More

    ಎಲುಬಿನ ಸಾಂದ್ರತೆ ಕುಸಿದರೆ ಕಷ್ಟ

    ಹುಬ್ಬಳ್ಳಿ: ಮೂಳೆಗಳ ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರೂ ನಿತ್ಯ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಬೇಕು ಎಂದು ಎಲುವು-ಕೀಲು ವಿಭಾಗ ಮುಖ್ಯಸ್ಥ ಡಾ. ಸೂರ್ಯಕಾಂತ ಕಲ್ಲೂರಾಯ ಹೇಳಿದರು.

    ವಿಶ್ವ ಟ್ರಾಮಾ ದಿನಾಚರಣೆ ಪ್ರಯುಕ್ತ ಹು-ಧಾ ಆಥೋಪೆಡಿಕ್ ಅಸೋಸಿಯೇಶನ್ ಜಂಟಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೆಬಿನಾರ್ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯಲ್ಲೇ ಸಿದ್ಧಪಡಿಸಿದ ಪೌಷ್ಟಿಕ ಆಹಾರ ಸೇವಿಸಬೇಕು. ಕುರುಕುಲು ತಿನಿಸು ಸೇವಿಸಬಾರದು. ಲಾಕ್​ಡೌನ್ ಮತ್ತು ನಂತರದ ಅವಧಿಯಲ್ಲಿ ಸಂಪರ್ಕ ಸಾಧನಗಳ ಕೊರತೆ, ನಿರ್ಲಕ್ಷ್ಯ ಇತ್ಯಾದಿ ಕಾರಣದಿಂದ 120ರಷ್ಟು ಮೂಳೆ ಮುರಿತ ಪ್ರಕರಣಗಳು ತಡವಾಗಿ ಆಸ್ಪತ್ರೆಗೆ ಬಂದಿವೆ. ಬೇಗ ಬಂದರೆ ಪರಿಹಾರ ಸುಲಭವಾಗುತ್ತದೆ. ಈಗಲೂ ಕಿಮ್ಸ್​ನಲ್ಲಿ ನಿತ್ಯ 10-12 ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

    ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, 45-50 ವರ್ಷವಾಗುತ್ತಿದ್ದಂತೆ ಕೀಲುಗಳು ಸವೆಯತೊಡಗುತ್ತವೆ. ಸಾಂದ್ರತೆ ಕಡಿಮೆಯಾಗುತ್ತದೆ. ಮನೆಯಲ್ಲೇ ಬಿದ್ದರೂ ಮೂಳೆ ಮುರಿಯಬಹುದು. ಮಹಿಳೆಯರಲ್ಲಿ ಎಲುಬಿನ ಸಾಂದ್ರತೆ ಕುಸಿತ ಹೆಚ್ಚು. ಆದ್ದರಿಂದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಲಕ್ಷ್ಯ ಹಾಕಬೇಕು ಎಂದು ಹೇಳಿದರು.

    ಕಿಮ್್ಸ ಎಲುವು-ಕೀಲು ವಿಭಾಗವು ಕರೊನಾ ಸಂದರ್ಭದಲ್ಲಿಯೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಸದ್ಯ ಹೆಚ್ಚು ಜನ ಸೇರಲು ಅವಕಾಶ ಇಲ್ಲದ್ದರಿಂದ ವೆಬಿನಾರ್​ನಂಥ ಚಟುವಟಿಕೆಗೆ ಆದ್ಯತೆ ನೀಡಿದ್ದೇವೆ. ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

    ಡಾ. ರಾಜಶೇಖರ ದ್ಯಾಬೇರಿ ಸುದ್ದಿಗೋಷ್ಠಿಯಲ್ಲಿದ್ದರು.

    ವೈದ್ಯರೆಲ್ಲ ಸುರಕ್ಷಿತ: ಕರೊನಾ ಸೇನಾನಿಗಳಾಗಿ ಕೆಲಸ ಮಾಡುತ್ತಿರುವ ಕಿಮ್ಸ್​ನ ಹಲವು ವೈದ್ಯರಿಗೂ ಸೋಂಕು ತಗುಲಿತ್ತು. ಅವರೆಲ್ಲರೂ ಉಪಚಾರ ಪಡೆದು ಗುಣವಾಗಿದ್ದಾರೆ. ಎಲ್ಲ ವೈದ್ಯರೂ ಸುರಕ್ಷಿತವಾಗಿದ್ದಾರೆ. ಪುನಃ ಅವರು ರೋಗಿಗಳ ಸೇವೆಗೆ ಹಾಜರಾಗಿದ್ದಾರೆ ಎಂದು ನಿರ್ದೇಶಕ ಡಾ. ಅಂಟರತಾನಿ ತಿಳಿಸಿದರು. ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕರೊನಾ ಸದ್ಯ ಇಳಿಮುಖವಾಗಿದೆ. ನಿತ್ಯ ಶೇ. 10-15 ಪ್ರಕರಣ ಕಡಿಮೆ ಬರುತ್ತಿವೆ. ಜನರಲ್ಲಿ ಜಾಗೃತಿ, ಸುರಕ್ಷತಾ ಕ್ರಮ ವಹಿಸುವಿಕೆ, ಸಾಮೂಹಿಕ ರೋಗನಿರೋಧಕ ಶಕ್ತಿ ಹೆಚ್ಚಳ ಇದಕ್ಕೆ ಕಾರಣ ಇರಬಹುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts