More

    ಎರಡನೇ ಹಂತದ ಮತದಾನ ಇಂದು

    ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಡಿ. 27ರಂದು ನಡೆಯಲಿದ್ದು, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ 26, ಕುಂದಗೋಳ ತಾಲೂಕಿನ 23, ನವಲಗುಂದದ 14 ಹಾಗೂ ಅಣ್ಣಿಗೇರಿಯ 8 ಸೇರಿ ಒಟ್ಟು 71 ಗ್ರಾಮ ಪಂಚಾಯಿತಿಗಳ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಚುನಾವಣೆ ಸಿಬ್ಬಂದಿಯನ್ನು ನಗರದ ಲ್ಯಾಮಿಂಗ್ಟನ್ ಶಾಲೆ ಮೈದಾನದಿಂದ ವಿವಿಧ ಗ್ರಾ.ಪಂ.ಗಳಿಗೆ ಕಳುಹಿಸಿಕೊಡಲಾಯಿತು.

    ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯಿತಿಯ 348 ಸದಸ್ಯರ ಆಯ್ಕೆಗೆ ಮತದಾನ ಜರುಗಲಿದೆ. 1036 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 57821 ಪುರುಷ, 55984 ಮಹಿಳೆ, 1 ಇತರೆ ಒಟ್ಟು 113806 ಮತದಾರರು ಇದ್ದಾರೆ.

    159 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 26 ಚುನಾವಣೆ ಅಧಿಕಾರಿ, 26 ಸಹಾಯಕ ಚುನಾವಣೆ ಅಧಿಕಾರಿ, 172 ಮತಗಟ್ಟೆ ಅಧ್ಯಕ್ಷಾಧಿಕಾರಿ, 176 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 352 ಮತಗಟ್ಟೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

    ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ಒಂದು ಮತಕ್ಷೇತ್ರಕ್ಕೆ ಅವಿರೋಧ ಆಯ್ಕೆ ನಡೆದಿದೆ. ಮಲ್ಲಿಗವಾಡ ಗ್ರಾಮದ 2 ಮತಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. 30 ಸೂಕ್ಷ 17 ಅತಿ ಸೂಕ್ಷ ಮತೆಗಟ್ಟೆ ಗುರುತಿಸಲಾಗಿದೆ.

    ಪೊಲೀಸ್ ಸಿಬ್ಬಂದಿ: ಗ್ರಾ.ಪಂ. ಚುನಾವಣೆಗೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ತಾಲೂಕಿಗೆ ಸಂಬಂಧಪಟ್ಟಂತೆ 300 ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಒಬ್ಬ ಡಿವೈಎಸ್​ಪಿ, 4 ಸಿಪಿಐ, 4 ಪಿಎಸ್​ಐ, 20 ಎಎಸ್​ಐ, 150 ಕಾನ್​ಸ್ಟೇಬಲ್, 65 ಕಾರಾಗೃಹ ಭದ್ರತಾ ಸಿಬ್ಬಂದಿ, 34 ಹೋಮ್ಾರ್ಡ್​ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. 2 ಕೆಎಸ್​ಆರ್​ಪಿ, 3 ಡಿಎಆರ್ ತುಕಡಿಗಳನ್ನು ಸನ್ನದ್ಧವಾಗಿರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ್ ನಾಸಿ, ನಗರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ತಾಲೂಕು ವೈದ್ಯಾಧಿಕಾರಿ ಆರ್.ಎಸ್. ಹಿತ್ತಲಮನಿ, ಗ್ರಾಮೀಣ ಸಿಪಿಐ ಆರ್.ಬಿ. ಗೋಕಾಕ್ ಇತರ ಅಧಿಕಾರಿಗಳು ಮಸ್ಟರಿಂಗ್ ನೇತೃತ್ವ ವಹಿಸಿದ್ದರು.

    ಆರೋಗ್ಯ ಸಿಬ್ಬಂದಿ ನೇಮಕ: ಕೋವಿಡ್​19 ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. 162 ಆರೋಗ್ಯ ಸಿಬ್ಬಂದಿ ಮತದಾನ ಜರುಗುವ ಬೂತ್​ಗಳಿಗೆ ನೇಮಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ವೈದ್ಯಾಧಿಕಾರಿಗಳನ್ನು ಚುನಾವಣೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಜರ್ ಹಾಗೂ ಪರಸ್ಪರ ಅಂತರ ಕಡ್ಡಾಯಗೊಳಿಸಲಾಗಿದೆ.

    ಮತ್ತೆ ವಾಮಾಚಾರ? : ಶನಿವಾರ ತಡರಾತ್ರಿ ಗ್ರಾಮದ 1 ನೇ ವಾರ್ಡಿನಲ್ಲಿ ನವಣೆ ಎರಚಿದ್ದು, ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಯಾರೋ ಉದ್ದೇಶ ಪೂರ್ವಕವಾಗಿ ಗೊಂದಲ ಸೃಷ್ಟಿಸುವ ದುರುದ್ದೇಶದಿಂದ ಈ ತರಹದ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಶುಕ್ರವಾರವಷ್ಟೇ 5 ಮತ್ತು 6 ವಾರ್ಡಿನಲ್ಲಿ ಮತದಾರರ ಮನೆಗಳ ಮುಂದೆ ನವಣೆ ಮತ್ತು ಸಾಸಿವೆ ಎಸೆಯಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts