More

    ಎರಡು ಹೊಸ ಕರೊನಾ ಪ್ರಕರಣ

    ಕಾರವಾರ: ಜಿಲ್ಲೆಯಲ್ಲಿ ಶುಕ್ರವಾರ ಎರಡು ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಿಂದ ಆಗಮಿಸಿ ಯಲ್ಲಾಪುರದಲ್ಲಿ ಕ್ವಾರಂಟೈನ್​ನಲ್ಲಿದ್ದ 49 ವರ್ಷದ ಪುರುಷನಿಗೆ (ಯುಕೆ-92) ರೋಗ ಇರುವುದು ಖಚಿತವಾಗಿದೆ. ಇನ್ನೊಂದು ಭಟ್ಕಳದಲ್ಲಿ ವಿಜಯವಾಡದಿಂದ ಆಗಮಿಸಿ, ಹೋಂ ಕ್ವಾರಂಟೈನ್​ನಲ್ಲಿದ್ದ 29 ವರ್ಷದ ಮಹಿಳೆ (ಯುಕೆ-91) ರೋಗ ಖಚಿತವಾಗಿದ್ದು, ಆಕೆ ವಾಸವಿದ್ದ ಸಬ್ನಂ ಸ್ಟ್ರೀಟ್ ಭಾಗದಲ್ಲಿ ಜನರ ಸಂಚಾರ ನಿಷೇಧಿಸಲಾಗಿದೆ. ಎಲ್ಲರನ್ನು ಕಾರವಾರ ಕ್ರಿಮ್್ಸ ಆಸ್ಪತ್ರೆಗೆ ರವಾನಿಸಲಾಗಿದೆ.

    ಕತಾರ್​ನಿಂದ ಆಗಮಿಸಿ ಬೆಂಗಳೂರಿನಲ್ಲಿ ಏಳು ದಿನ ಕ್ವಾರಂಟೈನ್ ಮುಗಿಸಿ ಕಾರವಾರಕ್ಕೆ ಆಗಮಿಸಿದ್ದ 34 ವರ್ಷದ ವ್ಯಕ್ತಿಯ ಎರಡನೇ ಹಂತದ ಗಂಟಲ ದ್ರವ ಪರೀಕ್ಷೆಯಲ್ಲಿ ರೋಗ ಪತ್ತೆಯಾಗಿದ್ದು, ಅವರನ್ನು ಕ್ರಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಈ ವಿಷಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್​ನಲ್ಲಿ ಇನ್ನಷ್ಟೇ ಪ್ರಕಟವಾಗಬೇಕಿದೆ. ಜಿಲ್ಲೆಯ ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆಯಾಗಿದ್ದು, 36 ಜನರು ಕ್ರಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    8 ಜನರ ಬಿಡುಗಡೆ: ಕರೊನಾದಿಂದ ಗುಣಮುಖರಾದ 8 ಜನರನ್ನು ಶುಕ್ರವಾರ ಕ್ರಿಮ್್ಸ ಕರೊನಾ ವಾರ್ಡ್​ನಿಂದ ಬಿಡುಗಡೆ ಮಾಡಲಾಯಿತು. ಮುಂಡಗೋಡಿನ 8 ವರ್ಷದ ಬಾಲಕ ಹಾಗೂ 24 ವರ್ಷದ ಯುವಕ, ಜೊಯಿಡಾದ 31 ವರ್ಷದ ಮಹಿಳೆ, ದಾಂಡೇಲಿಯ 24 ವರ್ಷದ ಯುವಕ, ಹೊನ್ನಾವರದ 24 ವರ್ಷದ ಯುವಕ, 34 ವರ್ಷದ ಮಹಿಳೆ, ಯಲ್ಲಾಪುರದ 16 ವರ್ಷದ ಬಾಲಕಿ ಹಾಗೂ 46 ವರ್ಷದ ಪುರುಷನನ್ನು ಬಿಡುಗಡೆ ಮಾಡಲಾಗಿದೆ ಎಂದು ನಿರ್ದೇಶಕ ಡಾ. ಗಜಾನನ ನಾಯಕ ತಿಳಿಸಿದ್ದಾರೆ.

    ಮುಂಬೈನಲ್ಲಿ ಕಾರವಾರದ ಮಹಿಳೆ ಸಾವು
    ಕಾರವಾರ:
    ಕುವೈತ್​ನಲ್ಲಿದ್ದ ಸದಾಶಿವಗಡದ ವ್ಯಕ್ತಿ ಕರೊನಾಗೆ ಬಲಿಯಾದ ನೆನಪು ಮಾಸುವ ಮೊದಲೇ ಮತ್ತೊಂದು ದುರ್ಘಟನೆ ನಡೆದಿದೆ. ಸದಾಶಿವಗಡದ ಮಹಿಳೆ ಮಬೆಲ್ ವಿಕ್ಟರ್ ಫರ್ನಾಂಡಿಸ್ (68) ಕರೊನಾದಿಂದ ಮುಂಬೈನಲ್ಲಿ ಗುರುವಾರ ಮೃತಪಟ್ಟಿದ್ದಾರೆ. ಕಳೆದ 16 ದಿನದಿಂದ ಅವರು ಆಸ್ಪತ್ರೆಯಲ್ಲಿದ್ದರು. ಅವರ ಪತಿ ವಿಕ್ಟರ್ ಫರ್ನಾಂಡಿಸ್ ಅವರಿಗೂ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದಾಶಿವಗಡ ಮಹಾಮಾಯಾ ದೇವಸ್ಥಾನದ ಸಮೀಪ ವಿಕ್ಟರ್ ಅವರ ಪೂರ್ವಜರ ಮನೆಯಿತ್ತು. ಇಲ್ಲಿ ಇರುತ್ತಿದ್ದ ದಂಪತಿ ಕಳೆದ ಮಾರ್ಚ್ ಪ್ರಾರಂಭದಲ್ಲಿ ಮುಂಬೈನಲ್ಲಿದ್ದ ಮಗನ ಮನೆಗೆ ತೆರಳಿದ್ದರು. ಮಬೆಲ್, ವಿಕ್ಟರ್ ದಂಪತಿಗೆ ಪುತ್ರಿ, ಇಬ್ಬರು ಪುತ್ರರು ಇದ್ದು, ಮುಂಬೈನಲ್ಲೇ ವಾಸವಿದ್ದಾರೆ. ಮಬೆಲ್ ಅವರ ಅಂತ್ಯ ಸಂಸ್ಕಾರವನ್ನು ಅಲ್ಲಿಯೇ ನಡೆಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts