More

    ಐತಿಹಾಸಿಕ ಕೆರೆ ಬಳಿಯ ಅಕ್ರಮ ಕಟ್ಟಡ ತೆರವು

    ಚನ್ನಮ್ಮನ ಕಿತ್ತೂರು, ಬೆಳಗಾವಿ: ಪಟ್ಟಣದ ಐತಿಹಾಸಿಕ ರಣಗಟ್ಟಿ ಕೆರೆಯ ಸುತ್ತಲಿನ ಅಕ್ರಮ ಕಟ್ಟಡಗಳನ್ನು, ತಡೆಗೋಡೆಗಳನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ಅಧಿಕಾರಿಗಳು ಗುರುವಾರ ಆರಂಭಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಒತ್ತುವರಿದಾರರಿಗೆ ಸೂಚಿಸಲಾಗಿದೆ.

    ‘ಕೊಳಚೆ ಗುಂಡಿಯಾಗುತ್ತಿದೆ ಐತಿಹಾಸಿಕ ಕೆರೆ’ ಶಿರ್ಷಿಕೆಯಡಿ ವಿಜಯವಾಣಿ ದಿನಪತ್ರಿಕೆ 31.5.2022ರಂದು ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತ ಅಧಿಕಾರಿಗಳು ಕೆರೆಯ ಕಾಯಕಲ್ಪಕ್ಕೆ ಮುಂದಾಗಿದ್ದಾರೆ. ಪಟ್ಟಣದ ಚರಂಡಿ ನೀರು, ತ್ಯಾಜ್ಯಗಳಿಂದ ರಣಗಟ್ಟಿ ಕೆರೆ ಕೊಳಚೆಯನ್ನು ತುಂಬಿಕೊಂಡಿತ್ತು. ಈಗ ಗಲೀಜಿನಿಂದ ಮುಕ್ತವಾಗಲಿದೆ. ಚರಂಡಿ ನೀರು ಕೆರೆಗೆ ಸೇರದ ಹಾಗೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಈಗಾಗಲೇ ಕೆರೆ ಸುತ್ತ ಹಾಗೂ ಕಸದಿಂದ ತುಂಬಿದ್ದ ಆವರಣವನ್ನು ಎರಡು ದಿನದಿಂದ ಸ್ವಚ್ಛಗೊಳಿಸುವ ಕೆಲಸ ನಡೆಸಿದ್ದಾರೆ. ಗುಡಿ ಕೈಗಾರಿಕೆಯಿಂದ ಬರುವ ತ್ಯಾಜ್ಯ ವಸ್ತುಗಳನ್ನು ಕೆರೆಗೆ ಎಸೆದವರ ವಿರುದ್ಧ ದಂಡ ವಿಧಿಸಿದ್ದಾರೆ. ಐತಿಹಾಸಿಕ ರಣಗಟ್ಟಿ ಕೆರೆ ಅಭಿವೃದ್ಧಿಗಾಗಿ 6 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಶೀಘ್ರ ಅನುದಾನ ಮಂಜೂರು ಆಗಲಿದ್ದು, ಇದರ ನಕ್ಷೆ ತಯಾರಿಸಲಾಗುತ್ತಿದೆ. ಅನುದಾನ ಬಂದ ತಕ್ಷಣ ಕೆಲಸ ಪ್ರಾರಂಭಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts