More

    ಉತ್ತರಕನ್ನಡ ಜಿಲ್ಲೆಯಲ್ಲಿ 51 ಜನರಿಗೆ ಕರೊನಾ

    ಕಾರವಾರ: ಜಿಲ್ಲೆಯಲ್ಲಿ ಶನಿವಾರ 51 ಜನರಿಗೆ ಹೊಸದಾಗಿ ಕರೊನಾ ಸೋಂಕು ತಗುಲಿದ್ದು, 67 ಜನರು ರೋಗದಿಂದ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

    ಮುಂಡಗೋಡ ಮತ್ತು ಕಾರವಾರದಲ್ಲಿ ತಲಾ 5, ಅಂಕೋಲಾ, ಯಲ್ಲಾಪುರ ಮತ್ತು ಶಿರಸಿಯಲ್ಲಿ ತಲಾ 2, ಕುಮಟಾದಲ್ಲಿ 14, ಹಳಿಯಾಳ ಮತ್ತು ದಾಂಡೇಲಿಯಲ್ಲಿ 13, ಜೊಯಿಡಾದಲ್ಲಿ 4, ಹೊನ್ನಾವರದಲ್ಲಿ 1, ಭಟ್ಕಳದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ.

    ಕಾರವಾರದಲ್ಲಿ 17, ಹೊನ್ನಾವರದಲ್ಲಿ 11, ಭಟ್ಕಳದಲ್ಲಿ 15, ಹಳಿಯಾಳದಲ್ಲಿ 13, ಯಲ್ಲಾಪುರದಲ್ಲಿ 2, ಕುಮಟಾದಲ್ಲಿ 4, ಶಿರಸಿಯಲ್ಲಿ 5 ಜನರು ಬಿಡುಗಡೆಯಾಗಿದ್ದಾರೆ. ಒಟ್ಟಾರೆ 14 ಜನರಿಗೆ ಜ್ವರದ ಲಕ್ಷಣ (ಐಎಲ್​ಐ)ಕಾಣಿಸಿಕೊಂಡಿದೆ. ಹೊರ ಊರಿನಿಂದ ಬಂದ 6 ಜನರಿಗೆ ಹಳಿಯಾಳದಲ್ಲಿ ವಿದೇಶದಿಂದ ಬಂದ ಒಬ್ಬ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 8 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಒಟ್ಟಾರೆ ಸೋಂಕಿತರದಲ್ಲಿ ನಾಲ್ವರು ಮಕ್ಕಳು, ಸಾಲ್ವರು ವೃದ್ಧರಿದ್ದಾರೆ.

    ಮೂರು ದಿನ ಪರೀಕ್ಷೆ ಇಲ್ಲ: ನೌಕರನಿಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮೂರು ದಿನಗಳ ಮಟ್ಟಿಗೆ ಇಲ್ಲಿನ ಕ್ರಿಮ್್ಸ ಆಸ್ಪತ್ರೆಯ ಜೀವ ವಿಜ್ಞಾನ ಪ್ರಯೋಗಾಲಯ ಕೆಲಸ ಸ್ಥಗಿತ ಮಾಡಲಿದೆ. ಆ.3 ರ ಬೆಳಗ್ಗೆ 8 ರ ನಂತರ ಪ್ರಯೋಗಾಲಯ ಕಾರ್ಯನಿರ್ವಹಿಸಲಿದೆ ಎಂದು ನಿರ್ದೇಶಕ ಡಾ.ಗಜಾನನ ನಾಯಕ ತಿಳಿಸಿದ್ದಾರೆ.

    ಬಾಣಂತಿ, ಮಗು ಬಿಡುಗಡೆ: ಕರೊನಾ ಸೋಂಕಿದ್ದ ಸಮಯದಲ್ಲೇ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆಯಾಗಿದ್ದ ಕಾರವಾರದ 27 ವರ್ಷದ ಬಾಣಂತಿ ಸೋಂಕಿನಿಂದ ಗುಣ ಹೊಂದಿದ್ದು ಕ್ರಿಮ್್ಸ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮಗುವಿಗೆ ರೋಗ ತಗುಲಿಲ್ಲ. ಆರೋಗ್ಯವಾಗಿದೆ ಎಂದು ಕ್ರಿಮ್್ಸ ಪ್ರಕಟಣೆ ತಿಳಿಸಿದೆ.

    ಇಂದು ಲಾಕ್​ಡೌನ್ ಇಲ್ಲ
    ಕಾರವಾರ:
    ಆಗಸ್ಟ್ 2 ರಂದು ಜಿಲ್ಲೆಯಲ್ಲಿ ವಿಧಿಸಲಾಗಿದ್ದ ಭಾನುವಾರದ ಸಂಪೂರ್ಣ ಲಾಕ್​ಡೌನ್ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಆದೇಶದ ಮೇರೆಗೆ ಈ ಕ್ರಮ ವಹಿಸಲಾಗಿದ್ದು, ಜನ ಎಂದಿನಂತೆ ಕಾರ್ಯಚಟುವಟಿಕೆ ನಡೆಸಬಹುದು ಎಂದು ತಿಳಿಸಿದ್ದಾರೆ.

    ಕ್ವಾರಂಟೈನ್ ನಿಯಮ ಉಲ್ಲಂಘನೆ
    ಕುಮಟಾ:
    ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಓಡಾಟ ನಡೆಸಿದ ತಾಲೂಕಿನ ಚಿತ್ರಗಿ ಮೂಲದ ದಂಪತಿಯ ಮೇಲೆ ಕಂದಾಯ ನಿರೀಕ್ಷಕ ಪ್ರಶಾಂತ ದಿಗಂಬರ ನಾಯ್ಕ ಪ್ರಕರಣ ದಾಖಲಿಸಿದ್ದಾರೆ. ಜು.17 ರಂದು ದಂಪತಿಗೆ ಕರೊನಾ ಪಾಸಿಟಿವ್ ಕಂಡುಬಂದಿತ್ತು. ಜು.23 ರಂದು ಗುಣ ಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ನಂತರ 14 ದಿನ ಕ್ವಾರಂಟೈನ್ ವಿಧಿಸಲಾಗಿತ್ತು. ಆದರೆ, ಜು.31 ರಂದು ಕುಮಟಾ ಎಸಿ ಕಚೇರಿಗೆ ಬಂದು ಹೋಗಿದ್ದರು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts