More

    ಎಳೆಯ ಅಲಸಂದಿ ಬಳ್ಳಿ ಸೇವಿಸಿ 33 ಕುರಿಗಳ ದಾರುಣ ಸಾವು 

    ದಾವಣಗೆರೆ: ತಾಲೂಕಿನ ಒಂಟಿಹಾಳ್ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ ಎಳೆಯ ಅಲಸಂದಿ ಬಳ್ಳಿ ಸೇವಿಸಿದ ಪರಿಣಾಮ ಎದೆ ಉಬ್ಬರಗೊಂಡು, ಉಸಿರಾಟ ತೊಂದರೆಗೊಳಗಾದ 33 ಕುರಿಗಳು ದಾರುಣ ಸಾವಿಗೀಡಾಗಿವೆ.

    ಚಿತ್ರದುರ್ಗ ಜಿಲ್ಲೆಯ ನಾಲ್ವರು ವಲಸೆ ಕುರಿಗಾರರಿಗೆ ಸೇರಿದ ಈ ಕುರಿಗಳು ಶನಿವಾರ ಸಂಜೆ ಮೃತಪಟ್ಟಿವೆ. ಸ್ವಲ್ಪ ಪ್ರಮಾಣದ ಅಲಸಂದಿ ಬಳ್ಳಿ ಸೇವಿಸಿದ್ದ ಸುಮಾರು 40ಕ್ಕೂ ಹೆಚ್ಚು ಕುರಿಗಳಿಗೆ ಸಕಾಲಿಕ ಚಿಕಿತ್ಸೆ ನೀಡಿದ್ದರಿಂದಾಗಿ ಬದುಕುಳಿದಿವೆ.
    ಸ್ಥಳಕ್ಕೆ ಮಾಯಕೊಂಡ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಮಧುಕೇಶ್ವರ್, ಮುಖ್ಯ (ಆಡಳಿತ) ವೈದ್ಯಾಧಿಕಾರಿ ಡಾ.ಜಿ.ಎಸ್.ಶಿವಕುಮಾರ್, ಕುರಿ ಮತ್ತು ಉಣ್ಣೆ ನಿಗಮದ ಮುಖ್ಯ ವೈದ್ಯಾಧಿಕಾರಿ ಡಾ. ಜಿ.ಎನ್.ಸಂತೋಷ್, ಐಎಎಚ್ ಆ್ಯಂಡ್ ಬಿಬಿ ವಿಭಾಗದ ವೈದ್ಯಾಧಿಕಾರಿ ಡಾ. ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು.
    ಮೃತ ಕುರಿಗಳ ಮರಣೋತ್ತರ ಪರೀಕ್ಷೆ ವರದಿ ಪಡೆದ ಬಳಿಕ, ವಲಸೆ ಕುರಿಗಾರರ ಆಧಾರ್‌ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಮಾಹಿತಿ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗುವುದು. ಮೃತ ಕುರಿಯೊಂದಕ್ಕೆ ಪರಿಹಾರವಾಗಿ ಸರ್ಕಾರದಿಂದ 5 ಸಾವಿರ ರೂ. ಸಿಗಲಿದೆ ಎಂದು ಡಾ. ಮಧುಕೇಶ್ವರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts