More

    ಎಸಿಬಿ ಬಲೆಗೆ ಬಿದ್ದ ಕಂಪ್ಯೂಟರ್ ಆಪರೇಟರ್

    ಶಿರಹಟ್ಟಿ: ಖಾತೆ ಬದಲಾವಣೆಗೆ ಲಂಚದ ಬೇಡಿಕೆ ಇಟ್ಟಿದ್ದ ಪಟ್ಟಣ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಶರಣಪ್ಪ ಗೌಳಿ ಎಂಬಾತ ಮಂಗಳವಾರ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

    ವಕೀಲ ಮಹೇಶ ಡಿ.ಆರ್. ಎಂಬುವವರ ಪತ್ನಿ ರಾಧಾ ಅವರ ಹೆಸರಿನಲ್ಲಿ ಖಾತೆ ಬದಲಾವಣೆ ಮಾಡಲು ಉತಾರ ನೀಡುವಂತೆ ಕಂಪ್ಯೂಟರ್ ಆಪರೇಟರ್​ಗೆ ಮನವಿ ಮಾಡಲಾಗಿತ್ತು. ಆದರೆ, ಶರಣಪ್ಪ ಒಂದು ತಿಂಗಳಿನಿಂದ ಉತಾರ ನೀಡದೇ ಸತಾಯಿಸುತ್ತಿದ್ದನು. ಅಲ್ಲದೆ, ಖಾತೆ ಬದಲಾವಣೆ ಮಾಡಿ ಕೊಡಲು 3500 ರೂ. ಲಂಚದ ಬೇಡಿಕೆ ಇಟ್ಟಿದ್ದನು. ಹಣ ಕೊಡಲು ಒಪ್ಪಿದ ವಕೀಲ ಮಹಾಂತೇಶ ಈ ಕುರಿತು ಗದಗ ಎಸಿಬಿ ಅಧಿಕಾರಿಗೆ ದೂರು ನೀಡಿದ್ದರು. ಹಣ ಕೊಡುತ್ತಿರುವ ಸಂದರ್ಭದಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್ಪಿ ವಾಸುದೇವ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ಶರಣಪ್ಪ ಗೌಳಿಯನ್ನು ಬಂಧಿಸಿ ಹಣವನ್ನು ವಶಕ್ಕೆ ಪಡೆಯಿತು.

    ಘಟನೆ ಕುರಿತು ಪ್ರತಿಕ್ರಿಯಿಸಿದ ಡಿಎಸ್ಪಿ ವಾಸುವೇವ ಅವರು, ಮಹೇಶ ಡಿ.ಆರ್. ಎಂಬುವರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿ ಕಂಪ್ಯೂಟರ್ ಆಪರೇಟರ್ ಶರಣಪ್ಪ ಗೌಳಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಲಂಚ ಪ್ರಕರಣ ಕುರಿತು ಆರೋಪಿಯಿಂದ ವಿವರಣೆ ಪಡೆಯಲಾಗುವುದು ಎಂದರು.

    ಇನ್ಸ್​ಪೆಕ್ಟರ್ ಆರ್.ಎಫ್. ದೇಸಾಯಿ, ವೈ.ಎಸ್. ಧರನಾಯಕ, ಪಿಸಿ ಗಳಾದ ಎಂ.ಎಂ. ಅಯ್ಯನಗೌಡ್ರ, ಉಮೇಶ ಹೆಬಸೂರ, ಐ.ಸಿ.ಜಾಲಿಹಾಳ, ವೀರೇಶ ಜೋಳದ, ತಾಯಣ್ಣವರ, ಮಂಜುನಾಥ ಕರಿಗಾರ, ಈರಣ್ಣ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts