More

    ಐಸಿಡಿ ಅಳವಡಿಕೆ ಮೊದಲ ಪ್ರಯತ್ನವೇ ಯಶಸ್ವಿ

    ಧಾರವಾಡ: ನಗರದ ಎಸ್​ಡಿಎಂ ನಾರಾಯಣ ಹಾರ್ಟ್ ಸೆಂಟರ್​ನಲ್ಲಿ ಮೊದಲ ಬಾರಿಗೆ ಇಂಪ್ಲಾಂಟೇಬಲ್ ಕಾರ್ಡಿಯೋಓವರ್ ಡಿಫಿಬ್ರಿಲೇಟರ್ (ಐಸಿಡಿ)ಯನ್ನು ಯಶಸ್ವಿಯಾಗಿ ಅವಳವಡಿಸುವ ಮೂಲಕ ಹೃದಯ ರೋಗ ಆರೈಕೆಯಲ್ಲಿ ಮತ್ತೊಂದು ಸಾಧನೆ ಮಾಡಿದೆ ಎಂದು ಹಾರ್ಟ್ ಸೆಂಟರ್​ನ ಹಿರಿಯ ತಜ್ಞವೈದ್ಯ ಡಾ. ವಿವೇಕಾನಂದ ಗಜಪತಿ ತಿಳಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಪೇಟೆಯ ದೀಪಕ ಆಮ್ಟೆ (55) ಎಂಬುವವರಿಗೆ ಈ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ದೀಪಕ ಅವರು ಹೆಚ್ಚಾದ ಹೃದಯ ಬಡಿತ ಹಾಗೂ ತಲೆ ತಿರುಗುವಿಕೆಯಿಂದ ಬಳಲುತ್ತಿದ್ದರು. ಪದೇ ಪದೇ ಈ ಸಮಸ್ಯೆ ಅವರಲ್ಲಿ ಕಂಡು ಬಂದ ಕಾರಣಕ್ಕೆ ಡಿ. 5ರಂದು ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.

    ಸಮಾನ್ಯವಾಗಿ ಹೃದಯದ ಬಡಿತ ನಿಮಿಷಕ್ಕೆ 60-100 ವೇಗ ಹೊಂದಿರುತ್ತದೆ. ಆದರೆ ದೀಪಕ ಹೃದಯ ಬಡಿತ 250ಕ್ಕೆ ತಲುಪಿತ್ತು. ಮೊದಲು ಬಾಹ್ಯ ಡಿಫಿಬ್ರಿಲೇಟರ್ ಶಾಕ್ ನೀಡಲಾಗಿತ್ತು. ಆದಾಗ್ಯೂ ಹೃದಯ ಬಡಿತದ ವೇಗ ತಗ್ಗದ ಕಾರಣ ಈ ಸಾಧನ ಅಳವಡಿಸಲಾಗಿದೆ. ಹೃದಯದ ಕೋಣೆಗೆ ಹೋಗುವ ಸೀಸದೊಂದಿಗೆ ಸಾಧನ ಅಳವಡಿಸಿದ್ದು, ಅಸಹಜ ವೇಗದ ಹೃದಯ ಬಡಿತ ಪತ್ತೆ ಮಾಡಿ ಸಹಜ ಬಡಿತಕ್ಕೆ ಸಹಾಯ ಮಾಡುತ್ತದೆ. ಈ ಸಾಧನದ ಬ್ಯಾಟರಿ ಸುಮಾರು 10 ವರ್ಷಗಳವರೆಗೆ ಬಳಕೆಗೆ ಬರಲಿದ್ದು, ನಂತರದಲ್ಲಿ ಬದಲಾಯಿಸಬಹುದು ಎಂದರು.

    ಹಾರ್ಟ್ ಸೆಂಟರ್​ನ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಪಟ್ಟಣಶೆಟ್ಟಿ ಮಾತನಾಡಿ, ಹಿರಿಯ ಹೃದಯ ರೋಗ ತಜ್ಞ ಡಾ. ವಿ.ಎಸ್. ಪ್ರಕಾಶ, ಡಾ. ರಾಮಕುಮಾರ, ಡಾ. ವಿವೇಕಾನಂದ ಗಜಪತಿ, ಅರವಳಿಕೆ ತಜ್ಞೆ ಡಾ. ಲಕ್ಷ್ಮೀ ಪಾಟೀಲ ಹಾಗೂ ಕೇಂದ್ರದ ತಂಡ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದರು.

    ದೀಪಕ ಆಮ್ಟೆ ಮಾತನಾಡಿ, ಹೆಚ್ಚಾದ ಹೃದಯ ಬಡಿತದಿಂದ ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿತ್ತು. ಅನೇಕ ಕಡೆಗಳಲ್ಲಿ ತೋರಿಸಿದ್ದರೂ ವಾಸಿಯಾಗಿರಲಿಲ್ಲ. ಎಸ್​ಡಿಎಂ ನಾರಾಯಣ ಹಾರ್ಟ್ ಸೆಂಟರ್ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದು, ಸದ್ಯ ಯಾವುದೇ ಸಮಸ್ಯೆ ಇಲ್ಲ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದಗಳು ಎಂದರು. ಎಸ್​ಡಿಎಂ ನಾರಾಯಣ ಹಾರ್ಟ್ ಸೆಂಟರ್​ನ ಮಾರುಕಟ್ಟೆ ವಿಭಾಗದ ಮೇಲ್ವಿಚಾರಕ ಅಜಯ ಹುಲಮನಿ, ದುಂಡೇಶ ತಡಕೋಡ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts