಟು ಮೂವರು ವ್ಯಕ್ತಿಗಳಿದ್ದರೆ, ಇನ್ನುಳಿದವರೆಲ್ಲ 45 ವರ್ಷದೊಳಗಿನವರೇ ಆಗಿದ್ದು ಚಿಂತೆಗೀಡು ಮಾಡಿದೆ. ಯುವಕರು ಮತ್ತು ಯುವತಿಯರು ಸೋಂಕಿನಿಂದ ಬಳಲುತ್ತಿರುವುದು ಅವರ ಕುಟುಂಬದ ಸದಸ್ಯರಲ್ಲಿ ಭಯ ಹುಟ್ಟಿಸಿದೆ.
    ಜಿಲ್ಲೆಯಲ್ಲಿ ಒಟ್ಟು 883ಜನರಿಗೆ ಸೋಂಕು ತಗುಲಿದ್ದು, ಇವರಲ್ಲಿ ಹತ್ತು ಜನ ಮೃತಪಟ್ಟಿದ್ದಾರೆ. 377 ಜನ ಚೇತರಿಸಿಕೊಂಡು ಮನೆಗಳಿಗೆ ಹೋಗಿದ್ದಾರೆ. 496 ಸಕ್ರೀಯ ಪ್ರಕರಣಗಳಿವೆ.
    ಇಂದಿನ ಎಲ್ಲ ಸೋಂಕಿತರನ್ನು ಇಲ್ಲಿಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಅಲ್ಲದೇ ತೀವ್ರ ನಿಗಾ ಘಟಕದಲ್ಲಿರುವ ನಾಲ್ಕು ವರ್ಷದ ಬಾಲಕನ ಪ್ರದೇಶ ಮತ್ತು ಪಿ. 5900ನೇ ಪ್ರಕರಣದ ಜತೆ ನೇರ ಸಂಪರ್ಕಕ್ಕೆ ಬಂದಿರುವ 30 ವರ್ಷದ ಪುರುಷನಿಗೆ ಸೇರಿದ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ.
    ಕರೊನಾದಿಂದ ಈಗಾಗಲೇ ಮೃತಪಟ್ಟಿರುವ 17 ವರ್ಷದ ಯುವತಿ (ಪಿ. 5900)ಗೆ ಈ 30 ವರ್ಷದ ವ್ಯಕ್ತಿ ಚಿಕ್ಕಪ್ಪನಾಗಬೇಕೆಂದು ಹೇಳಲಾಗುತ್ತಿದೆ. ಉಳಿದವರಲ್ಲಿ ಕೆಲವರು ಕ್ವಾರಂಟೈನ್ ಪ್ರದೇಶದಲ್ಲಿದ್ದರೆ ಇನ್ನೂ ಕೆಲವರು ಮನೆಗಳಿಗೆ ತೆರಳಿದ್ದಾರೆ. ಚಿಕಿತ್ಸಾ ವರದಿ ಬರುವ ಮುನ್ನವೇ ಮನೆಗಳಿಗೆ ತೆರಳಿದವರ ಪ್ರದೇಶಗಳನ್ನು ಪರಿಶೀಲಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts