More

    ಎಂಪಿಎಂ ಪುನಾರಂಭದ ಕನಸು ಭಗ್ನ!

    ಭದ್ರಾವತಿ: ಕೆಲ ವರ್ಷಗಳಿಂದ ಉತ್ಪಾದನೆ ಸ್ಥಗಿತಗೊಳಿಸಿರುವ ನಗರದ ಎಂಪಿಎಂ ಕಾರ್ಖಾನೆಯನ್ನು ಸರ್ಕಾರ ಪುನಃ ಆರಂಭಿಸುವುದೇ ಇಲ್ಲವೇ ಎಂಬ ಪ್ರಶ್ನೆಗೆ ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಸ್ಪಷ್ಟ ಉತ್ತರ ಸಿಕ್ಕಿದೆ.

    ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಅಧಿವೇಶನದಲ್ಲಿ ಎಂಪಿಎಂ ಕಾರ್ಖಾನೆ ಸರ್ಕಾರ ಪುನರ್ ಆರಂಭಿಸುವುದೇ ಇಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯನ್ನು ಮತ್ತೆ ಆರಂಭಿಸುವ ಯೋಚನೆ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

    ಕಾರ್ಖಾನೆಯ ಕಾರ್ಯಚಟುವಟಿಕೆಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದಿದ್ದಾರೆ. ಇದರಿಂದಾಗಿ ಕಾರ್ಖಾನೆ ಮುಚ್ಚುವುದು ಬಹುತೇಕ ಖಚಿತಗೊಂಡಿದ್ದು ಸರ್ಕಾರ ಕಾರ್ಖಾನೆಯನ್ನು ನಡೆಸುವ ಕನಸು ಕಮರಿದಂತಾಗಿದೆ.

    ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ವಿಆರ್​ಎಸ್ ಪಡೆಯದೆ ಉಳಿದಿರುವ ಎಲ್ಲ 220 ಕಾಯಂ ಕಾರ್ವಿುಕರನ್ನು ಸರ್ಕಾರದ ವಿವಿಧ ನಿಗಮ ಮಂಡಳಿಗಳಿಗೆ ನಿಯೋಜಿಸಬೇಕಿದ್ದು ಈಗಾಗಲೆ 117 ಉದ್ಯೋಗಿಗಳು ಹಾಗೂ ಅಧಿಕಾರಿಗಳು ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 103 ಕಾರ್ವಿುಕರಿಗೆ ನಿಗಮ ಮಂಡಳಿಗಳಲ್ಲಿ ನೇಮಿಸುವ ಕಾರ್ಯ ಮಾತ್ರ ಬಾಕಿ ಉಳಿದಿದೆ.

    ನಿಯೋಜನೆ ವಿಚಾರಕ್ಕೆ ಸಂಬಂಧಿಸಿ ಎಂಪಿಎಂ ಎಂಪ್ಲಾಯಿಸ್ ಅಸೋಸಿಯೇಶನ್ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಹಂತದಲ್ಲಿದ್ದು ನ್ಯಾಯಾಲಯವು ಮುಂದಿನ 4 ವಾರದೊಳಗೆ ಆದೇಶ ಹೊರಡಿಸುವಂತೆ ಕಾರ್ವಿುಕ ಇಲಾಖೆಗೆ ಆದೇಶಿಸಿದೆ. ಇಲಾಖೆಯೂ ವಿಚಾರಣೆ ನಡೆಸುತ್ತಿದ್ದು 103 ಕಾರ್ವಿುಕರ ಜವಾಬ್ದಾರಿ ಕಾರ್ವಿುಕ ಇಲಾಖೆಯ ಮೇಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ 1 ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಎಂಪಿಎಂ ಸಂಪೂರ್ಣ ಮುಚ್ಚಿ ಹೋಗುವ ಮೂಲಕ ಇತಿಹಾಸದ ಪುಟ ಸೇರುವುದು ಬಹುತೇಕ ಖಚಿತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts