More

    ಉತ್ತಮ ಶಿಕ್ಷಣ ನೀಡುವುದು ಅಗತ್ಯ

    ಹಾನಗಲ್ಲ: ಜಾಗತಿಕ ಮಟ್ಟದ ಸ್ಪರ್ಧೆಗೆ ಮಕ್ಕಳನ್ನು ಸಿದ್ಧಗೊಳಿಸಲು ಪ್ರಾಥಮಿಕ ಹಂತದಿಂದಲೇ ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಪಟ್ಟಣದ ಜನತಾ ಶಿಕ್ಷಣ ಸಂಸ್ಥೆಯಡಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ಆಕ್ಸಫರ್ಡ್ ಕಾನ್ವೆಂಟ್ ಶಾಲೆಯ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

    ದೇಶದಲ್ಲಿ 900 ವಿಶ್ವವಿದ್ಯಾಲಯಗಳಿದ್ದು, ಅವರೆಲ್ಲರೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಗುಣಮಟ್ಟ ಉನ್ನತೀಕರಿಸಲು ಆದ್ಯತೆ ನೀಡುತ್ತಿದ್ದಾರೆ. ಈಗ 5 ಉದ್ದೇಶಗಳನ್ನು ಹೊಂದಿ, 3ನೇ ಬಾರಿ ಶಿಕ್ಷಣ ನೀತಿ ಪರಿವರ್ತನೆಗೊಳಿಸಲಾಗಿದೆ. ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಕಾಮಗಾರಿಗಾಗಿ ನಮ್ಮ ನಿಧಿಯಿಂದ 10 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸುರೇಶ ರಾಯ್ಕರ್ ಮಾತನಾಡಿ, 2 ಕೋಟಿ ರೂ. ಅನುದಾನದಲ್ಲಿ ಸುಸಜ್ಜಿತ ಶೈಕ್ಷಣಿಕ ಸೌಲಭ್ಯಗಳುಳ್ಳ ಮೂರು ಅಂತಸ್ತಿನ ನೂತನ ಕಟ್ಟಡದಲ್ಲಿ ಕಾನ್ವೆಂಟ್ ಮಾದರಿಯ ವ್ಯವಸ್ಥೆ ನೀಡಲಾಗುತ್ತಿದೆ. 18 ಕೊಠಡಿಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಗೃಹ ನಿರ್ವಿುಸಲಾಗಿದೆ. ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗಿದೆ. ಆಡಿಟೋರಿಯಂ, ಸಭಾಭವನ, ನುರಿತ ಶಿಕ್ಷಕರಿದ್ದಾರೆ. ಸದ್ಯ ಎಲ್​ಕೆಜಿಯಿಂದ 6ನೇ ತರಗತಿವರೆಗೆ ಒಟ್ಟು 671 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಶೈಕ್ಷಣಿಕ ವಿಕಾಸಕ್ಕೆ ಹಲವು ಯೋಜನೆಗಳನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯ ನಿರ್ವಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು. ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸಂಸ್ಥೆಯ ಉಪಾಧ್ಯಕ್ಷ ಪಿ.ವೈ. ಗುಡಗುಡಿ ಮಾತನಾಡಿದರು.

    ಗಣ್ಯರಾದ ಎಂ.ಬಿ. ಕಲಾಲ, ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ, ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ಎಚ್.ಎಸ್. ಗೊಂದಿ, ದುಷ್ಯಂತ ನಾಗವಳ್ಳಿ, ನಿರ್ದೇಶಕರಾದ ಕಾಶೀನಾಥ ನ್ಯಾಮತಿ, ನಾಗೇಂದ್ರ ಬೊಮ್ಮನಹಳ್ಳಿ, ಮಾರುತಿ ಹರಿಹರ, ವಿನೋದ ಅಚಲಕರ, ಹನುಮಂತಪ್ಪ ಮಲಗುಂದ, ಎಚ್.ಎನ್. ಕಾಮನಹಳ್ಳಿ, ಉಮಾ ನಾಗರವಳ್ಳಿ, ಭದ್ರಪ್ಪ ಅಗಸಿಮನಿ, ಆರ್.ಎಂ. ತಿತ್ತಿ, ಕಾರ್ಯದರ್ಶಿ ಎಂ.ಎಚ್. ಬಳಿಗಾರ ಅತಿಥಿಗಳಾಗಿದ್ದರು. ಮುಖ್ಯಶಿಕ್ಷಕ ಕೆ. ಮಾಲತೇಶ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts