More

    ಎಪಆರ್‌ಪಿಗಾಗಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಯತ್ನ

    ಬೆಳಗಾವಿ: ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದ ಕಬ್ಬು ಬೆಳೆಗಾರರು, ರೈತ ಹೋರಾಟಗಾರರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದರು.

    ಸ್ವಲ್ಪ ಸಮಯದ ಬಳಿಕ ರೈತರನ್ನು ಬಿಡುಗಡೆ ಮಾಡಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಪ್ರತಿಭಟನೆಯಲ್ಲಿ ಭಾಗವಹಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುತ್ತಿದ್ದ ಸಾವಿರಾರು ಕಾರ್ಯಕರ್ತರು, ಕಬ್ಬು ಬೆಳೆಗಾರರನ್ನು ಬೆಳಗಾವಿ ನಗರ ಪ್ರವೇಶಿಸದಂತೆ ಪೊಲೀಸರು ತಡೆಹಿಡಿದರು. ಅಲ್ಲದೆ, ಹತ್ತರಗಿ, ಹಿರೇಬಾಗೇವಾಡಿ ಟೋಲ್ನಲ್ಲಿ ರೈತರನ್ನು ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಮತ್ತು ರೈತ ಹೋರಾಟಗಾರರ ಮಧ್ಯೆ ತೀವ್ರ ವಾಗ್ವಾದ ನಡೆಯಿತು.

    ಈಗಾಗಲೇ ಕೇಂದ್ರ ಸರ್ಕಾರವು ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶವಿಟ್ಟುಕೊಂಡು ರಿಕವರಿ ಹೆಚ್ಚಿಸಿ ನ್ಯಾಯ ಸಮ್ಮತ ಮತ್ತು ವೌಲ್ಯಾಧಾರಿತ (ಎ್ಆರ್‌ಪಿ) ದರ ಘೋಷಿಸುವ ಮೂಲಕ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡಿದೆ. ಕಾರ್ಖಾನೆಗಳ ಮಾಲೀಕರು ಎ್ಆರ್‌ಪಿ ಮುಂದಿಟ್ಟುಕೊಂಡು ಕಬ್ಬು ಕಟಾವು ಮತ್ತು ಸಾಗಣೆ (ಎಚ್‌ಆ್ಯಂಡ್‌ಟಿ) ಹೆಸರಿನಲ್ಲಿ ಟನ್ ಕಬ್ಬಿಗೆ 1 ಸಾವಿರ ರೂ.ಕಡಿತಗೊಳಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಕ್ಕರೆ ಕಾರ್ಖಾನೆಗಳು ಎಚ್ ಆ್ಯಂಡ್ ಟಿ ಹೊರತುಪಡಿಸಿ ಕಬ್ಬು ಟನ್‌ಗೆ ಕನಿಷ್ಠ 3,500 ರಿಂದ 5,000 ರೂ. ವರೆಗೆ ದರ ನೀಡಬೇಕು. ಆದರೆ, ಕಾರ್ಖಾನೆಗಳ ಮಾಲೀಕರು ಎ್ಆರ್‌ಪಿ ದರ ನೀಡುತ್ತಿಲ್ಲ. ಟನ್ ಕಬ್ಬಿಗೆ 2,500 ರೂ. ನೀಡುವುದಾಗಿ ಹೇಳುತ್ತಿವೆ. ಅಕಾರಿಗಳು ಪರೋಕ್ಷಾಗಿ ಕೂಡ ಕಾರ್ಖಾನೆಗಳ ಪರ ಕೆಲಸ ಮಾಡುತ್ತಿರುವುದರಿಂದ ರೈತರು ರಸ್ತೆಗಿಳಿದು ಹೋರಾಟ ಮಾಡಬೇಕಾಗಿದೆ. ಸರ್ಕಾರವು ಕೂಡಲೇ ಮಧ್ಯ ಪ್ರವೇಶಿಸಿ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಕಾರ್ಖಾನೆಗಳಿಗೆ ಕಬ್ಬು ನುರಿಸಲು ಅವಕಾಶ ಕಲ್ಪಿಸಿಕೊಡುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ, ಪ್ರಕಾಶ ನಾಯಕ, ವೀರೇಶ ಮಂಡ್ದೆ ಸೇರಿ ನೂರಾರು ರೈತರು ಇದ್ದರು.

    ಕಿತ್ತೂರು ಉತ್ಸವದಲ್ಲಿ ಸಚಿವರಿಗೆ ಗೆರಾವ್

    ರಾಜ್ಯ ಸರ್ಕಾರವು ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ಬದಲು ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ, ಕಿತ್ತೂರು ಉತ್ಸವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸಚಿವರಿಗೆ ೇರಾವ್ ಹಾಕುತ್ತೇವೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜೇರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts