More

    ಎಂಆರ್‌ಐ ಸ್ಕಾೃನಿಂಗ್ ಸೇವೆಗೆ ಲಭ್ಯ ; ತಾಂತ್ರಿಕ ದೋಷ ನಿವಾರಣೆ ; ಬಡ ರೋಗಿಗಳಿಗೆ ಅನುಕೂಲ

    ತುಮಕೂರು: ಕೆಲವು ದಿನಗಳಿಂದ ಜಿಲ್ಲಾಸ್ಪತ್ರೆ ಎಂಆರ್‌ಐ ಸ್ಕಾೃನಿಂಗ್ ಸೆಂಟರ್‌ಗೆ ಬಡಿದಿದ್ದ ಗ್ರಹಣ ಬಿಟ್ಟಿದ್ದು, ತಾಂತ್ರಿಕ ತೊಂದರೆ ಸರಿಪಡಿಸಿಕೊಂಡು ಸೇವೆಗೆ ಸಿದ್ಧವಾಗಿದೆ.

    ಕರೊನಾದಿಂದ ಚೇತರಿಸಿಕೊಂಡ ನಂತರ ಬ್ಲ್ಯಾಕ್‌ಂಗಸ್ ಪತ್ತೆಗೆ ಅಗತ್ಯವಾಗಿರುವ ಎಂಆರ್‌ಐ ಸ್ಕಾೃನಿಂಗ್ ಮಾಡಿಸಲು ಖಾಸಗಿ ಲ್ಯಾಬ್‌ಗಳಲ್ಲಿ 6 ಸಾವಿರ ರೂ. ಪಡೆಯುತ್ತಿದ್ದು, ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಯಂತ್ರವಿದ್ದರೂ ಉಪಯೋಗಕ್ಕೆ ಬರದಂತಾಗಿತ್ತು, ಈ ಬಗ್ಗೆ ಬುಧವಾರ ವಿಜಯವಾಣಿ ವರದಿ ಪ್ರಕಟಿಸಿ ಗಮನಸೆಳೆದಿತ್ತು.

    ಸ್ಕಾೃನಿಂಗ್ ಕೇಂದ್ರದಲ್ಲಿ ತಲೆದೂರಿದ್ದ ತಾಂತ್ರಿಕ ದೋಷ ಸರಿಪಡಿಸಿಕೊಂಡು ಬುಧವಾರದಿಂದಲೇ ಮತ್ತೆ ಸೇವೆ ನೀಡಲಾಗುತ್ತಿದ್ದು, ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲಿಯೇ ಸೇವೆ ಪಡೆಯಬಹುದಾಗಿದೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಎಂಆರ್‌ಐ ಸ್ಲ್ಯಾನ್ ಸೇವೆ ಉಚಿತವಾಗಿ ನೀಡಲಾಗುತ್ತಿತ್ತು, ಇತ್ತೀಚೆಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ ಹೆಚ್ಚಾದಾಗ ಎಂಆರ್‌ಐ ಸ್ಕಾೃನ್‌ಗೆ ಬೇಡಿಕೆ ಹೆಚ್ಚಾಗಿತ್ತು.

    ಕ್ರಸ್ನಾ ಡಯಾಗ್ನೋಸ್ಟಿಕ್ ಪ್ರೈ ಲಿ., ಜಿಲ್ಲಾಸ್ಪತ್ರೆಯಲ್ಲಿರುವ ಸ್ಕಾೃನಿಂಗ್ ಸೆಂಟರ್ ಸಹಯೋಗ ವಹಿಸಿಕೊಂಡಿದ್ದು ಬಡರೋಗಿಗಳು ಉಚಿತವಾಗಿ ಸ್ಕಾೃನಿಂಗ್ ಸೌಲಭ್ಯ ಪಡೆಯಬಹುದು ಎಂದು ಕ್ರಸ್ನಾ ಡಯಾಗ್ನೋಸ್ಟಿಕ್ ಪ್ರೈ ಲಿ., ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವೇಂದ್ರ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಎಂಆರ್‌ಐ ಸ್ಕಾೃನಿಂಗ್ ಅಗತ್ಯವಿರುವವರು ವೈದ್ಯರ ಶಿಾರಸು ಪತ್ರದ ಜತೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸ್ಕಾೃನಿಂಗ್ ಕೇಂದ್ರಕ್ಕೆ ಬಂದು ಸೇವೆ ಪಡೆಯಬಹುದು. ಮಾಹಿತಿಗೆ ಮೊ.8956500686, 7420014052 ಸಂಪರ್ಕಿಸಬಹುದು.

    ಐಸಿಯು ಕಿಟಕಿಯಲ್ಲಿ ಇಣುಕುವ ಜನ!: ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿರುವ ಐಸಿಯು ವಾರ್ಡ್ ಕಿಟಕಿಯಲ್ಲಿ ರಾತ್ರಿ ಪೂರ್ತಿ ರೋಗಿಗಳ ಸಂಬಂಧಿಕರು ಪದೇಪದೆ ಇಣುಕಿ ನೋಡುತ್ತಿರುವುದು ಇತರ ರೋಗಿಗಳಿಗೆ ನಿದ್ದೆ ಮಾಡಲು ತೊಂದರೆ ತಂದೊಡ್ಡಿದೆ.

    ರಾತ್ರಿ 12ರ ನಂತರ ವಾರ್ಡ್‌ನಲ್ಲಿರುವ ಸಿಬ್ಬಂದಿ ಕೊಠಡಿಗೆ ಬೀಗ ಹಾಕಿಕೊಂಡು ಮಲಗುತ್ತಾರೆ. ರೋಗಿಗಳು ಆಕ್ಸಿಜನ್ ಮಾಸ್ಕ್ ಕಿತ್ತುಕೊಂಡು ಉಸಿರುಗಟ್ಟುತ್ತಿದ್ದರೂ ಯಾರೂ ಗಮನಿಸುವುದಿಲ್ಲ. ಹಾಗಾಗಿ, ನಾವೇ ಪದೇಪದೆ ಕಿಟಕಿಯಲ್ಲಿ ಗಮನಿಸಬೇಕಿದೆ ಎಂದು ರೋಗಿಗಳ ಸಂಬಂಧಿಕರು ದೂರುತ್ತಾರೆ.

    ಇದೇ ಸಂದರ್ಭದಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೊನಾ ಸೋಂಕಿತರೊಬ್ಬರು ಆಕ್ಸಿಜನ್ ಮಾಸ್ಕ್ ಕಿತ್ತುಕೊಂಡು, ಮೈ ಮೇಲೆ ಬಟ್ಟೆಯೂ ಇಲ್ಲದಂತೆ ಉಸಿರುಕಟ್ಟಿ ಒದ್ದಾಡುತ್ತಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ರಾತ್ರಿ ಪಾಳಿಯ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts