More

    ಏಷ್ಯಾಡ್‌ನ ಕ್ರಿಕೆಟ್ ಸ್ಪರ್ಧೆಯಲ್ಲಿ ಫೈನಲ್‌ಗೇರಿದ ಋತುರಾಜ್ ಪಡೆ : ಇಂದು ಚಿನ್ನದ ಪದಕಕ್ಕೆ ಹೋರಾಟ

    ಹಾಂಗ್‌ರೆೌ: ಋತುರಾಜ್ ಗಾಯಕ್ವಾಡ್ ನೇತೃತ್ವದ ಭಾರತದ ಪುರುಷರ ತಂಡ ಏಷ್ಯಾಡ್‌ನ ಕ್ರಿಕೆಟ್ ಸ್ಪರ್ಧೆಯಲ್ಲಿ ೈನಲ್‌ಗೇರುವ ಮೂಲಕ ಚಿನ್ನದ ಪದಕ ಗೆಲುವಿನತ್ತ ಸಾಗಿದೆ. ಎಡಗೈ ಬ್ಯಾಟರ್ ತಿಲಕ್ ವರ್ಮ (55* ರನ್, 26 ಎಸೆತ, 4 ಬೌಂಡರಿ, 6 ಸಿಕ್ಸರ್) ಬಿರುಸಿನ ಅರ್ಧಶತಕ ಹಾಗೂ ಸಾಯಿ ಕಿಶೋರ್ (12ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಸೆಮಿೈನಲ್‌ನಲ್ಲಿ ಬಾಂಗ್ಲಾದೇಶ ಎದುರು 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
    ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾ, ಸಾಯಿ ಕಿಶೋರ್ ಹಾಗೂ ವಾಷಿಂಗ್ಟನ್ ಸುಂದರ್ (15ಕ್ಕೆ 2) ಸ್ಪಿನ್ ದಾಳಿಗೆ ಬೆದರಿ 9 ವಿಕೆಟ್‌ಗೆ 96 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಕ್ವಾರ್ಟರ್‌ೈನಲ್ ಶತಕವೀರ ಯಶಸ್ವಿ ಜೈಸ್ವಾಲ್ (0) ವಿಕೆಟ್ ಬೇಗನೆ ಕಳೆದುಕೊಂಡ ಭಾರತ. ಋತುರಾಜ್ ಗಾಯಕ್ವಾಡ್ (40*) ಹಾಗೂ ತಿಲಕ್ ವರ್ಮ ಅಜೇಯ ಜತೆಯಾಟದ ನೆರವಿನಿಂದ 9.2 ಓವರ್‌ಗಳಲ್ಲಿ 1 ವಿಕೆಟ್‌ಗೆ 97 ರನ್‌ಗಳಿಸಿ ಸುಲಭ ಜಯ ಕಂಡಿತು.
    ಬಾಂಗ್ಲಾದೇಶ: 9 ವಿಕೆಟ್‌ಗೆ 96 (ಪರ್ವೇಜ್ 23, ಜಕೀರ್ ಅಲಿ 24*, ರಕೀಬುಲ್ 14, ಸಾಯಿ ಕಿಶೋರ್ 12ಕ್ಕೆ3, ವಾಷಿಂಗ್ಟನ್ ಸುಂದರ್ 15ಕ್ಕೆ2). ಭಾರತ: 9.2 ಓವರ್‌ಗಳಲ್ಲಿ 1 ವಿಕೆಟ್‌ಗೆ 97 (ಜೈಸ್ವಾಲ್ 0, ಋತುರಾಜ್ 40*,ತಿಲಕ್ ವರ್ಮ 55*).

    ಪಾಕ್‌ಗೆ ಆಫ್ಘನ್ ಶಾಕ್
    ದಿನದ ಮತ್ತೊಂದು ಸೆಮೀಸ್‌ನಲ್ಲಿ ಅ್ಘಾನಿಸ್ತಾನ 4 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಮಣಿಸಿ ೈನಲ್‌ಗೇರಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಾಕ್, 18 ಓವರ್‌ಗಳಲ್ಲಿ 115 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಅ್ಘಾನಿಸ್ತಾನ 17.5 ಓವರ್‌ಗಳಲ್ಲಿ 6 ವಿಕೆಟ್‌ಗೆ 117 ರನ್‌ಗಳಿಸಿ ಸ್ವರ್ಣ ಪದಕದ ಸುತ್ತಿಗೆ ಲಗ್ಗೆಯಿಟ್ಟಿದ್ದು, ಕನಿಷ್ಠ ಬೆಳ್ಳಿ ಖಚಿತಪಡಿಸಿಕೊಂಡಿದೆ.

    ಇಂದು ಫೈನಲ್
    ಭಾರತ-ಅ್ಘಾನಿಸ್ತಾನ
    ಆರಂಭ: ಬೆಳಗ್ಗೆ 11.30
    ನೇರಪ್ರಸಾರ: ಸೋನಿ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts