More

    ಎಸ್ಟಿಗೆ ಪ್ರಬಲ ಸಮುದಾಯ ಸೇರ್ಪಡೆ ಕೈಬಿಡಿ

    ರಾಯಚೂರು: ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢವಾಗಿರುವ ಹಿಂದುಳಿದ ವರ್ಗದ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ಬೇಡರ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
    ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ನಾಯ್ಕಡ, ಗೊಂಡ, ಕಾಡು ಕುರುಬ ಹೆಸರಿನಲ್ಲಿ ಹಿಂದುಳಿದ ಜಾತಿಯವರು ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣಪತ್ರ ತಡೆಯುವುದನ್ನು ನಿಲ್ಲಿಸಬೇಕು. ಪ್ರಮಾಣಪತ್ರ ನೀಡಿದ ಅಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಹಿಂದುಳಿದ ಕೋಟಾದಲ್ಲಿ ಬೇರೆ ಬೇರೆ ಜಾತಿಯವರು ವಿವಿಧ ಇಲಾಖೆಗಳಲ್ಲಿ ನೌಕರಿಗೆ ಸೇರುವಾಗ ಹಿಂದುಳಿದ ವರ್ಗದಲ್ಲಿ ನೇಮಕ ಹೊಂದಿದ್ದಾರೆ. ಮತ್ತೊಂದೆಡೆ ಇವರ ಜಾತಿಯ ಉಪನಾಮ ಇಟ್ಟುಕೊಂಡು ತಳವಾರರು ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಎಸ್ಟಿ ಪ್ರಮಾಣ ಪತ್ರ ಪಡೆದಿದ್ದಾರೆ.
    ಬಹುತೇಕರು ಹುದ್ದೆಯಲ್ಲಿ ಪದೋನ್ನತಿ ಪಡೆಯುವ ದುರಾಸೆಯಿಂದ ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದು, ಜಾತಿ ಪರಿಶೀಲನೆ ಸಮಿತಿಯಿಂದ ಜಾತಿಗಳನ್ನು ಪರಿಶೀಲಿಸಬೇಕು. ಮೂಲತಃ ಕಬ್ಬಲಿಗ, ಅಂಬಿಗ, ಗಂಗಾಮತಸ್ಥರು ಕೋಲಿ ಗಂಗಾಮತ ಜಾತಿಗೆ ಸೇರಿದವರಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
    ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಅಂಬಣ್ಣ ನಾಯಕ, ಪದಾಕಾರಿಗಳಾದ ಶಂಕರಗೌಡ ಕೋಳಿಹಾಳ, ರಂಗಪ್ಪ ನಾಯಕ, ಶಂಕರ ನಾಯಕ, ಗಂಗಾಧರ ನಾಯಕ, ವೆಂಕಟೇಶ ನಾಯಕ, ಭರಮಯ್ಯ ನಾಯಕ, ಶಿವರಾಜ ನಾಯಕ, ಸುರೇಶ ನಾಯಕ, ಬಸನಗೌಡ ಪಾಟೀಲ್, ರಾಚಣ್ಣ ನಾಯಕ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts