More

    ಉದ್ಘಾಟನೆಗೊಂಡರೂ ಪ್ರಾರಂಭವಾಗದ ಆಸ್ಪತ್ರೆ

    ಕೆ.ಗವಿಸಿದ್ದೇಶ ಹೊಗರಿ ಕಕ್ಕೇರಾ
    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಮಾರ್ಚ್ 19ರಂದು ದೇವತ್ಕಲ್ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಗೊಂಡರೂ ಹೊಸ ಕಟ್ಟಡದಲ್ಲಿ ರೋಗಿಗಳಿಗೆ ಸೇವೆ ಒದಗಿಸುವಲ್ಲಿ ಆರೋಗ್ಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

    50 ವರ್ಷಗಳ ಹಿಂದಿನ ಮೈಸೂರು ಸರ್ಕಾರ ಇದ್ದಾಗ ಆಗಿನ ಆರೋಗ್ಯ ಮಂತ್ರಿಯಾಗಿದ್ದ ಸಿದ್ದವೀರಪ್ಪನವರಿಂದ 1972ರ ಸೆಪ್ಟೆಂಬರ್ 2ರಂದು ಲೋಕಾರ್ಪಣೆಯಾಗಿದ್ದ ಬಹು ಹಳೆಯ ಕಟ್ಟಡವನ್ನು ನೆಲಸಮ ಮಾಡಿ ಶಾಸಕ ನರಸಿಂಹ ನಾಯಕರ ಇಚ್ಚಾಶಕ್ತಿಯಿಂದ 2.80 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ನವೆಂಬರ್ 2020ರಲ್ಲಿ ಚಾಲನೆ ನೀಡಲಾಗಿತ್ತು. ಇದೇ ಮಾ.19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವತ್ಕಲ್ ಗ್ರಾಮಕ್ಕೆ ಬಂದು ಕಕ್ಕೇರಾ ಆರೋಗ್ಯ ಕೇಂದ್ರವನ್ನು ಸಹ ಉದ್ಘಾಟನೆ ಮಾಡಿದ್ದರು.
    ಅಧಿಕಾರಿಗಳ ನಿರ್ಲಕ್ಷೃ: ಉದ್ಘಾಟನೆಗೊಂಡು ಒಂದು ವಾರವಾದರೂ ಜನಪ್ರತಿನಿಧಿಗಳ ಹಾಗೂ ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸ್ಥಳೀಯ ಸಿಬ್ಬಂದಿ ಹೊಸ ಕಟ್ಟಡಕ್ಕೆ ಶಿಫ್ಟ್ ಆಗದೆ ವಸತಿಗೃಹಗಳಲ್ಲೇ ರೋಗಿಗಳ ಸೇವೆ ನೀಡುತ್ತಿರುವುದು ವಿಪರ್ಯಾಸ.

    ಖಾಯಂ ವೈದ್ಯರಿಲ್ಲ: ಆಸ್ಪತ್ರೆ ಉದ್ಘಾಟನೆ ಮರುದಿನವೇ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ಸೈಯ್ಯದಾ ನಾಜೀಮಾ ಮೊಹಸೀನ್ ಹೆಚ್ಚಿನ ವ್ಯಾಸಂಗಕ್ಕಾಗಿ ತೆರಳಿದ್ದರಿಂದ ಪ್ರಭಾರ ಆಡಳಿತ ವೈದ್ಯಾಧಿಕಾರಿಗಳಾಗಿ ಯಾರೊಬ್ಬ ವೈದ್ಯರು ಆಗಮಿಸಿಲ್ಲ. ಆಯುಷ್ಯ ವೈದ್ಯರಿಬ್ಬರೇ ರೋಗಿಗಳಿಗೆ ಸೇವೆ ನೀಡುತ್ತಿದ್ದಾರೆ. ಅಲ್ಲದೆ ಕಳೆದ 15 ವರ್ಷಗಳಿಂದ ಆಸ್ಪತ್ರೆ ವೈದ್ಯರಿಗೆ ವಾಹನಗಳಿಲ್ಲ. ಈ ಮೊದಲಿದ್ದ ಮೂರು ವಾಹನಗಳಿಗೆ ತುಕ್ಕು ಹಿಡಿದು ಆಸ್ಪತ್ರೆ ಆವರಣದಲ್ಲಿ ಕೆಟ್ಟು ನಿಂತಿವೆ. ಇದರಿಂದ ತುತರ್ಾಗಿ ತೆರಳುವ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಸಕರ್ಾರದ ವಾಹನ ಸೌಲಭ್ಯ ಇಲ್ಲದಂತಾಗಿದೆ.

    ನೂತನ ಕೇಂದ್ರದ ವಿಶೇಷತೆ: ಸಾವಿರ ಚಮೀ. ವ್ಯಾಪ್ತಿಯ ಕಟ್ಟ ವಿಸ್ತೀರ್ಣದಲ್ಲಿ 534 ಚಮೀ. ಆರೋಗ್ಯ ಕೇಂದ್ರ, 104 ಚಮೀ. ವೈದ್ಯಾಧಿಕಾರಿಗಳ ವಸತಿಗೃಹ, 137 ಚಮೀ. ಶ್ರುಶೂಕಿಯರ ವಸತಿಗೃಹ, 86 ಚಮೀ.ನಲ್ಲಿ ಗ್ರೂಪ್ ಡಿ ವಸತಿಗೃಹ ಹಾಗೂ ಸುಸಜ್ಜಿತವಾದ ಶಸ್ತ್ರ ಚಿಕಿತ್ಸಾ ವಿಭಾಗ ಮತ್ತು ಹೆರಿಗೆ ಕೊಠಡಿ, 3 ಹಾಸಿಗೆ ಪುರುಷರ ವಾರ್ಡ್​ ಹಾಗೂ 3 ಹಾಸಿಗೆಯ ಮಹಿಳೆಯರ ವಾರ್ಡ್​, ಶ್ರುಶೂಕಿಯರ ಸಭಾಂಗಣ, ಕಚೇರಿ, ವೈದ್ಯಾಧಿಕಾರಿಗಳ ಹಾಗೂ ತಪಾಸಣೆ ಕೊಠಡಿಗಳು, ಉಗ್ರಾಣ, ಲ್ಯಾಬ್, ನೀರು ಸರಬರಾಜು ಮತ್ತು ಒಳಚರಂಡಿ, ಒಳ ಮತ್ತು ಹೊರ ವಿದ್ಯುತ್ ಸಂಪರ್ಕ, ಸೋಲಾರ್ ವಾಟಾರ್ ಹೀಟರ್, 5 ಕೆವಿ ಡಿ.ಜಿ ಸೆಟ್, ಬೋರವೆಲ್ ಮತ್ತು ಪಂಪ್ಸೆಟ್, ಪುರುಷರ ಹಾಗೂ ಮಹಿಳೆಯರ ಶೌಚಗೃಹ ಸೇರಿ ಅನೇಕ ಸೌಲಭ್ಯಗಳನ್ನು ಹೊಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts