More

    ಎಸ್​ಇಐಎಲ್ ವಿದ್ಯಾರ್ಥಿಗಳ ಪ್ರವಾಸ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನ ಎಸ್​ಇಐಎಲ್ (ಸ್ಟೂಡೆಂಟ್ ಎಕ್ಸ್​ಪೀರಿಯನ್ಸ್ ಇನ್ ಇಂಟರ್ ಸ್ಟೇಟ್ ಲಿವಿಂಗ್) ಆಯಾಮವು ರಾಷ್ಟ್ರೀಯ ಏಕತಾ ಯಾತ್ರೆ ಆರಂಭಿಸಿದ್ದು, ಹುಬ್ಬಳ್ಳಿಗೆ ಈ ಯಾತ್ರೆಯನ್ನು ಸ್ವಾಗತಿಸಲಾಗುವುದು. 30 ವಿದ್ಯಾರ್ಥಿಗಳಿಗೆ ಆತಿಥ್ಯ ನೀಡಲಿದ್ದು, ಫೆ. 8 ಮತ್ತು 9ರಂದು ಅವಳಿ ನಗರದಲ್ಲಿ ಪ್ರವಾಸ ಮಾಡುವರು ಎಂದು ಎಸ್​ಇಐಎಲ್ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಶ್ರೀನಿವಾಸ ಜೋಶಿ ಹೇಳಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 8ರಂದು ಐಐಟಿ, ಹೈಕೋರ್ಟ್, ಧಾರವಾಡದ ಕರ್ನಾಟಕ ವಿವಿ, ವರೂರಿನ ವಿಆರ್​ಎಲ್ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಲಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ವಿವಿ ಉಪ ಕುಲಪತಿಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂವಾದ ನಡೆಸುವರು ಎಂದರು.

    ಕಾರ್ಯದರ್ಶಿ ಡಾ. ವಿಜಯಮಹಾಂತೇಶ ಪೂಜಾರ ಮಾತನಾಡಿ, ಫೆ. 9ರಂದು ಸಂಜೆ 6ಗಂಟೆಗೆ ನಗರದ ಕೆಎಲ್​ಇ ಸಂಸ್ಥೆಯ ಬಯೋಟೆಕ್ ಸಭಾಂಗಣದಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಜರುಗಲಿದೆ ಎಂದರು.

    ಎಬಿವಿಪಿ ರಾಜ್ಯ ಉಪಾಧ್ಯಕ್ಷ ಪ್ರೊ. ಅಶೋಕ ಕಬ್ಬೇರ, ಕಾರ್ಯದರ್ಶಿ ಮಣಿಕಂಠ ಕಳಶ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts