More

    ಐಪಿಎಸ್ ಅಧಿಕಾರಿ ಬಂಧನಕ್ಕೆ ಒತ್ತಾಯ

    ಕಲಬುರಗಿ: ಪೊಲೀಸ್ ಪೇದೆಯ ಪತ್ನಿಯನ್ನು ಅಪಹರಣ ಮಾಡಿ, ಬಲವಂತವಾಗಿ ಗೃಹ ಬಂಧನದಲ್ಲಿರಿಸಿಕೊಂಡ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಅರುಣ ರಂಗರಾಜನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಕೂಡಲೇ ಬಂಧಿಸುವAತೆ ಆಗ್ರಹಿಸಿ ಗುಲ್ಬರ್ಗ ಜಿಲ್ಲಾ ಆದಿ ವೀರಶೈವ ಬಣಜಿಗ ಸಮಾಜ ಮುಖಂಡರು ನಗರ ಪೊಲೀಸ್ ಆಯುಕ್ತ ಆರ್.ಚೇತನ್, ಡಿಸಿಪಿ ಅಡ್ಡೂರು ಶ್ರೀನಿವಾಸುಲು ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

    ಐಪಿಎಸ್ ಅಧಿಕಾರಿ ವಿರುದ್ಧ ದಾಖಲಾದ ಪ್ರಕರಣ ಕುರಿತು ತನಿಖೆ ನಡೆಸಲು ಡಿಎಸ್ಪಿ ಹಂತದ ಅಧಿಕಾರಿಯನ್ನು ನೇಮಿಸುವುದು ಸರಿಯಲ್ಲ. ಇದು ನಿಯಮ ಬಾಹಿರವಾಗುತ್ತದೆ. ಹೀಗಾಗಿ ಈ ಕೇಸ್ ಬಗ್ಗೆ ಖುದ್ದು ತಾವೇ ತನಿಖೆ ನಡೆಸಬೇಕು. ಇಲ್ಲದಿದ್ದರೆ ಹಿರಿಯ ಐಪಿಎಸ್ ಅಧಿಕಾರಿಗೆ ನಿಯೋಜನೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಕಾನೂನು ಎಲ್ಲರಿಗೂ ಒಂದೇ. ಹೀಗಿರುವಾಗ ಪ್ರಕರಣ ದಾಖಲಾಗಿ ಹಲವು ದಿನಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎಎಸ್‌ಐ ಹಂತದ ಅಧಿಕಾರಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದು ನೋಡಿದಾಗ ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡುತ್ತಿರುವಂತಿದೆ. ಪೊಲೀಸ್ ಅಧಿಕಾರಿ ಎಂಬ ಕಾರಣಕ್ಕೆ ಅವರನ್ನು ರಕ್ಷಿಸುತ್ತಿರುವಂತಿದೆ. ಹೀಗಾಗಿ ಜನರಲ್ಲಿ ಮೂಡಿರುವ ಅನುಮಾನಗಳನ್ನು ಹೋಗಲಾಡಿಸಲು ಹಿರಿಯ ಐಪಿಎಸ್ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಿ ಅವರನ್ನು ಬಂಧಿಸಿ, ನೊಂದ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts