More

    ಏ.1ರಿಂದ 9ರವರೆಗೆ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

    ಶ್ರೀಮಂಗಲ: ಪೊನ್ನಂಪೇಟೆ ತಾಲೂಕಿನ ಬೆಳ್ಳೂರು-ಹರಿಹರ ಗ್ರಾಮದ ಬಾಚೀರ ಕುಟುಂಬದಿಂದ ಹರಿಹರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಕೊಡವ ಕೌಟುಂಬಿಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಏ.1ರಿಂದ 9ರವರೆಗೆ ಪಂದ್ಯಾವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ಬಾಚೀರ ಕುಟುಂಬ ಕ್ರಿಕೆಟ್ ಪಂದ್ಯಾವಳಿಯ ಪ್ರಮುಖರು ತಿಳಿಸಿದ್ದಾರೆ.

    ಸಮೀಪದ ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗುರುವಾರ ಕ್ರಿಕೆಟ್ ಪಂದ್ಯಾವಳಿ ಅಧ್ಯಕ್ಷ ಬಾಚೀರ ಎನ್.ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

    ಮೊದಲು ನೋಂದಾಯಿಸುವ 64 ತಂಡಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದ್ದು, ವಿನ್ನರ್ ಅಪ್ ತಂಡಕ್ಕೆ 50,000 ರೂ. ಮತ್ತು ಟ್ರೋಫಿ, ರನ್ನರ್ ಅಪ್ ತಂಡಕ್ಕೆ 30,000 ರೂ. ಮತ್ತು ಟ್ರೋಫಿ, ಮೂರನೇ ಸ್ಥಾನ ಪಡೆಯುವ ತಂಡಕ್ಕೆ 20,000 ರೂ. ಮತ್ತು ಟ್ರೋಫಿ ನೀಡಲಾಗುವುದು ಎಂದು ಕುಟುಂಬದ ಅಧ್ಯಕ್ಷ ಸುಜಾ ಉತ್ತಯ್ಯ ಮತ್ತು ಪಂದ್ಯಾವಳಿ ಅಧ್ಯಕ್ಷ ಕಾರ್ಯಪ್ಪ ವಿವರಣೆ ನೀಡಿದರು.
    ಎಲ್ಲ ಪಂದ್ಯಾವಳಿಗೆ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರಿಸ್, ಬೆಸ್ಟ್ ಫೀಲ್ಡರ್, ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ನೀಡಲಾ ಗುವುದು. ಕಳೆದ ವರ್ಷ ಹರಿಹರ ಗ್ರಾಮದ ಮನ್ನೇರ ಕುಟುಂಬ ಇದೇ ಮೈದಾನದಲ್ಲಿ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿತ್ತು ಎಂದು ಮಾಹಿತಿ ನೀಡಿದರು.

    ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ಮತ್ತು ಕೊಡವ ಕುಟುಂಬದವರನ್ನು ಒಂದೆಡೆ ಸೇರಿಸುವ ಉದ್ದೇಶ ಇದರದ್ದಾಗಿದೆ. ಅಲ್ಲದೆ ಜಿಲ್ಲೆಯ ಹೊರಗೆ ಹಾಗೂ ನಾನಾ ಕಡೆಯಲ್ಲಿ ನೆಲೆಸಿರುವ ವಿವಿಧ ಕೊಡವ ಕುಟುಂಬದವರು ಪಂದ್ಯಾವಳಿ ಕಾರಣದಿಂದ ಒಂದೆಡೆ ಸೇರಲು ಸಹಕಾರಿಯಾಗಲಿದೆ ಎಂದು ಹೇಳಿದರು.

    ಪಂದ್ಯಾವಳಿಯ ಪ್ರವೇಶ ಶುಲ್ಕ 2,000 ರೂ.ನಿಗದಿ ಪಡಿಸಲಾಗಿದೆ. ಏ.1ರಂದು ಉದ್ಘಾಟನಾ ಪಂದ್ಯವಿದ್ದು, ಮಹಿಳಾ ತಂಡಗಳ ನಡುವೆ ನಡೆಯಲಿದೆ. ಟಿ.ಶೆಟ್ಟಿಗೇರಿಯ ಸಂಭ್ರಮ ಮಹಿಳಾ ಸಾಂಸ್ಕೃತಿಕ ಸಂಘ ಹಾಗೂ ಹರಿಹರ ಮಹಿಳಾ ಇಲೆವೆನ್ ತಂಡದ ನಡುವೆ ನಡೆಯಲಿದೆ ಎಂದು ತಿಳಿಸಿದರು.

    ತಾಂತ್ರಿಕ ಹಾಗೂ ತೀರ್ಪುಗಾರರ ನಿರ್ವಹಣೆಯನ್ನು ಹರಿಹರದ ಫ್ರೆಂಡ್ಸ್ ಇಲೆವೆನ್ ನಿರ್ವಹಿಸಲಿದೆ. ಪ್ರವೇಶಾತಿ ಹಾಗೂ ಹೆಚ್ಚಿನ ವಿವರಕ್ಕೆ ಕುಶಾಲಪ್ಪ ಮೊ.ನಂ.9972355222, ರಾಜ ಉತ್ತಪ್ಪ ಮೊ.9880161887 ಅವರನ್ನು ಸಂಪರ್ಕಿಸಬಹುದು ಎಂದರು.

    ಕ್ರೀಡಾಕೂಟದ ಕಾರ್ಯನಿರ್ವಹಣಾಧಿಕಾರಿ ರಾಜ ಉತ್ತಪ್ಪ, ಕಾರ್ಯದರ್ಶಿ ವಾಸು ದೇವಯ್ಯ, ಕುಟುಂಬದ ಸದಸ್ಯರಾದ ಸುರಕ್ಷಾ, ಸಂಪತ್, ಅಶ್ವಿನಿ ಸಂಪತ್, ನಿರನ್ ನಾಣಯ್ಯ, ಜಸ್ಮಿ,ಸ್ವಾಗತ್, ಅಮನ್ ಸುಬ್ಬಯ್ಯ ಹಾಜರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts