More

    ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ

    ಗದಗ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಓದಿನ ಮನೆ, ಮನೆ ಮನೆಗೆ ಭೇಟಿ, ಗುಂಪು ಅಧ್ಯಯನ, ರಸಪ್ರಶ್ನೆ, ಫೋನ್-ಇನ್-ನೇರ ಮುಂತಾದ ಕಾರ್ಯಕ್ರಮಗಳನ್ನು ಮಾಡಿದರೂ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

    ನಗರದ ಜೆಟಿ ಕಾಲೇಜ್ ಸಭಾಭವನದಲ್ಲಿ ಶಿಕ್ಷಣ ಇಲಾಖೆ ಹಾಗೂ ವಿವಿಧ ಶೈಕ್ಷಣಿಕ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕುರಿತು ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.

    ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬಾರದಿರುವುದಕ್ಕೆ ಶಿಕ್ಷಕರು ನಿರಾಸೆಗೊಳ್ಳಬಾರದು. ಆತ್ಮವಿಶ್ವಾಸ ಹಾಗೂ ಇಚ್ಛಾ ಶಕ್ತಿಯಿಂದ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ವರ್ಷದಲ್ಲಿ ಫಲಿತಾಂಶವನ್ನು ಹೆಚ್ಚಿಸಿ ಜಿಲ್ಲೆಗೆ ಗೌರವ ತರಬೇಕು ಎಂದು ಮನವಿ ಮಾಡಿದರು.

    ಸಭೆಯಲ್ಲಿ ಮುಖ್ಯೋಪಾಧ್ಯಾಯರಾದ ಎ.ಎಲ್. ಬಿಜಾಪೂರ, ಪಿ.ಸಿ. ಕಲಹಾಳ, ಬಿ.ಕೆ. ಬಳಿಗಾರ, ಸಹ ಶಿಕ್ಷಕರಾದ ಪಿ.ಎಚ್. ಕಡಿವಾಳ, ಶಾರದಾ ಪಾಟೀಲ, ಗಣೇಶ ಪಾಟೀಲ, ರಾಮಚಂದ್ರ ಮೋನೆ, ಮಂಜಪ್ಪ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಸ್.ಎಂ. ಕೊಟಗಿ, ಶರಣಪ್ಪ ನಾಗರಳ್ಳಿ, ವಿ.ಎಂ. ಹಿರೇಮಠ ಮಾತನಾಡಿ ಫಲಿತಾಂಶ ಕುಸಿತದ ಬಗೆಗೆ ವಿವರಣೆ ನೀಡಿದರು.

    ಡಿಡಿಪಿಐ ಬಸವಲಿಂಗಪ್ಪ, ಡಯಟ್ ಪ್ರಾಚಾರ್ಯ ಎಸ್.ಡಿ. ಗಾಂಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ಡಯಟ್ ಉಪನ್ಯಾಸಕ ಕೆ.ವಿ. ಪಾಟೀಲ, ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ ಮಾತನಾಡಿ, ಜಿಲ್ಲೆಯ ಫಲಿತಾಂಶ ಸುಧಾರಣೆಗಾಗಿ ಪ್ರತಿ ಶಾಲೆ ಹಾಗೂ ತಾಲೂಕು ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಬೇಕು. ವಿಷಯ ಪರಿವೀಕ್ಷಕರು, ಡಯಟ್ ಹಿರಿಯ ಉಪನ್ಯಾಸಕರು, ಶಾಲೆಗಳನ್ನು ದತ್ತು ಪಡೆಯಬೇಕು ಎಂದು ಸಲಹೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆ.ಟಿ. ಕಾಲೇಜ್ ಪ್ರಾಚಾರ್ಯ ಪಿ.ಜಿ. ಪಾಟೀಲ ಮಾತನಾಡಿ, ಪರಿಣಾಮಕಾರಿ ಬೋಧನೆಯಿಂದ ಫಲಿತಾಂಶ ಸುಧಾರಿಸಲು ಸಾಧ್ಯ. ಆ ದಿಸೆಯಲ್ಲಿ ಎಲ್ಲ ಶಿಕ್ಷಕರು ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವಂತೆ ಮನವಿ ಮಾಡಿದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು. ಎನ್.ವಿ. ಜೋಶಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts