More

    ಎಂಎಲ್ಸಿ ಎಲೆಕ್ಷನ್ ಬೆನ್ನಲ್ಲೇ ರಂಗೇರಿದ ಶಿರಾ ನಗರಸಭೆ ಚುನಾವಣೆ: 291 ನಾಮಪತ್ರ ಸಲ್ಲಿಕೆ, ಇದೇ ಮೊದಲ ಸಲ ತ್ರಿಕೋನ ಸ್ಫರ್ಧೆ

    ಶಿರಾ: ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಶಿರಾ ನಗರಸಭೆ ಚುನಾವಣೆ ರಂಗೇರಿದೆ.
    ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಬುಧವಾರ 291 ನಾಮಪತ್ರ ಸಲ್ಲಿಕೆಯಾಗಿದ್ದು, ಕದನ ಕಾವೇರಿದೆ.

    ನಗರಸಭೆಯ 31 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, ಇದೇ ಮೊದಲ ಸಲ ತ್ರಿಕೋನ ಸ್ಫರ್ಧೆ ಏರ್ಪಟ್ಟಿದೆ, ನಗರದಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆಯಷ್ಟೇ ನಡೆಯುತ್ತಿದ್ದ ಬಿಗ್‌ಪೈಟ್ ಈ ಭಾರಿ ಬಿಜೆಪಿ ನಡುವೆಯೂ ನಡೆಯುವ ಸಾಧ್ಯತೆಯಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ತಾಲೂಕಿನಲ್ಲಿ ಪ್ರಬಲ ಎನಿಸಿಕೊಳ್ಳಲು ಈ ಚುನಾವಣೆ ವೇದಿಕೆ ಎನಿಸಿದೆ.

    ಹಿಂದಿನಿಂದಲೂ ನಗರಸಭೆಯಲ್ಲಿ ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಕೆಲವು ವಾರ್ಡ್‌ಗಳಲ್ಲಿ ಟಿಕೆಟ್ ವಂಚಿತರಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ, ಜೆಡಿಎಸ್ ಕೂಡ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ್ದು ಯಾರ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ ಎಂಬ ಅನುಮಾನವಿದೆ.

    ಶಾಸಕ ಡಾ.ರಾಜೇಶ್‌ಗೌಡ ಹಾಗೂ ನಿಗಮ ಮಂಡಳಿ ಅಧ್ಯಕ್ಷರಾದ ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ್ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿರುವುದು ಶಿಸ್ತಿನ ಪಕ್ಷದಲ್ಲಿ ಅಸಮಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ವಿಧಾನಸಭಾ ಉಪಚುನಾವಣೆ ನಂತರ ಪಕ್ಷದ ಚಿನ್ಹೆಯಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು ಬಿಜೆಪಿಗೆ ಪ್ರತಿಷ್ಠೆ ಎನಿಸಿದೆ.

    ಸ್ಥಳೀಯ ಮುಖಂಡರ ಪಕ್ಷಾಂತರ: ನಾಮಪತ್ರ ಸಲ್ಲಿಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಟಿಕೆಟ್ ಅಸಮಾಧಾನಿತರು ಪಕ್ಷಾಂತರ ಮಾಡುವ ಸಾಧ್ಯತೆಯಿದ್ದು, ಮುಖಂಡರನ್ನು ಸೆಳೆಯಲು ಮೂರು ಪಕ್ಷಗಳು ಕಸರತ್ತು ನಡೆಸಿವೆ. ನಗರಸಭಾ ಮಾಜಿ ಸದಸ್ಯ ವಿ.ನಟರಾಜು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೆಲವು ಮುಖಂಡರು ಕಾಂಗ್ರೆಸ್ ತೊರೆಯುವ ಸಾಧ್ಯತೆಯೂ ಇದೆ.

    ‘ಕೈ’ ಹುರಿಯಾಳುಗಳು: ಲಿಂಗರಾಜು(1ನೇ ವಾರ್ಡ್), ಸಿ.ಜಿ.ತೇಜು(2), ದೇವರಾಜು(3), ಜಿ.ಮಂಜುಳ(4), ಎಸ್.ಎಂ.ರಂಗನಾಥ್(5), ಜಿ.ಪದ್ಮ(6), ಶಿವಶಂಕರ್(7), ಎಸ್.ರಾಜಣ್ಣ(8), ಕೃಷ್ಣಪ್ಪ(9), ರಾಮಕೃಷ್ಣಪ್ಪ(10), ಮಹಮದ್‌ಜಾಫರ್ ಅಹಮದ್(11), ಮೀಸಿನಾಬಾನು(12), ಲೋಕೇಶ್(13), ರಫಿಉಲ್ಲಾ(14), ರೆಹನಾಬಾನು(15), ಸೈಯದ್ ಮುರ್ಜಿಯಾ(16), ಜೀಶಾನ್ ಮೊಹಮ್ಮದ್(17), ಬುರಾನ್‌ಮೊಹಮದ್(18) ರೂಖಿಯಾ ಫರ್‌ವಿನ್(19), ರೇಹನಾಖಾನಂ(20), ಚಾಂದ್‌ಪಾಷ(21), ಹಬೀಬ್‌ಖಾನ್(22), ಬಿ.ಬಿ.ಫಾತಿಮಾ(23), ನಾಜೀಮಾ(24), ಮಹೇಶ್‌ಕುಮಾರ್(25), ಲಕ್ಷ್ಮಿಕಾಂತ್(26), ಟಿ.ಕೌಶಲ್ಯಾ(27), ಪಿ.ಎಸ್.ತ್ಯಾಗರಾಜು(28), ಎಂ.ಎಸ್.ಶಾಂತ(29) ಹಾಗೂ 30ನೇ ವಾರ್ಡ್‌ಗೆ ಪೂಜಾ ಅವರನ್ನು ಕಣಕ್ಕಿಳಿಸಿದ್ದು ಸಾಕಷ್ಟು ವಾರ್ಡ್‌ಗಳಲ್ಲಿ ಟಿಕೆಟ್ ವಂಚಿತರ ಅಸಮಧಾನವಿದೆ.

    ಜೆಡಿಎಸ್ ಅಭ್ಯರ್ಥಿಗಳು: ಹೇಮಂತ್‌ಕುಮಾರ್(1), ಉಮಾಶ್ರೀ(2), ಮಂದಾರ(3), ತ್ರಿವೇಣಿ(4), ಅಂಜಿನಪ್ಪ(5), ರೇಣುಕಮ್ಮ(6), ಕೆ.ರವಿಶಂಕರ್(9), ಭೂಮಿಕಾ(10), ಮುಬಾರಕ್(11), ವಹೀದಾಬಾನು(12), ಮಹಮ್ಮದ್‌ಸಫೀರ್(13), ಫೌಜಿಯಾಬಾನು(15), ಆಯಿಷಾಸಿದ್ಧಿಕ್(16), ರಹಮತ್ ಉಲ್ಲಾಖಾನ್(18), ಸಲೀಂ ಉನ್ನಿಸಾ(19), ಮೊಹಸೀನ ಖಾನಂ(20), ಹಮೀದ್‌ವಾಸಿಲ್(21), ಮಹಮದ್ ಸಾಧಿಕ್(22), ಸಾಹೇರಾಬಾನು(23), ರಜಿಯಾಬೀ(24) ಆರ್.ರಾಮು(25), ಪ್ರಸನ್ನಕುಮಾರ್(26), ಎಸ್.ಎಚ್.ಪಾರ್ವತಮ್ಮ(27), ವಿಜಯಲಕ್ಷ್ಮೀ(29), ಮಂಜುಳ(30) ಹಾಗೂ ಪಾಲಾಕ್ಷಿ(31) ಅಭ್ಯರ್ಥಿಯಾಗಿದ್ದು 26 ವಾರ್ಡ್‌ನಲ್ಲಿಯಷ್ಟೇ ಜೆಡಿಎಸ್ ಅಭ್ಯರ್ಥಿಗಳಿದ್ದಾರೆ.

    24 ವಾರ್ಡ್‌ಗಳಲಷ್ಟೇ ಕಮಲ ಕಲಿಗಳು: ರಂಗರಾಜು(1), ಯಶೋಧಮ್ಮ(2), ಎಸ್.ಎಚ್.ಉಮೇಶ್(3), ನಾಗಲಕ್ಷ್ಮೀ(4), ರವಿಕುಮಾರ್(5), ಮಂಜುಳ(6), ದೇವರಾಜು(7), ಶಂಕರಪ್ಪ(8), ಮಾರುತೀಶ್(9), ರಾಮಲಿಂಗಪ್ಪ(10), ಕೃಷ್ಣಚಾರ್(11), ಸುಶೀಲಮ್ಮ(12), ತುಳಸಿರಾಮ್(13), ಪಾಂಡುರಂಗಪ್ಪ(14), ಅಜಿಮಾಬಾನು(19), ಬಾಬಾ ದಾದಾಪೀರ್(22), ಭಾಗ್ಯಮ್ಮ(24), ರಜನಿಕಾಂತ್(25), ನರಸಿಂಹಮೂರ್ತಿ(26), ಅಂಬುಜಾಕ್ಷಿ(27), ಉಮಾ(28), ನಾಗರತ್ನ(29), ಸ್ವಾತಿ(30), ಸುಮಾ(31ನೇ ವಾರ್ಡ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts