More

    ಎಚ್.ಡಿ.ಕೋಟೆ ಅಭಿವೃದ್ಧಿಗೆ ಧ್ರುವ ಕೊಡುಗೆ ಅಪಾರ

    ಎಚ್.ಡಿ.ಕೋಟೆ: ತಾಲೂಕಿನ ಅಭಿವೃದ್ಧಿಯಲ್ಲಿ ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಅವರು ಕೊಡುಗೆ ಅಪಾರ ಎಂದು ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ ಸ್ಮರಿಸಿದರು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಆದಿ ಕರ್ನಾಟಕ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ ದಿ.ಆರ್.ಧ್ರವನಾರಾಯಣ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕೀಯದ ಹಲವು ದಾರಿಗಳನ್ನು ಹೇಳಿಕೊಟ್ಟು ಕಿರಿಯ ರಾಜಕಾರಣಿಗಳನ್ನು ಹುಟ್ಟುಹಾಕಿದ ಜನನಾಯಕ, ಅವರ ಹೆಸರಿನಲ್ಲಿ ಅಭಿಮಾನ ಬಳಗ ಕಟ್ಟುತ್ತೇವೆ ಎಂದಾಗ ಅದನ್ನು ತಿರಸ್ಕಾರ ಮಾಡಿದ ಸರಳ ಸಜ್ಜನಿಕೆಯ ನಾಯಕ ಎಂದು ಹೇಳಿದರು.

    ಮುಖಂಡ ಎಚ್.ಸಿ.ಲಕ್ಷ್ಮಣ್ ಮಾತನಾಡಿ, ಧ್ರುವನಾರಾಯಣ ಒಬ್ಬ ರಾಜಕೀಯದ ಮಾಣಿಕ್ಯ. ಇವತ್ತಿನ ಹೊಲಸು ರಾಜಕಾರಣದಲ್ಲಿ ಧ್ರುವನಾರಾಯಣ ಅವರಂತಹವರು ಮೌನವಾಗಿದ್ದು, ಎಲ್ಲರ ಮನಸ್ಸು ಗೆದ್ದವರು. ಮೌನವಿದ್ದುಕೊಂಡೇ ಅಭಿವೃದ್ಧಿ ಕೆಲಸವನ್ನು ಮಾಡಿ ಮನೆ ಮಾತಾಗಿದ್ದವರು ಎಂದು ಹೇಳಿದರು.

    ನಾಯಕ ಸಮಾಜದ ತಾಲೂಕು ಅಧ್ಯಕ್ಷ ಎಂ.ಸಿ.ದೊಡ್ಡನಾಯಕ, ಮುಖಂಡ ಎಂ.ಡಿ.ಮಂಚಯ್ಯ, ಆದಿ ಕರ್ನಾಟಕ ಮಹಾಸಭಾದ ಮಾಜಿ ಅಧ್ಯಕ್ಷರಾದ ಸೋಗಹಳ್ಳಿ ಶಿವಣ್ಣ, ಮುದ್ದಮಲ್ಲಯ್ಯ, ಮಲಾರ ಪುಟ್ಟಯ್ಯ, ಮರಿದೇವಯ್ಯ, ಶಿವಯ್ಯ, ಜೀವಿಕ ಬಸವರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟಸ್ವಾಮಿ, ಏಜಾಜ್ ಪಾಷ, ಮಾಲಾರ ಚಂದ್ರಶೇಖರ್, ಲಾಟರಿ ನಾಗರಾಜು, ಸಣ್ಣಕುಮಾರ್, ವಕೀಲರಾದ ಸಿದ್ದಪ್ಪಾಜಿ, ಸೋಮಶೇಖರ, ಶಿವರಾಜು, ಬನವಾಡಿ ರಮೇಶ್, ಕೆ.ಎಂ.ನಾಗರಾಜು, ದೇವರಾಜು, ಪುಟ್ಟಮಾದು, ಪ್ರಕಾಶ್ ಬುದ್ದ, ಉಯ್ಯಂಬಳ್ಳಿ ಸ್ವಾಮಿ, ವನಸಿರಿ ಶಂಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts