More

    ಎನ್​ಪಿಎಸ್ ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ

    ಹುಬ್ಬಳ್ಳಿ: ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಕಿಮ್್ಸ ಎನ್​ಪಿಎಸ್ ನೌಕರರ ಸಂಘ, ವೈದ್ಯರು, ಶುಶ್ರೂಷಾಧಿಕಾರಿಗಳು, ಅರೆ ವೈದ್ಯಕೀಯ, ಲ್ಯಾಬ್ ಟೆಕ್ನಿಷಿಯನ್​ಗಳು, ನಗರದ ಕಿಮ್್ಸ ಆವರಣದಲ್ಲಿ ಮಂಗಳವಾರ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

    ನೌಕರರ ಭವಿಷ್ಯದ ಬದುಕು ಜಟಿಲವಾಗಲಿದೆ. ನಿಯತ್ತಾಗಿ ದುಡಿದರೂ ನಿವೃತ್ತಿ ನಂತರದ ದಿನಗಳು ಸಂಕಷ್ಟಕ್ಕೆ ದೂಡಲಿವೆ. ವಯಸ್ಸಾದ ಕಾಲದಲ್ಲೂ ನೆಮ್ಮದಿಯ ಜೀವನ ಕಳೆಯಲು ಸಾಧ್ಯವಿಲ್ಲ. ಹಿಮಾಚಲ ಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಎನ್​ಪಿಎಸ್ ರದ್ದುಗೊಳಿಸಿ, ನೌಕರರ ಬದುಕು ಸುಭದ್ರಗೊಳಿಸಲಾಗಿದೆ. ರಾಜ್ಯ ಸರ್ಕಾರವೂ ಎನ್​ಪಿಎಸ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

    ಡಾ. ಎಸ್.ಎಸ್. ಶಿರೋಳ, ಡಾ. ಮಂಜುನಾಥ ನೇಕಾರ, ಡಾ. ಶಕ್ತಿ ಪ್ರಸಾದ, ಡಾ.ಎ.ಎ. ನದಾಫ್, ಡಾ. ಕವಿತಾ ಏವೂರ, ಡಾ. ಸುರೇಶ ಹುಚ್ಚಣ್ಣವರ, ವಿಜಯ ಪಟ್ಟೇದ, ಸಂಜೀವ ಬೆನಕಟ್ಟಿ, ಪ್ರಥಮ ಪ್ರಭು, ಗಾಯತ್ರಿ, ಪ್ರತಿಭಾ, ಜಗದೀಶ ಕೆ., ಮಲ್ಲಿಕಾರ್ಜುನ ಹೊಸಮನಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts