More

    ಉದ್ಯಾನದಲ್ಲಿ ಬೆಳೆದಿದ್ದ ಉಳ್ಳಾಗಡ್ಡಿ ತೆರವು

    ರಾಣೆಬೆನ್ನೂರ: ಇಲ್ಲಿಯ ವಿಶ್ವ ಬಂಧು ನಗರದ ಉದ್ಯಾನದಲ್ಲಿ ಖಾಸಗಿಯವರು ಬೆಳೆದಿದ್ದ ಉಳ್ಳಾಗಡ್ಡಿ, ಬೆಳ್ಳುಳ್ಳಿ ಬೆಳೆಯನ್ನು ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾನುವಾರ ತೆರವುಗೊಳಿಸಿದರು.

    ನಗರದ ಕೆಲ ಉದ್ಯಾನಗಳು ಖಾಸಗಿಯವರ ಪಾಲಾಗಿದ್ದರೆ, ಇನ್ನು ಕೆಲವು ಜನಬಳಕೆಯಿಂದ ದೂರ ಉಳಿಯುವಂತಾಗಿದೆ. ಈ ಕುರಿತು ವಿಜಯವಾಣಿ ಫೆ. 21ರಂದು ‘ಉದ್ಯಾನದಲ್ಲಿ ಉಳ್ಳಾಗಡ್ಡಿ, ಬೆಳ್ಳುಳ್ಳಿ’ ಕೃಷಿ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ಕುರಿತು ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ವಿಶ್ವ ಬಂಧು ನಗರದ ಉದ್ಯಾನದಲ್ಲಿ ಬೆಳೆದಿದ್ದ ಉಳ್ಳಾಗಡ್ಡಿ, ಬೆಳ್ಳುಳ್ಳಿಯನ್ನು ತೆರವುಗೊಳಿಸಿದ್ದಾರೆ.

    ಆದರೆ, ಕೆಲ ವಾರ್ಡ್​ಗಳಲ್ಲಿ ಉದ್ಯಾನದಲ್ಲಿಯೇ ಕಟ್ಟಡ ನಿರ್ವಿುಸಿಕೊಂಡು ಕೆಲವರು ವಾಸಿಸುತ್ತಿದ್ದಾರೆ. ಇನ್ನು ಕೆಲವು ಸಂಪೂರ್ಣ ತ್ಯಾಜ್ಯ ತುಂಬಿಕೊಂಡು ಬಳಕೆಗೆ ಬಾರದ ಸ್ಥಿತಿಯಲ್ಲಿವೆ. ಕೂಡಲೆ ಅವುಗಳನ್ನು ಸರಿಪಡಿಸಬೇಕು. ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts