More

    ಏಕಾಗ್ರತೆ ಹೆಚ್ಚಿಸುವ ಸಂಗೀತ

    ವಿಜಯವಾಣಿ ಸುದ್ದಿಜಾಲ ಭಟ್ಕಳ: ಶಾಸ್ತ್ರೀಯ ನೃತ್ಯ ಸಂಗೀತಗಳು ಮಕ್ಕಳ ಮನಸ್ಸಿನಲ್ಲಿ ಏಕಾಗ್ರತೆ ಹೆಚ್ಚಿಸಿ ಮನಸ್ಸನ್ನು ಒಂದೆಡೆ ಕೇಂದ್ರಿಕೃತಗೊಳಿಸುತ್ತದೆ ಹಾಗೂ ಉತ್ತಮ ಸಂಸ್ಕಾರ ಕೊಡುತ್ತದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಅಭಿಪ್ರಾಯಪಟ್ಟರು.

    ಭಟ್ಕಳದ ನಾಗಯಕ್ಷೆ ಸಭಾಭವನದಲ್ಲಿ ಝೇಂಕಾರ ಆರ್ಟ್ ಅಸೋಸಿಯೇಶನ್ ಕಲಾ ಉತ್ಸವ 2020 ಉದ್ಘಾಟಿಸಿ ಅವರು ಮಾತನಾಡಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಎಂ .ಆರ್. ಮುಂಜಿ ಮಾತನಾಡಿ, ಒತ್ತಡ ರಹಿತವಾಗಿ ಜೀವನ ಸಾಗಿಸಲು ಲಲಿತ ಕಲೆಗಳನ್ನು ಮೈಗೊಡಿಸಿಕೊಳ್ಳಬೇಕು ಎಂದರು.

    ನಾಗಯಕ್ಷೆ ಸಭಾಗೃಹ ಧರ್ಮದರ್ಶಿ ರಾಮದಾಸ ಪ್ರಭು ಮಾತನಾಡಿ, ಶಾಸ್ತ್ರೀಯತೆಯ ಬೀಜವನ್ನು ಬಿತ್ತಿ ಅದನ್ನು ಹೆಮ್ಮರವಾಗಿ ಬೆಳೆಸುತ್ತಿರುವ ಝೇಂಕಾರ ಕುಟುಂಬದ ಕಾರ್ಯ ಶ್ಲಾಘನಾರ್ಹ ಎಂದರು.

    ಖ್ಯಾತ ಹಿರಿಯ ತಬಲ ಮಾಂತ್ರಿಕ ಎನ್.ಎಸ್. ಹೆಗಡೆ. ಹೀರೆಮಕ್ಕಿ ಅವರ ಸಾಧನೆಗಾಗಿ ಝೇಂಕಾರ ಕಲಾಶ್ರೀ 2020 ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಚಿತ್ರಕಲೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ಝೇಂಕಾರ ಸಂಸ್ಥೆಯ ವಿದ್ಯಾರ್ಥಿ ಶಶಾಂಕ ಗಣೇಶ ಹೆಬ್ಬಾರನನ್ನು ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು, ನೃತ್ಯ ವಿದುಷಿ ನಯನಾ ಪ್ರಸನ್ನ, ಕಲಾ ಶಿಕ್ಷಕ ಸಂಜಯ ಗುಡಿಗಾರ ನಿರ್ವಹಿಸಿದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts