More

    ಋಷಿ ಸಂಸ್ಕೃಯ ಕಲೆ ಯಕ್ಷಗಾನ

    ಹೊನ್ನಾವರ: ಅಷ್ಟ ರೀತಿಯ ಭಾರತೀಯ ನಾಟ್ಯಗಳು, ಹಲವು ರೀತಿಯ ಪಕ್ವ ವಾದ್ಯಗಳು, ಜಾನಪದ ಕಲೆಗಳು, ಯಕ್ಷಗಾನ ಪರಂಪರೆಗಳು ಋಷಿ ಸಂಸ್ಕೃಯ ಭಾಗಗಳಾಗಿ ಮಾನಸಿಕ ಸಂತೋಷ ನೀಡುವ ಭಾರತೀಯ ಸಂಸ್ಕೃಯ ವಿನ್ಯಾಸಗಳಾಗಿವೆ ಎಂದು ಆಳ್ವಾಸ್ ಫೌಂಡೇಷನ್​ನ ಡಾ. ಮೋಹನ್ ಆಳ್ವಾ ಹೇಳಿದರು.

    ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಭಾನುವಾರ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಶಿಕ್ಷಣ ಪಡೆಯುವ ದಾರಿಯಲ್ಲಿ ಈ ಭಾರತೀಯ ಸಂಸ್ಕೃಯ ಅಂಗೋಪಾಯಗಳನ್ನು ಪಠ್ಯವಾಗಿ ಕಲಿತರೆ ಅದನ್ನು ಉಳಿಸಿ, ಬೆಳೆಸಲು ಸಾಧ್ಯ. ತನ್ಮೂಲಕ ಸುಂದರ ಮನಸ್ಸನ್ನು ಕಟ್ಟಿಕೊಳ್ಳಲು ಪೂರಕವಾಗುತ್ತದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಕಟೀಲು ಕ್ಷೇತ್ರದ ವೇದಮೂರ್ತಿ ಹರಿನಾರಾಯಣ ದಾಸ ಅಸ್ರಣ್ಣ ಮಾತನಾಡಿ, ವಿಭಿನ್ನ ಅಭಿರುಚಿಯ ಪ್ರೇಕ್ಷಕರ ಮಧ್ಯೆ ಭಾರತೀಯ ಪರಂಪರೆಯ ಸಂಸ್ಕೃಯನ್ನು ವಿಸ್ತರಿಸುವ ಕಲಾ ಪ್ರಕಾರಗಳನ್ನು ಮಾತ್ರ ಬಿಂಬಿಸುವ ನಾಟ್ಯೋತ್ಸವ ಭಾರತೀಯತೆಯನ್ನು ಪ್ರದರ್ಶಿಸುತ್ತದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಯಕ್ಷಗಾನವು ಅಂತಾರಾಷ್ಟ್ರೀಯ ಕಲೆಯಾಗಿದ್ದು ಅದನ್ನು ಉಳಿಸಿ ಬೆಳೆಸಿ, ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹೇಳಿದರು.

    ದೇಶದ ವಿವಿಧೆಡೆಯಿಂದ ಕಲಾ ಪ್ರಕಾರಗಳನ್ನು ಆಮಂತ್ರಿಸಿ ಪ್ರದರ್ಶಿಸುವ ನಾಟ್ಯೋತ್ಸವವು ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ನಾಟ್ಯೋತ್ಸವವಾಗಿದೆ. ಕಲೆಗೆ ಪೋ›ತ್ಸಾಹ ನೀಡುವ ಕೆಲಸ ಎಲ್ಲರಿಂದ ಆಗಬೇಕು ಎಂದರು.

    ಯಕ್ಷಗಾನ ಕಲಾವಿದ, ಸಂಘಟಕ ಪ್ರಭಾಕರ ಹೆಗಡೆ ಚಿಟ್ಟಾಣಿ, ಕೆ.ಎಸ್. ರಾಜಾರಾಮ್ ಕಿಲಾರ, ಮದ್ದಲೆ ವಾದಕ ನಾಗೇಶ ಭಂಡಾರಿ ಇಡಗುಂಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನೃತ್ಯ ಕಲಾ ಪರಷತ್ತಿನ ಅಧ್ಯಕ್ಷ ಸಾಯಿ ವೆಂಕಟೇಶ, ಬರಹಗಾರ ಸೂರಾಲು ದೇವಿಪ್ರಸಾದ ತಂತ್ರಿ, ಗಣಪಯ್ಯ ಗೌಡ ಮಾತನಾಡಿದರು. ನಾಟ್ಯೋತ್ಸವದ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು ಕೆರೆಮನೆ ಶಿವಾನಂದ ಹೆಗಡೆ ವಂದಿಸಿದರು.

    ಉತ್ಸವಗಳು ಕಲೆಯನ್ನು ಬೆಳೆಸುವ, ಭಾರತೀಯತೆಯನ್ನು ಬಿಂಬಿಸುವ ತನ್ಮೂಲಕ ಸಂಸ್ಕೃಯ ಆರಾಧನೆಗೆ ಪೂರಕವಾಗಿರಬೇಕು. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ಮಧ್ಯೆ ಕಲೆಯ ಪ್ರತಿಭೆಯನ್ನು ಬೆಳೆಸುವ ಸೂಕ್ಷ್ಮತೆ ಎಲ್ಲರೂ ಅರಿತು ಸಮನ್ವಯತೆಯಲ್ಲಿ ಮುಂದುವರಿಯಬೇಕು. | ಡಾ. ಹರೀಶಕುಮಾರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts