More

    ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ, ಸಚಿವ‌ ಸಿ.ಸಿ. ಪಾಟೀಲ ವಿಶ್ವಾಸ ವ್ಯಕ್ತ, ಸಿಂದಗಿಯಲ್ಲಿ 25 ಸಾವಿರ ಗೆಲುವಿನ ಅಂತರ

    ವಿಜಯಪುರ: ಸಿಂದಗಿ ಹಾಗೂ ಹಾನಗಲ್ಲ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು
    ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
    ಪ್ರಧಾನಿ‌ ಮೋದಿ, ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸಾಧನೆ ಪ್ರತಿಫಲವಾಗಿ ಮತದಾರರು ಬಿಜೆಪಿಗೆ ಆಶೀರ್ವಾದಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    100 ಕೋಟಿ ಗೂ ಅಧಿಕ ಲಸಿಕಾಕರಣ ಮಾಡುವ ಮೂಲಕ ಪ್ರಧಾ‌ನಿ ನರೇಂದ್ರ ಮೋದಿ ಕನಸು ಸಾಕಾರಗೊಳಿಸಿದ ವೈದ್ಯಕೀಯ ಸಿಬ್ಬಂದಿ‌ ಸಾಧನೆಗೆ ಅಭಿನಂದಿಸುವೆ.
    ಕೃಷಿ ಸಮ್ಮಾನ ಯೋಜನೆಯಡಿ 10 ಸಾವಿರ ರೂ. ರೈತರ ಖಾತೆಗೆ ನೇರವಾಗಿ ಜಮೆ ಮಾಡುತ್ತಿರುವುದು ಬಿಜೆಪಿ ಸಾಧನೆ. ಯಡಿಯೂರಪ್ಪ ಕಾಲದಲ್ಲಿ ಜಾರಿಗೆ ಬಂದ ಭಾಗ್ಯ ಲಕ್ಷ್ಮಿ ಯೋಜನೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ
    ಯಲ್ಲಿ ಎಸ್ ಸಿಪಿ, ಟಿಎಸ್ ಪಿ ಯೋಜನೆಯಡಿ ಅನೇಕ ಕಾರ್ಯಕ್ರಮಗಳನ್ನು ಒದಗಿಸಲಾಗಿದೆ.
    ಬೊಮ್ಮಾಯಿ ಅವರು 16397 ವಿವಿಧ ಹುದ್ದೆಗಳಿಗೆ ನೇಮಕ ಮಾಡಿದ್ದು ದಾಖಲೆಯೇ ಸರಿ ಎಂದರು.
    ಗ್ರಾಮೀಣಾಭಿವೃದ್ಧಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ಕೊಡಲಾಗುತ್ತಿದೆ ಎಂದರು.
    ಕಳೆದ ಮೂರ್ನಾಲ್ಕು ವರ್ಷಗಳಿಂದ ಬಿದ್ದ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು ಡಿಸೆಂಬರ್ ಒಳಗಾಗಿ ರಸ್ತೆ ಅಭಿವೃದ್ಧಿ ಗೆ ಚಾಲನೆ ನೀಡಲಾಗುವುದು. ಈ ಎಲ್ಲ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಬಿಜೆಪಿ ಪರ ಮತ ಯಾಚಿಸುತ್ತಿದ್ದೇವೆ ಎಂದರು.
    ಬಸವರಾಜ ಬೊಮ್ಮಾಯಿ 12 ಗ್ರಾಮಗಳಲ್ಲಿ ನಡೆಸಿದ ರೋಡ್ ಶೋ ದಾಖಲೆ‌ ಮೆರೆದಿದೆ. ಸುಮಾರು 10 ಸಾವಿರ ಜನರನ್ನು ತಲುಪಿದ್ದೇವೆ ಎಂದರು.
    ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳ ಪ್ರತಿಫಲವಾಗಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
    ಕರ್ನಾಟಕದ ರಸ್ತೆಗಳ ಬಗ್ಗೆ ಸಿಎಂ ಬೊಮ್ಮಯಿ ಅವರ ಗಮನಕ್ಕೂ ಬಂದಿದೆ. ನಾನು ಲೋಕೋಪಯೋಗಿ ಇಲಾಖೆ ಸಚಿವನಾಗಿ ಎಲ್ಲ ರಸ್ತೆಗಳ ಅಭಿವೃದ್ಧಿ ಗೆ ಗಮನ ಹರಸಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾಗಿ ತಿಳಿಸಿದರು.
    ರಸ್ತೆಗಳ ರಿಪೇರಿಗೆ ಸಂಬಂಧಿಸಿದಂತೆ
    ಹೈಕೋರ್ಟ್ ಛೀಮಾರಿ ಹಾಕುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,
    ರಾಜ್ಯದ ರಸ್ತೆಗಳು ಹದಗೆಟ್ಟಿದ್ದು ನಿಜ. ಇದನ್ನು ಒಪ್ಪಿಕೊಳ್ಳಬೇಕು. ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

    ಪಂಚಮಸಾಲಿ‌ ಮೀಸಲಾತಿ‌ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷ ಸಕಾರಾತ್ಮಕ ವಾಗಿ ಸ್ಪಂದಿಸುತ್ತಿದೆ. ಇದರಲ್ಲಿ ರಾಜಕೀಯ ಬೇಡ ಎಂದರು.
    ಚುನಾವಣೆಗಳನ್ನು ತತ್ವ ಸಿದ್ದಾಂತದ ಆಧಾರದ ಮೇಲೆ ಎದುರಿಸಬೇಕೆ ವಿನಃ ವೈಯಕ್ತಿಕ ಟೀಕೆ ಟಿಪ್ಪಣೆಗಳ ಆಧಾರದ ಮೇಲೆ ಅಲ್ಲ ಎಂದು ಎಲ್ಲ ಪಕ್ಷಗಳ ರಾಜ್ಯ ನಾಯಕಾರ ವೈಯಕ್ತಿಕ ಟೀಕೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.
    ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts