More

    ಉತ್ಸಾಹಿ ಶಿಕ್ಷಕರಿಂದ ಸತ್ಪ್ರಜೆಗಳ ನಿರ್ಮಾಣ

    ದಾವಣಗೆರೆ: ಶಿಕ್ಷಕರು ಉತ್ಸಾಹಭರಿತರಾಗಿ ಕಾರ್ಯ ನಿರ್ವಹಿಸಿದರೆ ಉತ್ತಮ ಪ್ರಜೆಗಳನ್ನು ರೂಪಿಸಬಹುದು ಎಂದು
    ಡಿಐಜಿ ರಾಮಕೃಷ್ಣ ಪ್ರಸಾದ್ ಹೇಳಿದರು.
    ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಗೆ ಗುರುವಾರ ಭೇಟಿ ನೀಡಿ ಮಾತನಾಡಿದರು.
    ಶಿಕ್ಷಣ ವಂಚಿತರು ಸಮಾಜದ್ರೋಹಿಗಳಾದರೆ ಶಿಕ್ಷೆ ಎಂಬ ದಂಡದ ಮೂಲಕ ಸರಿದಾರಿಗೆ ತರುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು.
    ಸಮಾಜದಲ್ಲಿ ಶಿಕ್ಷಕರ ಪಾತ್ರ ಅತಿ ಅಮೂಲ್ಯವಾದದ್ದು.ಅವರು ನಿರಂತರ ಕಲಿಕಾರ್ಥಿಗಳಾಗಿರಬೇಕು ಮತ್ತು ವಿಷಯದ ಮೇಲೆ ಪ್ರಭುತ್ವ ಹೊಂದಿ ಉತ್ತಮವಾಗಿ ಬೋಧಿಸುವ ಕೈಂಕರ್ಯದಲ್ಲಿ ತೊಡಗಬೇಕು ಎಂದು ತಿಳಿಸಿದರು.
    ಡಿವೈಎಸ್ಪಿ ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲ ಯತೀಶ್ ಹಾಗೂ ಶಿಕ್ಷಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts