More

    ಎಸಿ ಕಚೇರಿ ಎದುರು ರೈತರ ಧರಣಿ ಸತ್ಯಾಗ್ರಹ

    ಬೈಲಹೊಂಗಲ, ಬೆಳಗಾವಿ: ಮಲಪ್ರಭಾ ಏತ ನೀರಾವರಿ ಯೋಜನೆ ಕಾಲುವೆ ಮತ್ತು ರಸ್ತೆಗಾಗಿ 1968ರಿಂದ 1973 ರವರೆಗೆ ಭೂ ಸ್ವಾಧೀನ ಮಾಡಿಕೊಂಡ ಕ್ಷೇತ್ರಗಳನ್ನು ದಾಖಲೆ ಮಾಡದೆ, 2022ರಲ್ಲಿ ರೈತರ ಗಮನಕ್ಕೆ ತರದೇ ಅಸಮಂಜಸವಾಗಿ ಡೈರಿ ಮಾಡಿರುವ ತಹಸೀಲ್ದಾರ್ ಕ್ರಮ ಖಂಡಿಸಿದ ವಿವಿಧ ರೈತ ಸಂಘಟನೆಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.

    ಪಟ್ಟಣದ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮಳ ಅಶ್ವಾರೂಢ ಮೂರ್ತಿಗೆ ಗೌರವ ಸಮರ್ಪಿಸಿ ಪಾದಯಾತ್ರೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಧರಣಿ ಸತ್ಯಾಗ್ರಹ ನಡೆಸಿದರು. ಸಮಸ್ಯೆಗೆ ಸ್ಪಂದಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

    ಸಂಘದ ಅಧ್ಯಕ್ಷ ಬಿ.ಎಂ.ಚಿಕ್ಕನಗೌಡ್ರ ಮಾತನಾಡಿ, ಸಕಾಲದಲ್ಲಿ ಡೈರಿ ಮಾಡದೆ ಪಹಣಿ ಪತ್ರಿಕೆಗಳಲ್ಲಿ ಭೂ ಸ್ವಾಧೀನದ ವಿವರ ದಾಖಲಿಸದೆ ತಪ್ಪು ಮಾಡಿದ್ದಾರೆ. 2022ರಲ್ಲಿ ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ ತಾಲೂಕಿನ ತಹಸೀಲ್ದಾರರು ಕೃಷಿ ಕ್ಷೇತ್ರವನ್ನು ನೀರಾವರಿ ನಿಗಮ ನಿಯಮಿತ ಹೆಸರಿನಲ್ಲಿ ಡೈರಿ ಮಾಡಿದ್ದು ಸರಿಯಾದ ಕ್ರಮವಲ್ಲ. ಆದ್ದರಿಂದ ಈ ಎಲ್ಲ ಡೈರಿಗಳನ್ನು ರದ್ದು ಮಾಡಿ ಸಂಬಂಧಿಸಿದ ರೈತರ ಒಪ್ಪಿಗೆಯೊಂದಿಗೆ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದರು.


    ಹೊಸೂರ ಮಡಿವಾಳೇಶ್ವಮಠದ ಗಂಗಾಧರ ಸ್ವಾಮೀಜಿ, ಡಾ.ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಸಾನ್ನಿಧ್ಯ ವಹಿಸಿದ್ದರು. ರೈತ ಮುಖಂಡರಾದ ಸೋಮೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಗೂಳಪ್ಪನವರ, ಟಿಎಪಿಸಿಎಂಎಸ್ ಅಧ್ಯಕ್ಷ ಧೂಳಪ್ಪ ಇಟಗಿ, ಸುರೇಶ ಸಂಪಗಾಂವ, ಶಂಕರ ಮಾಡಲಗಿ, ಜೆ.ಕೆ. ರೀಝಾ, ಸಿದ್ದಗೌಡ ಮೊದಗಿ, ಎ್.ಎಸ್.ಸಿದ್ದನಗೌಡರ, ಸೋಮನಿಂಗ ಮೆಳ್ಳಿಕೇರಿ, ರಾಘವೇಂದ್ರ ನಾಯಕ, ಪ್ರಕಾಶ ನಾಯಕ, ಮಲ್ಲಿಕಾರ್ಜುನ ಹುಂಬಿ, ಶಿವನಸಿಂಗ ಮೊಖಾಶಿ, ಶಶಿಧರ ಚಿಕ್ಕೊಡಿ, ಶ್ರೀಶೈಲ ಅಬ್ಬಾಯಿ, ರವಿ ಸಿದ್ದಮ್ಮನವರ, ಗುರುಸಿದ್ದಪ್ಪ ಕೋಟಗಿ, ಸೋಮಪ್ಪ ಮೂಲಿಮನಿ, ಮಲ್ಲಿಕಾರ್ಜುನ ಗೂಳಪ್ಪನವರ, ಮಲಿಕಜಾನ್ ನದಾಫ್, ರಫೀಕ್ ಬಡೇಘರ್, ಮಹಾಂತೇಶ ಕಮತ, ಆನಂದ ಹಂಪನ್ನವರ, ಬಾಪುಗೌಡ ಪಾಟೀಲ, ಕಿತ್ತೂರು, ರಾಮದುರ್ಗ, ಸವದತ್ತಿ ಬೈಲಹೊಂಗಲ ಭಾಗದ ರೈತ ಮಹಿಳೆಯರು, ನೂರಾರು ರೈತರು ಇದ್ದರು. ಸ್ಥಳಕ್ಕಾಗಮಿಸಿದ ಎಸಿ ಶಶಿಧರ ಬಗಲಿ, ಬಾಗಲಕೋಟೆ ಭೂಸ್ವಾಧೀನ ಅಧಿಕಾರಿ ಸುಭಾಸ ಸಂಪಗಾಂವಿ, ನವಿಲುತೀರ್ಥ ಜಲಾಶಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಕೆ.ಮುದಿಗೌಡರ, ಡಿವೈಎಸ್ಪಿ ಶಿವಾನಂದ ಕಟಗಿ ಅವರು ರೈತರೊಂದಿಗೆ ಚರ್ಚಿಸಿದರೂ ಸಮಸ್ಯೆ ಇತ್ಯರ್ಥವಾಗಲಿಲ್ಲ. ಮೇಲಧಿಕಾರಿಗಳು ಡೈರಿ ರದ್ದುಪಡಿಸಲು ಒಪ್ಪದ್ದರಿಂದ ಧರಣಿ ಸತ್ಯಾಗ್ರಹ ಮುಂದುವರಿಸಲು ತೀರ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts