More

    ಎಂಟು ದಿನದಲ್ಲಿ ಬರೊಬ್ಬರಿ 73.31 ಲಕ್ಷ ರೂ. ದಂಡ ವಸೂಲಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವರು ಕೊನೆಯ ದಿನವಾದ ಶನಿವಾರ ಬರೋಬ್ಬರಿ 25 ಲಕ್ಷ ರೂ. (ರಾತ್ರಿ 8.30ರ ಮಾಹಿತಿ) ದಂಡ ಪಾವತಿಸಿದ್ದಾರೆ.

    ಫೆ. 4ರಿಂದ 11ರವರೆಗೆ ಒಟ್ಟು ಕರ್ನಾಟಕ ಒನ್, ಪೊಲೀಸ್ ಠಾಣೆ ಹಾಗೂ ಪಿಡಿಎ ಡಿವೈಸ್ (ಯಂತ್ರ) ಮೂಲಕ 29,659 ಪ್ರಕರಣಗಳಿಂದ 73,31,925 ರೂ. ದಂಡ ಸಂಗ್ರಹವಾಗಿದೆ.

    ಪೊಲೀಸ್ ಇಲಾಖೆ ಹಳೆಯ ಪ್ರಕರಣಗಳಿಗೆ ಶೇ. 50 ರಷ್ಟು ರಿಯಾಯಿತಿ ಘೊಷಿಸಿದ ಹಿನ್ನೆಲೆಯಲ್ಲಿ ದಂಡ ವಸೂಲು ಮಾಡಲಾಗಿದೆ. ದಂಡ ಪಾವತಿಗೆ ಕರ್ನಾಟಕ ಒನ್ ಮತ್ತು ಪೊಲೀಸ್ ಠಾಣೆ, ಆಯಾ ವೃತ್ತಗಳಲ್ಲಿ ಪೊಲೀಸರಿಗೆ ಪಿಡಿಎ ಡಿವೈಸ್ (ಯಂತ್ರ) ಕೊಟ್ಟು ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ಪಾವತಿಸಲು ಅನುಕೂಲ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ದಿನ ಅಂದರೆ ಶುಕ್ರವಾರ (ಫೆ. 10)ರಂದು 10,91,150 ರೂ. ಹಾಗೂ ಶನಿವಾರ (ಫೆ. 11) 25,61,175 ರೂ. ಅತಿ ಹೆಚ್ಚು ದಂಡ ಸಂಗ್ರಹವಾಗಿದೆ.

    ದಿನಾಂಕ ಕರ್ನಾಟಕ ಒನ್ (ಪ್ರಕರಣ+ ದಂಡ ಪಾವತಿ), ಪೊಲೀಸ್ ಠಾಣೆ ಮತ್ತು ಪಿಡಿಎ ಡಿವೈಸ್ (ಪ್ರಕರಣ+ ದಂಡ ಪಾವತಿ)

    ಫೆ. 4 16 4200 1233 302950

    ಫೆ. 5 18 4500 1312 320750

    ಫೆ. 6 54 13500 2065 493975

    ಫೆ. 7 34 8500 2723 642675

    ಫೆ. 8 48 12000 3028 726075

    ಫೆ. 9 196 49000 3713 879475

    ಫೆ. 10 270 67500 4511 1091150

    ಫೆ. 11 614 154500 9824 2561175

    ———————————-

    ಒಟ್ಟು 29659 ಪ್ರಕರಣ, 73,31,925 ದಂಡ ಪಾವತಿ

    ಸಂಚಾರಿ ನಿಯಮ ಉಲ್ಲಂಘಿಸಿದವರಿಂದ ಶೇ. 50ರ ರಿಯಾಯಿತಿ ಆಧಾರದಲ್ಲಿ ದಂಡ ಪಾವತಿಸಿಕೊಳ್ಳಲಾಗುತ್ತಿದೆ. ಫೆ. 11ರಂದು ಮಧ್ಯರಾತ್ರಿ ವರೆಗೆ ಈ ಪ್ರಕ್ರಿಯೆ ಚಾಲನೆಯಲ್ಲಿರಲಿದೆ. ಇನ್ನೂ 2-3 ಲಕ್ಷ ರೂ. ದಂಡ ಸಂಗ್ರಹವಾಗಬಹುದು.

    -ರಮಣ ಗುಪ್ತಾ, ಹು-ಧಾ ಪೊಲೀಸ್ ಆಯುಕ್ತ

    57 ಪ್ರಕರಣಕ್ಕೆ ದಂಡ ಪಾವತಿ

    ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ 57 ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಾಹನ ಸವಾರ ಸೂರಜ್ ಠಾಕೂರು, ಒಟ್ಟು 14,250 ರೂ. ದಂಡ ಪಾವತಿಸಿದ್ದಾರೆ.

    ಹಳೆಯ ಪ್ರಕರಣದಡಿ ಶೇ. 50ರಷ್ಟು ರಿಯಾಯಿತಿ ಘೊಷಣೆ ಪ್ರಕಟವಾದ ಹಿನ್ನೆಲೆಯಲ್ಲಿ ಖುದ್ದು ಪೊಲೀಸರ ಬಳಿ ತೆರಳಿ ದಂಡ ಪಾವತಿಸಿದ್ದಾರೆ. ಒಟ್ಟು 28,500 ರೂ. ದಂಡ ಪಾವತಿಸಬೇಕಿತ್ತು. ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿಯೂ ಶೇ. 50ರಷ್ಟು ರಿಯಾಯಿತಿ ಪ್ರಕಟವಾಗಿದ್ದರಿಂದ 14,250 ರೂ. ನಗರದ ಹಳೇ ಕೋರ್ಟ್ ವೃತ್ತದ ಬಳಿಯಿದ್ದ ಪೂರ್ವ ಸಂಚಾರಿ ಎಎಸ್​ಐ ಬಿ.ಬಿ. ಮಾಯಣ್ಣವರ, ಶಂಭು ರೆಡ್ಡೇರ, ಕುಬೇರ ಕಾರವಾರಿ ಅವರಿಗೆ ಪಾವತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts