More

    ಉಪ್ಪಿನಬೆಟಗೇರಿ- ಸಂಗ್ರೇಶಕೊಪ್ಪ ರಸ್ತೆ ಕಾಮಗಾರಿಗೆ ಚಾಲನೆ

    ಉಪ್ಪಿನಬೆಟಗೇರಿ: ಉಪ್ಪಿನಬೆಟಗೇರಿ- ಸಂಗ್ರೇಶಕೊಪ್ಪ ರಸ್ತೆ ದುರಸ್ತಿಗೆ ಶಾಸಕ ಅಮೃತ ದೇಸಾಯಿ ಅವರು 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಗೆ ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ ಚಾಲನೆ ನೀಡಿದರು.

    ಕಳೆದ ಆಗಸ್ಟ್​ನಲ್ಲಿ ಸುರಿದ ಮಳೆಗೆ ಉಪ್ಪಿನಬೆಟಗೇರಿ- ಸಂಗ್ರೇಶಕೊಪ್ಪ ಪ್ರಮುಖ ರಸ್ತೆ ಕಿತ್ತು ಹೋಗಿತ್ತು. ರಸ್ತೆಯ ಎರಡೂ ಬದಿಯಲ್ಲಿ ಮುಳ್ಳಿನ ಕಂಟಿಗಳು ಬೆಳೆದಿದ್ದರಿಂದ ಹೊಲಗಳಿಗೆ ಹೋಗುವ ರೈತರಿಗೆ ಹಾಗೂ ಸಂಗ್ರೇಶಕೊಪ್ಪಕ್ಕೆ ತೆರಳುವ ಜನರಿಗೆ ಬಹಳ ತೊಂದರೆಯಾಗಿತ್ತು.

    ರಸ್ತೆ ದುರಸ್ತಿ ಮಾಡಿಸಬೇಕೆಂದು ಹನುಮನಾಳ ಹಾಗೂ ಉಪ್ಪಿನಬೆಟಗೇರಿ ಗ್ರಾಮಗಳ ರೈತರು ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು. ರೈತರ ಮನವಿಗೆ ಸ್ಪಂದಿಸಿದ ಶಾಸಕ ಅಮೃತ ದೇಸಾಯಿ ಅವರು ರೈತರ ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಾತ್ಕಾಲಿಕವಾಗಿ 5 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಿದ್ದಾರೆ. ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ, ನಮ್ಮ ಪಂಚಾಯಿತಿ ವತಿಯಿಂದ ರಸ್ತೆ ದುರಸ್ತಿಗೆಂದು ಯೋಜನೆ ರೂಪಿಸಿ ಅನುದಾನ ತರಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಮುಖಂಡ ಮಂಜುನಾಥ ಸಂಕಣ್ಣವರ, ಗ್ರಾಪಂ ಸದಸ್ಯ ಜ್ಯೋತೆಪ್ಪ ಜಾಧವ, ಬಾಬುಸಾಬ್ ಶಾನವಾಡ, ವೀರಯ್ಯ ಜವಳಿಮಠ, ಕೃಷ್ಣಾ ಬುದ್ನಿ, ಶಿವಾನಂದ ಕಡಗದ, ಶ್ರೀಶೈಲಯ್ಯ ಗೌರಿಮಠ, ದೇವೇಂದ್ರಪ್ಪ ಅಂಗಡಿ, ಮಡಿವಾಳಪ್ಪ ಪಟ್ಟಣಶೆಟ್ಟಿ, ಉಪ್ಪಿನಬೆಟಗೇರಿ, ಹನುಮನಾಳ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts