More

    ಎಕ್ಸ್-ರೇ ವಿಭಾಗದಲ್ಲಿ ತಂತ್ರಜ್ಞರ ಕೊರತೆ

    ಸಾಗರ: ಕ್ಷ-ಕಿರಣ ವಿಭಾಗದಲ್ಲಿನ ಕೆಲಸಕ್ಕೆ ತಜ್ಞರ ಬೇಡಿಕೆ ಹೆಚ್ಚಿದೆ. ಕೋಟ್ಯಂತರ ರೂ. ವ್ಯಯಿಸಿ ಓದಿದ ಯುವ ವೈದ್ಯಕೀಯ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿರುವುದರಿಂದ ಕ್ಷ-ಕಿರಣ ವಿಭಾಗದಲ್ಲಿ ತಂತ್ರಜ್ಞರ ಕೊರತೆ ಎದುರಿಸುವಂತಾಗಿದೆ ಎಂದು ಉಪವಿಭಾಗೀಯ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಸುರೇಶ್ ತಿಳಿಸಿದರು.

    ಉಪವಿಭಾಗೀಯ ಆಸ್ಪತ್ರೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ನೌಕರರ ಸಂಘದಿಂದ ಕರ್ನಾಟಕ ರಾಜ್ಯ ಮೆಡಿಕಲ್ ರೆಡಿಯಾಜಿಕಲ್ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಶಾಖೆ ಅಧ್ಯಕ್ಷ ಎಸ್.ನಿಂಗರಾಜ್ ಅವರನ್ನು ಸನ್ಮಾನಿಸಿ ಮಾತನಾಡಿ, ಪ್ರಸ್ತುತ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ. ಚಿಕಿತ್ಸೆ ನೀಡಲು ವೈದ್ಯರು ಉನ್ನತಮಟ್ಟದ ಪರೀಕ್ಷಾ ಉಪಕರಣ ಇರಿಸಿಕೊಳ್ಳುವುದು ಅನಿವಾರ್ಯ ಎಂದರು.

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಸ್.ನಿಂಗರಾಜ್, ಶುಶ್ರೂಷಕರು ಮತ್ತು ಡಿ ದರ್ಜೆ ನೌಕರರಿಗೆ ಸರ್ಕಾರಿ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಕ್ಕೆ ಕೊಡುವ 15 ದಿನಗಳ ವೇತನವನ್ನು ನಮ್ಮ ವೃತ್ತಿಯವರಿಗೂ ನೀಡಬೇಕು. ನಮ್ಮದು ತುಂಬ ಅಪಾಯದ ವೃತ್ತಿ ಆಗಿರುವುದರಿಂದ ನಮಗೆ ಈಗ ಕೊಡುತ್ತಿರುವ ರಿಸ್ಕ್ ಭತ್ಯೆಯನ್ನು ಮೂಲವೇತನಕ್ಕೆ ಸೇರಿಸಿ ಶೇ.5ಕ್ಕೆ ಕಡಿಮೆ ಇಲ್ಲದಂತೆ ಕೊಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಕೇಂದ್ರ ಸಂಘದಿಂದ ಮನವಿ ಸಲ್ಲಿಸಲಾಗಿದೆ ಎಂದರು.

    ಆರೋಗ್ಯ ಇಲಾಖೆ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಮ.ಸ.ನಂಜುಂಡಸ್ವಾಮಿ, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಜಿ.ವೇಣುಗೋಪಾಲ್, ತಾಲೂಕು ಅಧ್ಯಕ್ಷ ವೈ.ಮೋಹನ್, ಪ್ರಮುಖರಾದ ಜುಬೇದಾ ಆಲಿ, ರಾಜಶೇಖರ ಎಚ್. ಈಳಿಗೇರ್, ಆರ್.ಎನ್.ರವಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts