More

    ಉ.ಕ. ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ ಸೆ. 5ರಂದು ಕುಮಟಾದಲ್ಲಿ ಪ್ರದಾನ

    ಕಾರವಾರ: ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಡಿಡಿಪಿಐ ಈಶ್ವರ ನಾಯ್ಕ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 9 ಸದಸ್ಯರುಳ್ಳ ಆಯ್ಕೆ ಸಮಿತಿ ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಯಿತು.
    ಸೆ. 5ರಂದು ಬೆಳಗ್ಗೆ 9.30ಕ್ಕೆ ಕುಮಟಾ ಕಲಭಾಗ ವಿದ್ಯಾಗಿರಿಯ ಕೊಂಕಣ ಎಜುಕೇಶನ್ ಟ್ರಸ್ಟ್​ನ ಸಿವಿಎಸ್​ಕೆ ಪ್ರೌಢಶಾಲಾ ಸಭಾಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಿಡಿಪಿಐ ಈಶ್ವರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರ ಶೇಜೆಬಾಗದ ಗೀತಾ ಎನ್. ರಾಣೆ, ಅಂಕೋಲಾ ವಜ್ರಳ್ಳಿಯ ವಿನಾಯಕ ಪಿ. ಾಯ್ಕ, ಕುಮಟಾ ಅಂತ್ರವಳ್ಳಿಯ ಕುಡ್ಲೆ ಶಾಲೆಯ ಶ್ರೀಕಾಂತ ಸುಬ್ರಾಯ ಹೆಗಡೆ, ಹೊನ್ನಾವರ ಕೆರೆಮನೆಯ ಶೋಭಾ ಶೇಟ್, ಭಟ್ಕಳ ತೂದಳ್ಳಿಯ ಮಹೇಶ ಸಿ. ತೆರನಮಕ್ಕಿ ಆಯ್ಕೆಯಾಗಿದ್ದಾರೆ.
    ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರ ಅಂಗಡಿಯ ವಿನುತಾ ಗೋವಿಂದರಾಯ ನಾಯಕ, ಅಂಕೋಲಾ ಅವರ್ಸಾ ಮಾದರಿ ಗಂಡುಮಕ್ಕಳ ಶಾಲೆಯ ಲಕ್ಷ್ಮೀ ಎನ್. ನಾಯಕ, ಕುಮಟಾ ಗುಡಿಗಾರಗಲ್ಲಿ ಮಾದರಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯ ಮಂಜುನಾಥ ಎಂ. ನಾಯ್ಕ, ಹೊನ್ನಾವರ ನಗರೆ ನಂ. 1 ಶಾಲೆಯ ಗಣಪತಿ ಅಮಕೂಸ ಗೌಡ, ಭಟ್ಕಳ ಗಡಿಮುಂಡ್ಕಿ ಶಾಲೆಯ ಈಶ್ವರ ವೆಂಕಟರಮಣ ಹೆಗಡೆ ಆಯ್ಕೆಯಾಗಿದ್ದಾರೆ.
    ಪ್ರೌಢಶಾಲಾ ವಿಭಾಗದಲ್ಲಿ ಕಾರವಾರ ಅಸ್ನೋಟಿ ಶಿವಾಜಿ ವಿದ್ಯಾಮಂದಿರದ ಇಂಗ್ಲಿಷ್ ಶಿಕ್ಷಕ ತಿಪ್ಪೆಸ್ವಾಮಿ ಜಿ.ಬಿ. ಅಂಕೋಲಾ ಕೇಣಿಯ ಸರ್ಕಾರಿ ಪ್ರೌಢಶಾಲೆಯ ಹಿಂದಿ ಭಾಷಾ ಶಿಕ್ಷಕಿ ವಿಜಯಾ ಎಚ್. ಗಾಂವಕರ್, ಕುಮಟಾ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್​ನ ಮಹಾದೇವ ಬೊಮ್ಮು ಗೌಡ, ಹೊನ್ನಾವರ ಸೇಂಟ್ ಥಾಮಸ್ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್.ವೈ. ಬೈಲೂರು, ಭಟ್ಕಳ ಐಎಯುಎಚ್​ಎಸ್​ನ ದೈಹಿಕ ಶಿಕ್ಷಕ ರಾಜೇಸಾಬ ನಿಪ್ಪಾಣಿ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts