More

    ಎಪಿಎಂಸಿ ವಹಿವಾಟು ಆರಂಭ

    ರಾಣೆಬೆನ್ನೂರ: ಎಪಿಎಂಸಿಯಲ್ಲಿ ಮತ್ತೆ ವ್ಯಾಪಾರ-ವಹಿವಾಟು ಆರಂಭಗೊಂಡಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ ಮಾ. 26ರಿಂದ ವಹೀವಾಟು ಸ್ಥಗಿತಗೊಂಡಿತ್ತು.

    ಕರೊನಾ ಭೀತಿ ನಡುವೆಯೇ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಎಪಿಎಂಸಿ ಆರಂಭಿಸಲಾಗಿದೆ. 16 ದಿನಗಳಿಂದ ರೈತರು, ವರ್ತಕರು, ಕೂಲಿ ಕಾರ್ವಿುಕರು ಇಲ್ಲದೆ ಎಪಿಎಂಸಿಯಿಂದ ಬಿಕೋ ಎನ್ನುತ್ತಿತ್ತು. ಇದೀಗ ಜೀವಕಳೆ ಬಂದಂತಾಗಿದೆ.

    ಗುರುವಾರ ಒಂದೇ ದಿನ 1,360 ಕ್ವಿಂಟಾಲ್ ಮೆಕ್ಕೆಜೋಳ, 950 ಹತ್ತಿ ಅಂಡಿಗೆ ಹಾಗೂ 716 ಚೀಲ ಶೇಂಗಾ ಆವಕವಾಗಿದೆ. ತಾಲೂಕಿನ ವಿವಿಧ ಗ್ರಾಮಗಳ ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದ್ದಾರೆ.

    200-300 ರೂ. ವ್ಯತ್ಯಾಸ: 16 ದಿನದ ಬಳಿಕ ವ್ಯಾಪಾರ ಆರಂಭಿಸಿದ್ದರೂ ಬೆಲೆಯಲ್ಲಿ ಹೇಳಿಕೊಳ್ಳುವಷ್ಟು ಬದಲಾವಣೆಯಾಗಿಲ್ಲ. ಕಳೆದ ತಿಂಗಳು 1 ಕ್ವಿಂಟಾಲ್ ಹತ್ತಿ 5300-5400 ರೂ.ವರೆಗೆ ಮಾರಾಟವಾಗಿದ್ದರೆ, ಗುರುವಾರ 5,169 ರೂ.ವರೆಗೆ ಮಾರಾಟವಾಗಿದೆ. 1 ಕ್ವಿಂಟಾಲ್ ಶೇಂಗಾಗೆ ಕಳೆದ ತಿಂಗಳು 5800-5900 ರೂ. ಇದ್ದರೆ, ಈಗ 5600 ರೂ. ಬೆಲೆಯಿದೆ.

    ಏರಿಕೆ ಕಂಡಿದ್ದರೂ ಪ್ರಯೋಜನವಿಲ್ಲ: ಕಳೆದ ತಿಂಗಳು ಮೆಕ್ಕೆಜೋಳ 1 ಕ್ವಿಂಟಾಲ್​ಗೆ 1200 ರೂ.ದಿಂದ 900 ರೂ.ವರೆಗೂ ಇಳಿಕೆಯಾಗಿತ್ತು. ಇದರಿಂದಾಗಿ ರೈತರು ಮೆಕ್ಕೆಜೋಳ ಮಾರಾಟವನ್ನೇ ಕೈ ಬಿಡುವ ಪರಿಸ್ಥಿತಿ ನಿರ್ವಣವಾಗಿತ್ತು. ಆದರೀಗ ಗುಣಮಟ್ಟದ ಹಾಗೂ ಸಂಪೂರ್ಣ ಒಣಗಿದ 1 ಕ್ವಿಂಟಾಲ್​ಗೆ ಮೆಕ್ಕೆಜೋಳಕ್ಕೆ 1425 ರೂ.ವರೆಗೆ ಬೆಲೆ ಬಂದಿದೆ.

    ಸದ್ಯ ಸ್ಥಳೀಯ ವ್ಯಾಪಾರಸ್ಥರು ಮಾತ್ರ ಖರೀದಿ ಮಾಡುತ್ತಿರುವ ಕಾರಣ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಖರೀದಿದಾರರು ಆಗಮಿಸಿದರೆ, ಇನ್ನೂ ಹೆಚ್ಚಿನ ಬೆಲೆ ಬರಲಿದೆ ಎಂಬುದು ಎಪಿಎಂಸಿ ಅಧಿಕಾರಿಗಳ ಅಭಿಪ್ರಾಯ. ಆದರೆ, ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ಕನಿಷ್ಠ 1750 ರೂ. ಸಿಗಬೇಕು. ಅಂದಾಗ ಮೆಕ್ಕೆಜೋಳ ಬೆಳೆಯಲು ಮಾಡಿದ ಖರ್ಚು ಸೇರಿ ಕೊಂಚ ಲಾಭ ದೊರೆಯುತ್ತದೆ. ಎರಡ್ಮೂರು ತಿಂಗಳ ಹಿಂದೆ 1800 ರೂ.ಗೆ ಕ್ವಿಂಟಾಲ್​ನಂತೆ ಮಾರಾಟವಾಗಿತ್ತು. ಈಗ 1425 ರೂ. ಬೆಲೆಯಿದ್ದರೂ ಪ್ರಯೋಜನವಾಗಲ್ಲ ಎಂಬುದು ರೈತರು ಅಭಿಪ್ರಾಯ.

    ಒಟ್ಟಿನಲ್ಲಿ ಬಂದ್ ಆಗಿ ಬಿಕೋ ಎನ್ನುತ್ತಿದ್ದ ಎಪಿಎಂಸಿ ಮಾರುಕಟ್ಟೆ ಮತ್ತೇ ವ್ಯಾಪಾರ-ವಹೀವಾಟು ಆರಂಭಿಸಿದ್ದು, ರೈತರಿಗೆ ಅನುಕೂಲವಾಗಿದೆ. ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ವ್ಯಾಪಾರಸ್ಥರು ಬರುವವರೆಗೂ ಬೆಲೆ ಕಡಿಮೆ ದೊರೆತರೂ ಉತ್ಪನ್ನವನ್ನು ಸದ್ಯ ಮಾರಾಟ ಮಾಡಿಕೊಳ್ಳಲು ರೈತರಿಗೆ ಅನುಕೂಲಕರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts