More

    ಎಂಎಸ್ಎಸ್ ಕ್ವಿಜ್ ಸ್ಪರ್ಧೆ 16ಕ್ಕೆ

    ದಾವಣಗೆರೆ: ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಸ್ಥಾಪಕ ಡಾ.ಎಂ.ಎಸ್. ಶಿವಣ್ಣ ಅವರ ಗೌರವಾರ್ಥ ಏಪ್ರಿಲ್‌ 16ರಂದು ಬೆಳಿಗ್ಗೆ 11ಕ್ಕೆ ‘ಎಂಎಸ್ಎಸ್ ಕ್ವಿಜ್’ ಸ್ಪರ್ಧೆ ಆಯೋಜಿಸಲಾಗಿದೆ ಸಂಸ್ಥೆಯ ನಿರ್ದೇಶಕ ಡಾ.ಡಿ.ಎಸ್. ಜಯಂತ್ ತಿಳಿಸಿದರು.

    9 ವರ್ಷಗಳಿಂದ ರಾಜ್ಯಮಟ್ಟದ ಸ್ಪರ್ಧೆ ನಡೆಸುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿಯ ಗಣಿತ ಹಾಗೂ ವಿಜ್ಞಾನ ಪಠ್ಯಕ್ರಮ ಆಧರಿಸಿ ಪ್ರಶ್ನೆ ನೀಡಲಾಗುವುದು. ಸ್ಪರ್ಧೆ ಲಿಖಿತ ರೂಪದಲ್ಲಿ ನಡೆಯಲಿದೆ. ಬಹು ಆಯ್ಕೆಯ 60 ಪ್ರಶ್ನೆಗಳು ಇರಲಿವೆ. ಈಗಾಗಲೇ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ರಸಪ್ರಶ್ನೆ ಸ್ಪರ್ಧೆಗೆ ಬರುವ ದೂರದೂರಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇದ್ದು, ಅಂದು ಬೆಳಿಗ್ಗೆ 9ರಿಂದ 10.30ರವರೆಗೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಿಂದ ದೂರದೂರಿನ ವಿದ್ಯಾರ್ಥಿಗಳನ್ನು ಕರೆತರಲು ಸಿದ್ಧಗಂಗಾ ಶಾಲೆಯ ವಾಹನಗಳ ವ್ಯವಸ್ಥೆ ಇದೆ ಎಂದರು.

    ಅಂದು ಬೆಳಿಗ್ಗೆ 9ರಿಂದ ನೋಂದಣಿ ಪ್ರಕ್ರಿಯೆ ನಡೆಯಲಿದೆ. ವಿಜೇತರಿಗೆ ಪ್ರಥಮ ₹ 25,000, ದ್ವಿತೀಯ ₹ 15,000 ಮತ್ತು ತೃತೀಯ ₹ 10,000 ನಗದು ಬಹುಮಾನ ಹಾಗೂ ‌ಆಕರ್ಷಕ ಸ್ಮರಣಿಕೆ, ಮೆಡಲ್ ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. ₹ 1000 ನಗದು ಪುರಸ್ಕಾರದ 10 ಸಮಾಧಾನಕರ ಬಹುಮಾನ ಮತ್ತು 1000 ವಿದ್ಯಾರ್ಥಿಗಳಿಗೆ ಮೆಡಲ್‌ ನೀಡಲಾಗುವುದು ಎಂದರು.

    ವಿದ್ಯಾರ್ಥಿಗಳು ‌8073054295 ನಂಬರ್‌ಗೆ ಹೆಸರು ಹಾಗೂ ಶಾಲೆಯ ಹೆಸರನ್ನು ವಾಟ್ಸ್‌ಆ್ಯಪ್‌ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

    ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ, ಕಾರ್ಯದರ್ಶಿ ಡಿ.ಎಸ್. ಹೇಮಂತ್, ಸಿಬಿಎಸ್‍ಇ ಶಾಲೆಯ ಪ್ರಾಚಾರ್ಯೆ‌ ಗಾಯತ್ರಿ ಚಿಮ್ಮಡ್‌, ಪ್ರೌಢಶಾಲೆ ಮುಖ್ಯಶಿಕ್ಷಕಿ ರೇಖಾರಾಣಿ, ಹಿರಿಯ ವಿದ್ಯಾರ್ಥಿ ಮನೋಹರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts