More

    ಎರಡು ಅಪರೂಪದ ಗುರುಕುಲ ಆರಂಭ

    ಗೋಕರ್ಣ: ಗೋಕರ್ಣದಲ್ಲಿ ಹಲವು ಬಗೆಯ ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ. ಅಭಿವೃದ್ಧಿಗೆ ಪೂರ್ವಭಾವಿಯಾಗಿ ಶಾಸಕ ದಿನಕರ ಶೆಟ್ಟಿ ಅವರು ಉತ್ತಮ ರಸ್ತೆಗಳ ನಿರ್ವಣಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಶೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

    ಶ್ರೀ ರಾಮಚಂದ್ರಾಪುರ ಮಠದ ಅಶೋಕಾವನಕ್ಕೆ ಹೊಸದಾಗಿ ನಿರ್ವಿುಸುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

    ವಿಶ್ವದ ಏಕಮೇವ ಆತ್ಮಲಿಂಗ ತಾಣ ಮತ್ತು ಸರ್ವ ವಿದ್ಯಾ ವಿಶಾರದ ಆಂಜನೇಯನ ಜನ್ಮಭೂಮಿ ಗೋಕರ್ಣದಲ್ಲಿ ಶ್ರೀ ರಾಮಚಂದ್ರಾಪುರ ಮಠ ಎರಡು ಅಪರೂಪದ ಗುರುಕುಲಗಳನ್ನು ಆರಂಭಿಸಲಿದೆ ಎಂದರು.

    ಋಷಿಯುಗ ಮತ್ತು ನವಯುಗ ಸಮ್ಮಿಲನ: ಇಲ್ಲಿನ ಆಂಜನೇಯ ಜನ್ಮಭೂಮಿ ಬಳಿ ಪಶ್ಚಿಮ ಸಾಗರ ತೀರಕ್ಕೆ ಹೊಂದಿಕೊಂಡ ಶತಶೃಂಗ ಪರ್ವತದ ಪಾವನ ಶಿಖರದಲ್ಲಿ ಬಾಲಕರಿಗಾಗಿ ಸಾರ್ವಭೌಮ ಗುರುಕುಲ ಮತ್ತು ಬಾಲಕಿಯರಿಗಾಗಿ ರಾಜರಾಜೇಶ್ವರಿ ಗುರುಕುಲ ಎಂಬ ವಸತಿ ಶಾಲೆ ಪ್ರಾರಂಭವಾಗಲಿದೆ. ಅಶೋಕಾವನದಲ್ಲಿ ಆರಂಭವಾಗಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಲಭಿಸಲಿರುವ ಉಚ್ಚ ಶಿಕ್ಷಣಕ್ಕೆ ಪೀಠಿಕೆಯಾಗಿ ತತ್ಪೂರ್ವ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ. 4ನೇ ತರಗತಿಯಿಂದ ಪದವಿಪೂರ್ವದವರೆಗೆ ಇಲ್ಲಿ ಶಿಕ್ಷಣ ಕೊಡಲು ನಿರ್ಧರಿಸಲಾಗಿದೆ. ಸಮಕಾಲೀನ ಶಿಕ್ಷಣದ ಜತೆಗೆ ಭಾರತೀಯ ಸನಾತನ ಸಂಸ್ಕಾರಗಳಿಂದ ಒಡಗೂಡಿದ ಅಪರೂಪದ ಈ ಗುರುಕುಲ ಋಷಿಕುಲ ಮತ್ತು ನವಯುಗ ಶಿಕ್ಷಣಗಳ ಸಮ್ಮಿಲನ ಆಗಿರುತ್ತದೆ ಎಂದು ವಿವರಿಸಿದರು.

    ಪಂಚಾಯತಿ ಅಧ್ಯಕ್ಷೆ ಮಹಾಲಕ್ಷ್ಮೀ ಭಡ್ತಿ, ಉಪಾಧ್ಯಕ್ಷ ಶೇಖರ ನಾಯ್ಕ, ತಾಪಂ ಸದಸ್ಯ ಮಹೇಶ ಶೆಟ್ಟಿ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಜನ್ನು, ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ, ಗ್ರಾಪಂ ಮಾಜಿ ಅಧ್ಯಕ್ಷೆ ಸುಮನಾ ಗೌಡ, ಪಿಡಿಒ ವಿಜಯಕುಮಾರ, ಕಾರ್ಯದರ್ಶಿ ಶ್ರೀಧರ ಬೋಮ್ಕರ, ಶ್ರೀಮಠ ಸಮಿತಿಯ ದೇವಶ್ರವ ದೈವರಾತ ಶರ್ಮ, ಡಾ. ಪತಂಜಲಿ ಶರ್ಮ ಇತರರಿದ್ದರು.

    ರಸ್ತೆಗಳ ನವ ನಿರ್ವಣಕ್ಕೆ 10 ಕೋಟಿ ರೂ.:
    ನೂತನ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಕಾಮಗಾರಿ ಫಲಕ ಉದ್ಘಾಟಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಪ್ರಸಿದ್ಧ ಯಾತ್ರಾ ಸ್ಥಳ ಮತ್ತು ಪ್ರಮುಖ ಪ್ರವಾಸೋದ್ಯಮ ಕೇಂದ್ರ ಗೋಕರ್ಣದ ಮುಖ್ಯ ರಸ್ತೆಗಳ ನವ ನಿರ್ವಣಕ್ಕೆ 10 ಕೋಟಿ ರೂ.ಗಳಿಗೂ ಹೆಚ್ಚಿನ ಯೋಜನೆ ಜಾರಿಯಲ್ಲಿದೆ. 50 ಲಕ್ಷ ರೂ. ವೆಚ್ಚದ ಅಶೋಕಾವನ ರಸ್ತೆ ಸೇರಿ ಗೋಕರ್ಣ ಭಾಗಕ್ಕೆ ಮಂಜೂರು ಮಾಡಲಾದ ಹತ್ತಕ್ಕೂ ಹೆಚ್ಚಿನ ರಸ್ತೆ ಕಾಮಗಾರಿಗಳು ಸದ್ಯವೇ ಆರಂಭವಾಗಲಿವೆ. ಸಣ್ಣಬಿಜ್ಜೂರಿನಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಗೋಕರ್ಣ ಕ್ಷೇತ್ರದ ಮೊದಲ ಅಂಬೇಡ್ಕರ್ ಭವನ ನಿರ್ವಣವಾಗಲಿದೆ. ಶ್ರೀಗಳು ಯೋಜಿಸಿರುವ ಎಲ್ಲ ಶೈಕ್ಷಣಿಕ ಅಭಿಯಾನಗಳಿಗೆ ಅನುಕೂಲವಾಗುವಂತೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts