More

    ಏಕರೂಪ ನಾಗರಿಕ ಸಂಹಿತೆ ಕೈಬಿಡಲು ಆಗ್ರಹ – ಮುಸ್ಲಿಂ ಒಕ್ಕೂಟದಿಂದ ರಾಷ್ಟ್ರಪತಿಗೆ ಮನವಿ

    ದಾವಣಗೆರೆ: ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆ ಚರ್ಚೆ ವಿಷಯ ಕೈಬಿಡಲು ಆದೇಶಿಸುವಂತೆ ಆಗ್ರಹಿಸಿ ದಾವಣಗೆರೆ ಮುಸ್ಲಿಂ ಒಕ್ಕೂಟ ಸದಸ್ಯರು ಸೋಮವಾರ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರ ಮೂಲಕ ಮನವಿ ಸಲ್ಲಿಸಿದರು.
    ಸಂವಿಧಾನದ ಪರಿಚ್ಛೇದ 26ರಡಿ ಭಾರತದ ಪ್ರತಿ ನಾಗರಿಕನಿಗೆ ತನ್ನ ಇಚ್ಛೆಯಂತೆ ಇಷ್ಟವಾದ ಧರ್ಮದಂತೆ ಜೀವನ ನಡೆಸಲು ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ. ಈ ಹಕ್ಕನ್ನು ಏಕರೂಪ ನಾಗರಿಕ ಸಂಹಿತೆಯು ಮೊಟಕುಗೊಳಿಸಲಿದೆ. ಇದು ಸಂವಿಧಾನ ವಿರೋಧಿಯಾಗಿದೆ.
    ಭಾರತದಲ್ಲಿ ಬುಡಕಟ್ಟು ಜನಾಂಗ, ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಜೈನರು, ಸಿಕ್ಕರು ಅನೇಕ ಜನಾಂಗದವರಿದ್ದಾರೆ. ಪ್ರತಿಯೊಬ್ಬರು ತಮ್ಮ ಧರ್ಮಾಚರಣೆ ಪಾಲನೆ ಮಾಡುತ್ತ ಬಂದಿದ್ದಾರೆ. ಆಡಳಿತರೂಢ ಕೇಂದ್ರ ಸರ್ಕಾರ, ಉದ್ದೇಶಿತ ಸಂಹಿತೆ ಮೂಲಕ ಧಾರ್ಮಿಕ ಆಚರಣೆಯಲ್ಲಿ ವಿಷಬೀಜ ಬಿತ್ತಿ ಕೋಮು ಸಂಘರ್ಷದ ಹುನ್ನಾರ ನಡೆಸುತ್ತಿದೆ.
    ಇಂತಹ ಕಾನೂನು ಭಾರತದ ಹಿತಕ್ಕೆ ಹಾಗೂ ದೇಶದ ಸಮಗ್ರತೆ ಮತ್ತು ಏಕತೆಗೆ ಧಕ್ಕೆ ತರಲಿದೆ. ಹಾಗಾಗಿ ಏಕರೂಪ ನಾಗರಿಕ ಸಂಹಿತೆಯನ್ನು ದೇಶದ ಬಹುಸಂಖ್ಯಾತ ನಾಗರಿಕರು ವಿರೋಧಿಸಿದ್ದೇವೆ. ರಾಷ್ಟ್ರಪತಿ ಮಧ್ಯ ಪ್ರವೇಶಿಸಿ ಏಕರೂಪ ನಾಗರಿಕ ಸಂಹಿತೆ ಚರ್ಚೆಯ ವಿಷಯ ಕೈಬಿಡಲು ಆದೇಶಿಸಬೇಕೆಂದು ಮನವಿ ಸಲ್ಲಿಸಿದರು.
    ಈ ಸಂದರ್ಭದಲ್ಲಿ ದಾವಣಗೆರೆ ಮುಸ್ಲಿಂ ಒಕ್ಕೂಟದ ಸಂಚಾಲಕ ನಜೀರ್ ಅಹ್ಮದ್, ಮುಖಂಡರಾದ ಟಿ.ಅಸ್ಗರ್, ಮಹಮ್ಮದ್ ಶೋಯೆಬ್, ನೂರ್ ಅಹ್ಮದ್, ನಿಜಾಮುದ್ದೀನ್, ಮಸೂದ್ ಅಹ್ಮದ್, ಐ.ಕೆ. ಮುನ್ನಾಸಾಬ್, ಮೆಹಬೂಬ್ ಬೀಡಾ, ಅನ್ವರ್ ಹುಸೇನ್, ಅಜ್ಮತ್, ಖಲೀಲ್ ಉಲ್ಲಾ ಖಾನ್,ಮಹಮದ್ ಹನೀಫ್ ಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts