More

    ಉಳ್ಳವರು ಬಡವರಿಗೆ ದಾನ ಮಾಡಲಿ

     ಚಿಕ್ಕಮಗಳೂರು: ದುಡಿಮೆಯ ಒಂದಿಷ್ಟನ್ನು ಸಮಾಜದ, ದೇಶದ ಒಳಿತಿಗೆ ಉಳ್ಳವರು ಬಳಕೆ ಮಾಡಬೇಕು. ಅದರಿಂದ ಎಷ್ಟೋ ಜನರ ಕಣ್ಣೀರು ನೀಗಿಸಿದ ತೃಪ್ತಿ ದೊರೆಯುತ್ತದೆ ಎಂದು ಸಮಾಜಸೇವಕ ಡಾ.ರೋನಾಲ್ಡ್ ಕೊಲಾಸೋ ಹೇಳಿದರು.

    ಹಿರೇಮಗಳೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

    ಪ್ರಶಸ್ತಿ, ಸನ್ಮಾನಗಳ ಬಗ್ಗೆ ನನಗೆ ಆಸಕ್ತಿ ಇಲ್ಲ. ಗಳಿಸಿದ ಆದಾಯದಲ್ಲಿ ಒಂದಷ್ಟು ಪಾಲನ್ನು ಸಮಾಜಸೇವಾ ಕಾರ್ಯಗಳಿಗೆ ಬಳಕೆ ಮಾಡುವುದು ನನ್ನ ಮುಖ್ಯ ಉದ್ದೇಶ. ನನ್ನ ನಿಸ್ವಾರ್ಥ ಸೇವೆ ಗುರುತಿಸಿ ಲಂಡನ್​ನ ವಿಶ್ವ ದಾಖಲೆಯ ಪುಸ್ತಕದಲ್ಲಿ ನನ್ನ ಹೆಸರು ಮೂಡುವಂತೆ ಜನರೇ ಮಾಡಿದ್ದಾರೆ. ಫಲಾಪೇಕ್ಷೆ ಇಲ್ಲದ ಸೇವೆ ನನಗೆ ಆತ್ಮತೃಪ್ತಿ ತಂದುಕೊಡುತ್ತಿದೆ ಎಂದರು.

    ಗೌರವ ಅರ್ಪಿಸಿದ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ನಿಸ್ವಾರ್ಥ ಸಮಾಜಸೇವೆಗಾಗಿ ತೊಡಗಿಸಿಕೊಂಡಿರುವ ಡಾ.ರೋನಾಲ್ಡ್ ಕೊಲಾಸೋ ಅವರನ್ನು ವಿಶ್ವದಾಖಲೆಯ ಪುಸ್ತಕದ ಸಮಿತಿ ಸಮೀಕ್ಷೆ ಮೂಲಕ ಗುರುತಿಸಿ ಸೇರ್ಪಡೆ ಮಾಡಿದೆ. ಇದು ದೇಶಕ್ಕೆ ಮತ್ತು ಕನ್ನಡನಾಡಿಗೆ ಸಂದಿರುವ ದೊಡ್ಡ ಗೌರವ. ಆ ಗೌರವ ಸರ್ಕಾರಗಳು ಕೊಡ ಮಾಡುವ ಅತ್ಯುನ್ನತ ಪ್ರಶಸ್ತಿಗಳನ್ನು ಮೀರಿದ್ದಾಗಿದೆ ಎಂದರು.

    ಅಂತಾರಾಷ್ಟ್ರೀಯ ಕ್ರೖೆಸ್ತ ಒಕ್ಕೂಟಗಳ ಕರ್ನಾಟಕ ಕಾರ್ಯದರ್ಶಿ ಮೈಕಲ್ ಸದಾನಂದ ಬ್ಯಾಪ್ತಿಸ್ಟ್, ಸಂಯೋಜಕ ಡೆನ್ನಿಸ್ ಲೋಬೋ, ಅಂಬೇಡ್ಕರ್ ಯುವಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಸಿ.ಗಂಗಾಧರ್, ಕಾರ್ಯದರ್ಶಿ ಎಚ್.ಕೆ.ಜಯಣ್ಣ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಇ.ರಾಜಶೇಖರ್, ಯುವ ಮುಖಂಡ ಅಭಿ ಇತರರಿದ್ದರು.

    ಸಮಾಜಸೇವೆ, ಉದ್ಯಮ, ಶಿಕ್ಷಣ, ವಾಣಿಜ್ಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನಪರವಾಗಿ ಸೇವೆ ಸಲ್ಲಿಸಿರುವ ರೋನಾಲ್ಡ್ ಕೊಲಾಸೋ ಅವರಿಗೆ ಹಿರೇಮಗಳೂರಿನ ಯುವ ಮಿತ್ರರು ಗೌರವ ಅರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts