More

    ಎಚ್ಡಿಕೆಯನ್ನು ದಾರಿತಪ್ಪಿಸುತ್ತಿರುವ ಮುಖಂಡರು

    ನಾಗಮಂಗಲ: ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನೇ ಜೆಡಿಎಸ್‌ನಿಂದ ಹೊರಹಾಕುವಷ್ಟು ಚಾಣಾಕ್ಷತನ ಶಾಸಕ ಸುರೇಶ್‌ಗೌಡರಿಗಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆರೋಪಿಸಿದರು.


    ಪಟ್ಟಣದ ಟಿಬಿ ಬಡಾವಣೆಯಲ್ಲಿ ಶುಕ್ರವಾರ ತಮ್ಮ ಗೃಹಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಇಬ್ಬರು ನಾಯಕರು ಕುಮಾರಸ್ವಾಮಿ ಅವರಿಗೆ ಇಲ್ಲಸಲ್ಲದ ವಿಚಾರ ಕಿವಿಗೆ ಹಾಕಿ ಅವರನ್ನು ದಾರಿತಪ್ಪಿಸುತ್ತಿದ್ದಾರೆ. ಇವರಿಬ್ಬರೂ ನಾರಾಯಣಗೌಡರಿಗಿಂತ ಮೊದಲೇ ಬಿಜೆಪಿ ಸೇರಬೇಕಿತ್ತು. ಆದರೆ ಬಿಜೆಪಿಯೊಂದಿಗೆ ಸರಿಯಾಗಿ ವ್ಯವಹಾರ ಕುದುರದ ಕಾರಣ ಜೆಡಿಎಸ್‌ನಲ್ಲೇ ಉಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.


    ಮಾಜಿ ಸಿಎಂ ಕುಮಾರಸ್ವಾಮಿ ಒಳ್ಳೆಯ ವ್ಯಕ್ತಿ. ಆದರೆ ಅವರಿಗೆ ಹತ್ತಿರವಾಗಬೇಕೆಂದು ಜಿಲ್ಲೆಯ ನಾಯಕರು ಸಲ್ಲದ ಸಂಗತಿ ಹೇಳಿ ದಾರಿತಪ್ಪಿಸುತ್ತಿದ್ದಾರೆ. ಇವೆಲ್ಲಾ ಕುಮಾರಸ್ವಾಮಿ ಅವರಿಗೆ ತಿಳಿಯುತ್ತಿಲ್ಲ. ಶಾಸಕ ಸುರೇಶ್‌ಗೌಡ ಕೆಲವೊಂದು ಆಂತರಿಕ ವಿಷಯಗಳನ್ನು ಟ್ರ್ಯಾಪ್ ಮಾಡುವ ಮೂಲಕ ಕುಮಾರಸ್ವಾಮಿಯವರನ್ನೇ ಜೆಡಿಎಸ್‌ನಿಂದ ಹೊರ ಕಳಿಸುವಷ್ಟು ಚಾಣಾಕ್ಷತನ ಉಪಯೋಗಿಸುತ್ತಿದ್ದಾರೆಂದು ದೂರಿದರು.


    ಕುಮಾರಸ್ವಾಮಿ ಬಗ್ಗೆ ನನಗೆ ಅಪಾರ ಗೌರವವಿದೆ, ಆದರೆ ಬೆಂಗಳೂರಿನ ಸಭೆಯಲ್ಲಿ ಯಾಕೆ ನನ್ನ ಬಗ್ಗೆ ಅಷ್ಟೊಂದು ಹಗುರವಾಗಿ ಮಾತನಾಡಿದ್ದಾರೋ ಗೊತ್ತಿಲ್ಲ. ಬೆನ್ನಿಗೆ ಚೂರಿ ಹಾಕಿದವರು ಎಂದು ನನಗೆ ಯಾವ ಭಾವನೆಯಲ್ಲಿ ಹೇಳಿದ್ದಾರೋ ತಿಳಿಯುತ್ತಿಲ್ಲ. ನಾನು ಪಕ್ಷಕ್ಕೆ ಎಂದೂ ದ್ರೋಹ ಮಾಡಿಲ್ಲ ಎಂದರು.


    ಈಗ ನಾನು ಬೇಡವಾಗಿದ್ದೇನೆ: ಶಾಸಕ ಶಿವಲಿಂಗೇಗೌಡ, ಗುಬ್ಬಿವಾಸು, ಎ.ಟಿ.ರಾಮಸ್ವಾಮಿ ಅವರಂತೆ ನಾನು ಪಕ್ಷವನ್ನು ಬಿಟ್ಟವನಲ್ಲ. ಪಕ್ಷದಿಂದ ನನ್ನನ್ನು ಅವರೇ ಹೊರಹಾಕಿದ್ದಾರೆ. ಕಳೆದ ಚುನಾವಣೆಯ ಸಂದರ್ಭ ನನ್ನನ್ನು ಮತ್ತು ಸುರೇಶ್‌ಗೌಡರನ್ನು ಮನೆಗೆ ಕರೆಸಿಕೊಂಡ ಎಚ್.ಡಿ.ದೇವೇಗೌಡರು, ಚಲುವರಾಯಸ್ವಾಮಿಯನ್ನು ಸೋಲಿಸಲೇಬೇಕು. ಹಾಗಾಗಿ ಇಬ್ಬರೂ ಒಗ್ಗಟ್ಟಾಗಿರಿ ಎಂದು ಹೇಳಿದ್ದರು. ಚಲುವರಾಯಸ್ವಾಮಿಯನ್ನು ಕಳೆದ ಬಾರಿ ಸೋಲಿಸಲು ನನ್ನ ಸಹಕಾರ ಬೇಕಿತ್ತು. ಆದರೆ ಈಗ ಬೇಡವಾಯಿತೇ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಪ್ರತಾಪಸಿಂಹ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನೀಡಿದ ಹೇಳಿಕೆ ಗಮನಿಸಿದ್ದೇನೆ. ಇಂತಹ ಸ್ವಪತಿಷ್ಠೆಯ ಹೇಳಿಕೆ ನೀಡುವ ಮೊದಲು ತಮ್ಮ ಅವಧಿಯಲ್ಲಿ ಕಾಮಗಾರಿಗೆ ನೀಡಿರುವ ಸಹಕಾರದ ಬಗ್ಗೆ ದಾಖಲಾತಿಯನ್ನು ಬಹಿರಂಗಪಡಿಸಬೇಕು. ಈಗಾಗಲೇ ಬಹುತೇಕ ಮುಗಿದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪ್ರಧಾನಿ ಉದ್ಘಾಟಿಸುತ್ತಿರುವುದು ಸಮಂಜಸವಾಗಿದೆ ಎಂದರು. ಮುಖಂಡರಾದ ಮಂಜೇಗೌಡ, ಹೇಮರಾಜು, ಚನ್ನಪ್ಪ, ದೇವು, ಪಾಳ್ಯರಘು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts