More

    ಎಲ್ಲರೂ ಭಾವೈಕ್ಯದಿಂದ ಬದುಕಲಿ


    ಬೈಲಹೊಂಗಲ: ಮಠ& ಮಂದಿರಗಳು ಸಮಾಜವನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಎಲ್ಲರೂ ಭಾವೈಕ್ಯದಿಂದ ಬದುಕಿ ಜೀವನ ರೂಪಿಸಿಕೊಳ್ಳಬೇಕು ಎಂದು ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು

    ಪಟ್ಟಣದ ಶ್ರಿನಗರ ಬಡಾವಣೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿದ್ದಾರೂಢ ಮಠದ ಉದ್ಘಾಟನೆ ಹಾಗೂ ಸಿದ್ಧಾರೂಢರ ಮೂರ್ತಿ ಪ್ರಾಣ ಪ್ರತಿಷಾಪ್ಠನಾ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು. ಸಿದ್ಧಾರೂಢರ ಮಠ ನಿರ್ಮಿಸಿ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಿರುವ ಸಮಿತಿ ಕಾರ್ಯ ಶ್ಲಾನೀಯ. ಮಾನವ ಜನ್ಮ ಸಾರ್ಥಕವಾಗಬೇಕಾದರೆ ಗುರುವಿನ ಸಂಗ ಇರಬೇಕು. ಮಠದಲ್ಲಿ ನಿರಂತರ ಅಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳು ನಡೆಯಲಿ ಎಂದರು.

    ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಭಾರತದ ಪುಣ್ಯಭೂಮಿಯಲ್ಲಿ ಅನೇಕ ಸಾಧು&ಸತ್ಪುರುಷರು ಆಗಿ ಹೋಗಿದ್ದಾರೆ. ಅದರಲ್ಲಿ ಪವಾಡ ಪುರುಷ ಸಿದ್ಧಾರೂಢರ ಆದರ್ಶಗಳನ್ನು ಎಲ್ಲರು ಅಳವಡಿಸಿಕೊಳ್ಳಬೇಕು ಎಂದರು. ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ.ಮಹಾಂತೇಶ ಆರಾದ್ರಿಮಠ ಸಾನ್ನಿಧ್ಯ ವಹಿಸಿದ್ದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯತೆ ವಹಿಸಿದ್ದರು. ಮಕ್ಕಳಿಂದ ಭಕ್ತೀಗಿತೆ ಕಾರ್ಯಕ್ರಮ ಜರುಗಿತು. ವಿವಿಧ ೇತ್ರಗಳ ಸಾಧಕರನ್ನು ಸತ್ಕರಿಸಲಾಯಿತು.

    ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ, ಮಠದ ಸೇವಾ ಅಭಿವದ್ದಿ ಸಂದ ಅಧ್ಯ ರುದ್ರಗೌಡ ಗೌಡತಿ, ಪುರಸಭೆ ಮಾಜಿ ಅಧ್ಯ ಬಸವರಾಜ ಜನ್ಮಟ್ಟಿ, ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಪುರಸಭೆ ಸದಸ್ಯ ಸುಧೀರ ವಾಲಿ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಎ್​.ಎಸ್​.ಸಿದ್ದನಗೌಡರ, ಡಾ.ಮಹಾಂತೇಶ ಕಳ್ಳಿಬಡ್ಡಿ, ಅದೃಶ್ಯಪ್ಪ ಶಿದ್ರಾಮನಿ, ಶಿಕ ಎಂ.ಪಿ.ಉಪ್ಪಿನ, ಬಿ.ವೈ.ಅಂಕಲಗಿ, ಶಿವಾನಂದ ದಾಸನಕೊಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts