More

    ಒಂದಿಷ್ಟು ನಿಟ್ಟುಸಿರು… ಬಿಸಿಯುಸಿರು…

    ಧಾರವಾಡ: ಕರೊನಾ ಹಿನ್ನೆಲೆಯಲ್ಲಿ ಮಾ. 25ರಿಂದ ಜಾರಿಯಲ್ಲಿದ್ದ ಲಾಕ್​ಡೌನ್ ನಿಯಮಾವಳಿಗಳಲ್ಲಿ ಒಂದಿಷ್ಟು ಸಡಿಲವಾಗಿದ್ದು, ಜಿಲ್ಲೆಯ ಸಾರ್ವಜನಿಕರು ಮೇ 4ರಿಂದ ನಿಟ್ಟುಸಿರು ಬಿಡಲು ಅವಕಾಶವಾಗಿದೆ. ಆದಾಗ್ಯೂ, ಲಾಕ್​ಡೌನ್ ಪೂರ್ವದಲ್ಲಿಯ ಸ್ವಾತಂತ್ರ್ಯ ಸಿಗುವುದಿಲ್ಲ.

    ಜಿಲ್ಲಾಧಿಕಾರಿ ದೀಪಾ ಚೋಳನ್ ಭಾನುವಾರ ರಾತ್ರಿ ಪರಿಷ್ಕೃತ ಆದೇಶ ಹೊರಡಿಸಿದ್ದು, ಸೋಮವಾರದಿಂದ ಅನ್ವಯವಾಗುವಂತೆ ಜಾರಿಗೆ ಬರುತ್ತಿದೆ.

    ಕೇಂದ್ರ ಗೃಹ ಮಂತ್ರಾಲಯ ಮೇ 1ರಂದು ಪರಿಷ್ಕೃತ ಆದೇಶ ಹೊರಡಿಸಿದ್ದು, ಮೇ 17ರವರೆಗೆ ಲಾಕ್​ಡೌನ್ ಮುಂದುವರಿಸುವಂತೆ ಸೂಚಿಸಿದೆ. ಅದರ ಅನ್ವಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

    ಯಥಾಸ್ಥಿತಿಯಲ್ಲಿ ಹುಬ್ಬಳ್ಳಿ ಹೃದಯಭಾಗ: ಹುಬ್ಬಳ್ಳಿ: ಇಲ್ಲಿಯ ಮುಲ್ಲಾ ಓಣಿ, ಕರಾಡಿ ಓಣಿ, ಆಜಾದ ಕಾಲನಿ, ಕೇಶ್ವಾಪುರ ಶಾಂತಿ ನಗರದ ವ್ಯಕ್ತಿಗಳಲ್ಲಿ ಕರೊನಾ ಸೋಂಕು ಕಂಡುಬಂದಿರುವುದರಿಂದ ಸೀಲ್​ಡೌನ್ ಆದೇಶಕ್ಕೆ ಒಳಪಟ್ಟಿವೆ. ಮುಲ್ಲಾ ಓಣಿಯಲ್ಲಿ ಕರೊನಾ ಸೋಂಕು ಪತ್ತೆಯಾದಾಗಿನಿಂದಲೇ ಕಂಟೈನ್​ವೆುಂಟ್ (ಸಂಭಾವ್ಯ ಸೋಂಕು) ಪ್ರದೇಶ ಘೊಷಣೆಯಾಗಿದ್ದು, 3 ಕಿ.ಮೀ. ಸುತ್ತಳತೆ ಪ್ರದೇಶ ಇದರ ವ್ಯಾಪ್ತಿಗೆ ಬರುತ್ತದೆ. ಸೋಂಕಿತ ವ್ಯಕ್ತಿಗಳ ಮನೆಯಿಂದ 1 ಕಿ.ಮೀ. ಸುತ್ತಳತೆಯನ್ನು ಹೆಚ್ಚು ಅಪಾಯಕಾರಿ ಪ್ರದೇಶ ಎಂದು ಪರಿಗಣಿಸಲಾಗಿದೆ. ಹೀಗಾಗಿ, ಪ್ರಮುಖ ವಾಣಿಜ್ಯ ಪ್ರದೇಶಗಳಾದ ದುರ್ಗದಬೈಲ್, ಬ್ರಾಡವೇ, ಕೊಪ್ಪಿಕರ ರಸ್ತೆ, ದಾಜಿಬಾನಪೇಟೆ, ಕಮರಿಪೇಟೆ, ಪುಣೆ-ಬೆಂಗಳೂರು ರಸ್ತೆಯ ಪ್ರಮುಖ ಭಾಗ, ಲ್ಯಾಮಿಂಗ್ಟನ್ ರಸ್ತೆ ಮೊದಲಾದ ಕಡೆಯಲ್ಲಿ ಕಂಟೈನ್​ವೆುಂಟ್ ಬಿಗಿ ಆದೇಶ ಇರುವುದರಿಂದ ಸದ್ಯಕ್ಕೆ ಹೇಗೆ ಇದೆಯೋ ಹಾಗೆಯೇ ಇರಲಿದೆ. ಅಂದರೆ, ಲಾಕ್​ಡೌನ್ ಮುಂದುವರಿಯಲಿದೆ. ಸೋಂಕಿತರ ಮನೆಯ 1 ಕಿ.ಮೀ. ಸುತ್ತಳತೆಯ ಆಚೆಗಿನ ಕಂಟೈನ್​ವೆುಂಟ್​ನಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಷರತ್ತುಬದ್ಧವಾಗಿ ತೆರೆಯಲು ಅನುಮತಿಸಲಾಗಿದೆ.

    ಶಾಂತಿನಗರ ಸುತ್ತಮುತ್ತ: ಕೇಶ್ವಾಪುರ ಶಾಂತಿನಗರ ಪೂರ್ವಕ್ಕೆ ಸಂಗಿನಿ ವಿಲ್ಲಾ, ಪಶ್ಚಿಮಕ್ಕೆ ವಿಜಯ ನಗರ ತಿರುಪತಿ ಬಜಾರ್, ಉತ್ತರಕ್ಕೆ ಗೋಪನಕೊಪ್ಪದ ಕೊನೆಯ ಬಸ್ ನಿಲ್ದಾಣ, ದಕ್ಷಿಣಕ್ಕೆ ಸವೋದಯ ಸರ್ಕಲ್ ಪ್ರದೇಶವು ಕಂಟೈನ್​ವೆುಂಟ್​ನ ಬಿಗಿ ಆದೇಶಕ್ಕೆ ಒಳಪಡುತ್ತವೆ.

    17ರವರೆಗೆ ನಿಷೇಧಾಜ್ಞೆ: ಜಿಲ್ಲೆಯಾದ್ಯಂತ ಕರೊನಾ ಸೋಂಕು ಹರಡದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೇ 4ರಿಂದ 17ರವರೆಗೆ ಸಿಆರ್​ಪಿಸಿ 1973ರ ಕಲಂ 144ರ ಅನ್ವಯ ನಿಷೇಧಾಜ್ಞೆ ಅವಧಿಯನ್ನು ವಿಸ್ತರಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಭಾನುವಾರ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ವಾಹನಗಳಿಗೆ ಮತ್ತು ಕೋವಿಡ್ 19 ಕಾರ್ಯಾಚರಣೆಯಲ್ಲಿ ಕರ್ತವ್ಯನಿರತ ವಾಹನಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ನಿಯಂತ್ರಿತ ವಲಯಕ್ಕೆ ಇದರೊಂದಿಗೆ ಹೆಚ್ಚುವರಿಯಾದ ನಿರ್ಬಂಧಗಳು ಸಹ ಮುಂದುವರಿಯುತ್ತವೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪರಿಷ್ಕೃತ ಆದೇಶದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts