More

    ಉದ್ಯಮಿ ಕೊಲೆ ಆರೋಪಿಗಳು ಅರೆಸ್ಟ್

    ಕಲಬುರಗಿ: ಗೋದುತಾಯಿ ಕಾಲನಿ ಶಿವ ಮಂದಿರ ಹತ್ತಿರ ಆ.27ರಂದು ಉದ್ಯಮಿ ಸುನೀಲ್ ರಂಕಾ (42) ಎಂಬುವರನ್ನು ಗುಂಡಿಕ್ಕಿ ಕೊಲೆ ಮಾಡಿ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಅಶೋಕ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಒಳಗಾಗಿದ್ದ ಮತ್ತು ಪೊಲೀಸರಿಗೆ ಸವಾಲಾಗಿದ್ದ ಪ್ರಕರಣವನ್ನು ಭೇದಿಸಿದಂತಾಗಿದೆ.
    ಹಂತಕರ ಬಗ್ಗೆ ಸುಳಿವು ಸಿಗದೆ ಕೈಚೆಲ್ಲುವ ಹಂತದಲ್ಲಿರುವಾಗ ಸಣ್ಣದೊಂದು ಮಾಹಿತಿ ಜಾಡು ಅರಸಿ ಚಾಣಾಕ್ಷತೆ ಮತ್ತು ತಂತ್ರಜ್ಞಾನ ನೆರವಿನಿಂದ ಪ್ರಕರಣವನ್ನು ಇನ್ಸ್ಪೆಕ್ಟರ್ ಪಂಡಿತ ಸಗರ ನೇತೃತ್ವದ ತನಿಖಾ ತಂಡ ಪತ್ತೆ ಮಾಡಿದೆ.
    ಬಿದ್ದಾಪುರ ಕಾಲನಿ ಅಂಬರೀಶ್ ರಾಠೋಡ್, ಶರಣಸಿರಸಗಿ ತಾಂಡಾದ ರಾಜಶೇಖರ ಅಲಿಯಾಸ್ ಶೇಖರ್ ರಾಠೋಡ್, ವಿಜಯಪುರ ಜಿಲ್ಲೆ ಖತೀಜಾಪುರದ ನಾಮದೇವ ಲೋಣಾರಿ ಮತ್ತು ಹಡಗಿಲ್ ಹಾರುತಿ ಗ್ರಾಮದ ಗುಂಡು ರಾಠೋಡ್ ಅವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಬೈಕ್, 75 ಸಾವಿರ ರೂ.ನಗದು, 4 ಮೊಬೈಲ್ಗಳನ್ನು ವಶಪಡಿಸಿಕೊಂಡಿದೆ. ಇನ್ನು ಗುಂಡು ಹಾರಿಸಿದ್ದ ಪಿಸ್ತೂಲ್ ವಿಜಯಪುರ ಪೊಲೀಸರು ಜಪ್ತಿ ಮಾಡಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
    ಕಲಬುರಗಿ ಜೇವಗರ್ಿ ಕ್ರಾಸ್ ಬಳಿಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ತನ್ನ ಅಂಗಡಿಯಿಂದ ಹಣದ ಬ್ಯಾಗ್ ತೆಗೆದುಕೊಂಡು ಸುನೀಲ್ ಆ.27ರಂದು ಸಂಜೆ ಗೋದುತಾಯಿ ನಗರದ ಶಿವ ಮಂದಿರ ಹತ್ತಿರ ಬಾಡಿಗೆ ಮನೆಗೆ ಹೋಗಿ ದ್ವಿಚಕ್ರ ವಾಹನ ನಿಲ್ಲಿಸುತ್ತಿದ್ದಾಗ ಬೈಕ್ನಲ್ಲಿ ಬಂದ ಮೂವರು ಹಣದ ಬ್ಯಾಗ್ ಕಿತ್ತುಕೊಂಡು ಎದೆಗೆ ಗುಂಡು ಹೊಡೆದು ಪರಾರಿಯಾಗಿದ್ದರು.
    ತನಿಖೆ ತೀವ್ರಗೊಳಿಸಿದಾಗ ಪೊಲೀಸರಿಗೆ ಸಿಕ್ಕ ಮಾಹಿತಿಯಂತೆ ಕೊಲೆಯಾದ ಸುನೀಲ್ ಅಂಗಡಿ ಪಕ್ಕದ ಗ್ರಾನೈಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬರೀಶ್ ರಾಠೋಡ್ ಎಂಬಾತನೇ ಸ್ಕೆಚ್ ಹಾಕಿ ಸ್ನೇಹಿತರಾದ ರಾಜಶೇಖರ, ಗುಂಡು ಮತ್ತು ಸಂಬಂಧಿಕ ನಾಮದೇವ ಜತೆ ಸಂಚು ರೂಪಿಸಿದ್ದ ಎಂಬುದು ಬೆಳಕಿಗೆ ಬಂದಿದೆ.
    ಪೊಲೀಸ್ ಕಮೀಷನರ್ ಎನ್.ಸತೀಶಕುಮಾರ್, ಡಿಸಿಪಿಗಳಾದ ಕಿಶೋರಬಾಬು, ಶ್ರೀಕಾಂತ ಕಟ್ಟಿಮನಿ ಮಾರ್ಗದರ್ಶನ ಮತ್ತು ಇನ್ಸ್ಪೆಕ್ಟರ್ ಪಂಡಿತ ಸಂಗರ ನೇತೃತ್ವದಲ್ಲಿ ಪಿಎಸ್ಐ ವಾಹಿದ್ ಕೋತ್ವಾಲ್, ಸಿಬ್ಬಂದಿ ಗುರುಮೂರ್ತಿ , ಸಂಜುಕುಮಾರ, ಮಲ್ಲಿಕಾರ್ಜುನ, ಶಿವಲಿಂಗ, ಶರಣಗೌಡ ಪಾಟೀಲ್, ಶಿವಶರಣಪ್ಪ, ಪ್ರಲ್ಹಾದ ಹಾಗೂ ಬ್ರಹ್ಮಪುರ ಠಾಣೆ ಇನ್ಸ್ಪೆಕ್ಟರ್ ಕಪಿಲ್ದೇವ್ ಮತ್ತು ಸ್ಟೇಷನ್ ಬಜಾರ್ ಠಾಣೆ ಪಿಐ ಸಿದ್ರಾಮೇಶ್ವರ ಗಡದ ಹಾಗೂ ಮೂರು ಠಾಣೆ ಮೂರು ತಿಂಗಳ ಬಳಿಕ ಪ್ರಕರಣವನ್ನು ಬೇಧಿಸಿದ್ದಾರೆ. ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖಾ ತಂಡದ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲಬುರಗಿ, ಆರೋಪಿಗಳ ಬಂಧನ, ಪೊಲೀಸ್​ ಕಾರ್ಯಚರಣೆ, ಯಶಸ್ವಿ, kalaburagi, Police action, successful, Detention of accused

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts